Advertisement

ಬಡ್ತಿ ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ

11:52 AM Jul 26, 2017 | |

ಕೆ.ಆರ್‌.ಪುರ: ಉದ್ಯೋಗದಲ್ಲಿ ಬಡ್ತಿ ಸಿಗದಿದ್ದಕ್ಕೆ ಮನನೊಂದು ಕೆಫೆ ಕಾಫಿ ಡೇ ನೌಕರ “ನನ್ನ ಸಾವಿಗೆ ಕೆಪೆ ಕಾಫಿ ಡೇ’ ಕಾರಣ ಎಂದು ಡೆತ್‌ನೋಟ್‌ ಬರೆದು ನೇಣಿಗೆ ಶರಣಾಗಿರುವ ಘಟನೆ ಮಹದೇವಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಎ.ನಾರಾಯಣಪುರದಲ್ಲಿ ಮಂಗಳವಾರ ನಡೆದಿದೆ.

Advertisement

ಚಿಕ್ಕಮಂಗಳೂರು ಮೂಲದ ಪ್ರಮೋದ್‌(34) ನೇಣಿಗೆ ಶರಣಾದವ. ಪ್ರಮೋದ್‌ ವಿಜಯನಗರದ ಬಾಡಿಗೆ ಮನಯೊಂದರಲ್ಲಿ ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ ವಾಸವಾಗಿದ್ದ. ಕೆಪೆ ಕಾಫಿ ಡೇ ಸಂಸ್ಥೆಯಲ್ಲಿ 11 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೀಗೆ ಸಿಂಗಯ್ಯಪಾಳ್ಯ ಪಿನಿಕ್ಸ್‌ ಮಾರ್ಕೆಟ್‌ ಸಿಟಿಯಲ್ಲಿನ ಕೆಪೆ ಕಾಫಿ ಡೇ ಸಂಸ್ಥೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಪ್ರಮೋದ್‌ಗೆ ಕೆಲಸದಲ್ಲಿ ಬಡ್ತಿ ಸಿಕ್ಕಿರಲಿಲ್ಲವಾದರೂ, ಪದೇ ಪದೇ ವರ್ಗಾವಣೆಯಾಗುತ್ತಿದ್ದರು. ಅಲ್ಲದೆ, ಸಂಸ್ಥೆಯ ಹಿರಿಯ ಸಿಬ್ಬಂದಿಯಿಂದ ಕಿರುಕುಳಕ್ಕೊಳಗಾಗಿದ್ದಎನ್ನಲಾಗಿದೆ. ಇದರಿಂದ ಬೇಸತ್ತು ಸೊಮವಾರ ಸಂಜೆ ಸುಮಾರಿನಲ್ಲಿ ಎ.ನಾರಾಯಣಪುರದ ಸ್ನೇಹಿತನ ರೂಂನಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ.

ಸ್ನೇಹಿತ ಬಂದ ಮೇಲೆ ವಿಚಾರ ತಿಳಿದು ಮಹದೇವಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದರು. ಪ್ರಮೋನ್‌ ಸಾವಿಗೆ ಶರಣಾಗುವುದಕ್ಕೂ ಮುನ್ನ ಬರೆದ ಡೆತ್‌ ನೋಟ್‌ ಪೊಲೀಸರಿಗೆ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಡೆತ್‌ ನೋಟ್‌ನಲ್ಲಿ ಏನಿದೆ?: “ನನ್ನ ಸಾವಿಗೆ ಕೆಪೆ ಕಾಫಿ ಡೇ ನೆ ಕಾರಣ. ಯಾಕಂದರೆ ನಾನು ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಇದ್ದೆ. ಪ್ರಮೋಷನ್‌ ಕೊಡುತ್ತೇನೆ ಎಂದು ಮಂಗಳೂರಿಗೆ ಟ್ರಾನ್ಸ್‌ಪೊರ್‌ ಮಾಡಿದ್ರು. ಆದರೆ ಅಲ್ಲೂ ಸಹಾ ಪ್ರಮೋಷನ್‌ ಕೊಡಲಿಲ್ಲ. ಮತ್ತೆ ಬೆಂಗಳೂರಿಗೆ ಹೋಗಬೇಕು ಅಂತ ಹೇಳಿದ್ರು. ಮತ್ತೆ ಬೆಂಗಳೂರಿಗೆ ಬಂದೆ ಆದರೆ ಇದರಿಂದ ನನ್ನ ಮನಸಿಗೆ ತುಂಬಾ ನೋವಾಗಿತ್ತು. ಎಲ್ಲರೂ ಕೇಳುತ್ತಿದ್ದರು ಪ್ರಮೋಷನ್‌ ಏನಾಯ್ತು ಅಂತ.

Advertisement

ಅಷ್ಟೆ ಅಲ್ಲ ಕೆಪೆ ಕಾಫಿ ಡೆ ಅಲ್ಲಿ ತುಂಬಾ ಸೇಲ್ಸ್‌ ಪ್ರಜರ್‌, ಬ್ಯಾಂಕಿಂಗ್‌ ಮಾಡದೆ ಇದ್ದರೆ ಮ್ಯಾನೆಜರ್‌ ಸಾಲರಿ ಹೋಲ್ಡ್‌ ಮಾಡ್ತಾರೆ. ಲಕ್ಷ ಲಕ್ಷ ದುಡ್ಡು ಎಲ್ಲಿಂದ ತರುವುದು. ಎಲ್ಲ ಸ್ಟಾಫ್ ಮತ್ತು ಮ್ಯಾನೆಜರ್‌ಗೆ ತುಂಬಾ ಕಷ್ಟ. ಕೆಲಸ ಮಾಡುವುದು ಹೊಟ್ಟಡ ಪಾಡಿಗಾಗಿ. ಈ ರೀತಿ ಮಾಡಿದರೆ ಹೇಗೆ ವರ್ಕ್‌ ಮಾಡುವುದು. ಚಿನ್ನು ಅಂಡ್‌ ಮದ್ದು ನನ್ನನ್ನು ಕ್ಷಮಿಸಿಬಿಡಿ. ನಾನು ಸಿದ್ದಾರ್ಥ ಸರ್‌ ಹತ್ತಿರ ಕೇಳಿಕೊಳ್ಳುವುದೆಂದರೆ ನನ್ನ ಮಗನ ವಿದ್ಯಾಬ್ಯಾಸಕ್ಕೆ ಮತ್ತು ನನ್ನ ಹೆಂಡತಿ ಜೀವನಕ್ಕೆ ಸಹಾಯ ಮಾಡಿ. ಅಷ್ಟೆ ಅಲ್ಲದೆ ಸೇಲ್ಸ್‌ ಡೇ ಮಾಡುವುದು ಬೇಡ ಅಂತ ಹೇಳಿ.’

“ಅಪ್ಪ ,ಅಮ್ಮ,ಅಣ್ಣ, ಅತ್ತೆ, ಮಾವ, ಬಾವ, ಮುದ್ದು, ಮತ್ತು  ಅರ್ಪಿತಾಳನ್ನು ಚೆನ್ನಾಗಿ ನೋಡಿಕೊಳ್ಳಿ ಅವರಿಗೆ ನಾನು ಇಲ್ಲ ಅಂತ ಯಾವುತ್ತು ಅನ್ನಿಸಬಾರದು. ನಾನು ಸತ್ತ ಮೇಲೆ ನನ್ನ ಅಂಗಾಗ ಯಾರಿಗಾದರು ದಾನ ಮಾಡಿ,’ ಎಂದು ಪ್ರಮೋದ್‌ ತಮ್ಮ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next