Advertisement
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಕನ್ನಿ ಪಾರ್ಟಿ ಕೆಲಸ ನಿರ್ವಹಿಸುತ್ತಿದ್ದ ಪ್ರಶಾಂತ್ ಬುಧವಾರ ಮಧ್ಯಾಹ್ನ ಕೆಲಸ ಮುಗಿಸಿ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಹಲೀಮಾ
Related Articles
ಆಸ್ಪತ್ರೆಯ ವೈದ್ಯರು ಮೃತರ ಸಂಬಂಧಿಕರಿಗೆ ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿದ್ದರು. ಮೃತರ ಸಹೋದರಿ ಪ್ರಮೀಳಾ ಅವರು ಸಹೋದರನ ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡುವ ಮೂಲಕ ಇತರ ರೋಗಿಗಳ ಜೀವ ಉಳಿಸುವ ವೈದ್ಯರ ಸಲಹೆಗೆ ಪೂರಕವಾಗಿ ಸ್ಪಂದಿಸಿದ್ದಾರೆ.
Advertisement
ಅವಿವಾಹಿತರಾಗಿದ್ದ ಪ್ರಶಾಂತ್ ಅವರು ತಾಯಿ ಮತ್ತು ಸಹೋದರಿ ಯನ್ನು ಅಗಲಿದ್ದಾರೆ. ಅಂಕುದ್ರುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಅವರ ಕುಟುಂಬಕ್ಕೆ ಪ್ರಶಾಂತ್ ಅವರ ಸಂಪಾದನೆಯೇ ಆದಾಯದ ಮೂಲವಾಗಿತ್ತು. ಅಪಘಾತಕ್ಕೆ ಕಾರಣನಾದ ಟ್ರಕ್ ಚಾಲಕ ಬಿ. ಜಗನ್ನಾಥ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕಾಪು ಪೊಲೀ ಸರು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
ಮೃತ ಯುವಕನ ಕಿಡ್ನಿ ಮತ್ತು ಲಿವರ್ ಅನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರ ಮೂಲಕ ಸುರಕ್ಷಿತವಾಗಿ ತೆಗೆದು ಮಂಗಳೂರು ಮತ್ತು ಬೆಂಗಳೂರಿಗೆ ಸಾಗಿಸಲಾಗಿದೆ.