Advertisement

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

03:32 PM Jun 19, 2024 | Team Udayavani |

ಬೆಳಗಾವಿ: 40 ವರ್ಷದ ತಾಯಿ ತನ್ನ ಮೂವರು ಗಂಡು ಮಕ್ಕಳನ್ನು ಬಿಟ್ಟು 25 ವರ್ಷದ ಯುವಕನೊಂದಿಗೆ ಪ್ರೀತಿಸಿ ಓಡಿ ಹೋದ ಘಟನೆ ಇಲ್ಲಿಯ ಗಣೇಶಪುರದಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ: ಎಚ್ ವಿಶ್ವನಾಥ್

ಸರ್ಕಾರಿ ನೌಕರನಾಗಿದ್ದ ಗಂಡನ ಅಕಾಲಿಕ ನಿಧನದಿಂದ ಅನುಕಂಪದ ಮೇಲೆ ಸಿಕ್ಕ ಸರ್ಕಾರಿ ನೌಕರಿ ಮಾಡಿಕೊಂಡು ಬದುಕು ನಡೆಸುತ್ತಿದ್ದ ಮಹಿಳೆಗೆ 10, 15, 19 ವಯಸ್ಸಿನ ಗಂಡು ಮಕ್ಕಳಿದ್ದಾರೆ.

ಆದರೆ, 25 ವಯಸ್ಸಿನ ಯುವಕನೊಂದಿಗೆ ಪ್ರೀತಿಸಿ ಮನೆ ಬಿಟ್ಟು ಮಕ್ಕಳನ್ನು ಅನಾಥ ಮಾಡಿ ಹೋಗಿದ್ದು, ಮಕ್ಕಳು ನ್ಯಾಯ ಕ್ಕಾಗಿ ತಾಯಿ ಕಾಣೆ ಬಗ್ಗೆ ಕ್ಯಾಂಪ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಾಡಿಗೆ ಮನೆಯಲ್ಲಿದ್ದ ಈ ಮಕ್ಕಳಿಗೆ ಬಾಡಿಗೆ ಹಣ ಕಟ್ಟಲು ಆಗದೇ ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next