ಕೋಲಾರ: ತಾಲೂಕಿನ ಕೋಡಿ ಕಣ್ಣೂರು ಕೆರೆ ಕಾಲುವೆಯಲ್ಲಿ ಯುವಕನೊಬ್ಬ ಕಚ್ಚಿಕೊಂಡು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಳೆ ನೀರು ರಭಸವಾಗಿ ಹರಿಯುತ್ತಿರುವ ಕಾಲುವೆಯಲ್ಲಿ ಮೀನು ಹಿಡಿಯಲು ಹೋಗಿ ಅಪರಿಚಿತ ಯುವಕ ಕೊಚ್ಚಿಕೊಂಡು ಹೋಗಿದ್ದಾನೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಕೊಚ್ಚಿಕೊಂಡು ಹೋದ ಯುವಕ ಗಲ್ಪೇಟೆ ನಿವಾಸಿ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸ್ ಕಂಟ್ರೋಲ್ ರೂಂ ನ ಮಾಹಿತಿಯ ಮೇರೆಗೆ ಅಗ್ನಿಶಾಮಕದ ಅಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಕೋಲಾರ ಮಣಿಘಟ್ಟ ರಸ್ತೆಯ ರಾಜ ಕಾಲುವೆಯಲ್ಲಿ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಇಂದಿರಾ ಕಾಲದಲ್ಲಿದ್ದಂತೆ ಇನ್ನು ಅಧಿಕಾರದಲ್ಲಿ ಇರಲ್ಲ:ಶಾಸಕ ಕುಲ್ ದೀಪ್ ರಾಜೀನಾಮೆ
ಯುವಕನ ದೇಹ ಇನ್ನೂ ಪತ್ತೆಯಾಗಿಲ್ಲ. ಆದ್ದರಿಂದ ಕೆರೆಗಳಲ್ಲಿ ಶೋಧ ಕಾರ್ಯವನ್ನು ಮುಂದುವರಿಸಲಾಗುವುದೆಂದು ಅಧಿಕಾರಿ ರಾಘವೇಂದ್ರ ವಿವರಿಸಿದ್ದಾರೆ.