Advertisement

ಜೋಡಿ ಶ್ವಾನದೊಂದಿಗೆ ಪ್ರವಾಹ ದಾಟಿದ ಯುವಕ

09:24 AM Aug 08, 2019 | Sriram |

ಬಾಗಲಕೋಟೆ : ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಘಟಪ್ರಭಾ ನದಿಗೆ 1.72 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಘಟಪ್ರಭಾ ನದಿ ತುಂಬಿ, ಅತಿ ರಭಸವಾಗಿ ಹರಿಯುತ್ತಿದೆ. ತುಂಬಿ ಹರಿಯುತ್ತಿದ್ದ ನದಿಯಲ್ಲೇ ಓರ್ವ ಯುವಕ ಹಾಗೂ ಎರಡು ಶ್ವಾನಗಳು ಯಾದವಾಡ- ಮುಧೋಳ ನಡುವಿನ ಸೇತುವೆ ದಾಟಿ ಗಮನ ಸೆಳೆದಿವೆ.

Advertisement

ಮುಧೋಳ - ಯಾದವಾಡ ಸಂಪರ್ಕ ಸೇತುವೆ ಮುಳುಗಿ ಸೇತುವೆ ಮೇಲೆ ನೀರು ಹರಿಯುತ್ತಿರುವಾಗ ಮುಧೋಳದಿಂದ ಯಾದವಾಡದ ಕಡೆಗೆ ಎರಡು ನಾಯಿಗಳು ಸೇತುವೆ ಮಧ್ಯೆ ಭಾಗದಿಂದ ಈಜಿ ದಡಸೇರಿದವು. ಅಲ್ಲದೇ ಇದೇ ಸಂದರ್ಭದಲ್ಲಿ ಯಾದವಾಡದ ಕಡೆಯಿಂದ ಮುಧೋಳ ಕಡೆಗೆ ಸೇತುವೆಯ ಬದಿಯ ಕಂಬಗಳನ್ನು ಆಸರೆಯನ್ನಾಗಿ ಹಿಡಿದುಕೊಂಡು ಬಂದ ಯುವಕ ಗಮನ ಸೆಳೆದ. ಈ ಕಡೆಗೆದಾಟಿ ಬಂದ ತಕ್ಷಣ ಪೋಲಿಸರು ತರಾಟೆಗೆ ತೆಗೆದುಕೊಂಡ ತಕ್ಷಣ ಹೆದರಿದ ಯುವಕ ತನ್ನ ಹೆಸರನ್ನೂ ಹೇಳದೆ ತುರ್ತು ಕೆಲಸವಿತ್ತೆಂದು ಅಲ್ಲಿಂದ ತೆರಳಿದ.


ನಗರಸಭೆ ಸಿಬ್ಬಂದಿ ರಕ್ಷಿಸಿದ ಸೈನಿಕರು :
ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ಸೇತುವೆ ಬಳಿ ಕೃಷ್ಣಾ ನದಿಯಲ್ಲಿದ್ದ ಜಾಕವೆಲ್ ಗಳು ನೀರಿನಲ್ಲಿ ಮುಳುಗಿದ್ದು, ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಗರಸಭೆ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದ್ದರು. ಎನ್.ಡಿ.ಆರ್.ಎಫ್ ಸೈನಿಕರು ಧಾವಿಸಿ, ಮೂವರು ನಗರಸಭೆ ಸಿಬ್ಬಂದಿಯನ್ನು ಸುರಕ್ಷಿತವಾಗಿ ತಡಕ್ಕೆ ಕರೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next