ಮಾಗಡಿ: ಸುಮಾರು 12 ಲಕ್ಷಕ್ಕೂ ಹೆಚ್ಚು ಚೀಟಿ ಹಣ ಹಾಗೂ ಬಡ್ಡಿಗೆ ಸಾಲಪಡೆದು ಮೂರು ತಿಂಗಳ ಹಿಂದೆ ಪರಾರಿಯಾಗಿದ್ದ ಮಹಿಳೆ ರಾಜಮುನಿಗೆ ಗುರುವಾರ ವಂಚನೆಗೊಳಾಗದ ಮಹಿಳೆಯರು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಪರವಾನಗಿ ಇಲ್ಲದೇ ಅಕ್ರಮವಾಗಿ ರಾಜಮುನಿ ಕೊಡುಗೆಹಳ್ಳಿ ಗ್ರಾಮದ
ಬಡಾವಣೆಯೊಂದರಲ್ಲಿದ್ದುಕೊಂಡು ಚೀಟಿ ಹಾಕುತ್ತಿದ್ದಳು. ಚೀಟಿದಾರರು
ಸಹ ಚೀಟಿಗಳು ಪ್ರತಿ ತಿಂಗಳು ಕಟ್ಟಿಕೊಂಡು ಬರುತ್ತಿದ್ದರು. ಆದರೆ,
ಕಳೆದ ಮೂರು ತಿಂಗಳ ಹಿಂದೆ ರಾಜಮುನಿ ಸುಮಾರು 12 ಲಕ್ಷ ರೂ.
ಗಳನ್ನು ಹಾಗೂ ಕೆಲವರಿಂದ ಬಡ್ಡಿಗೆ ಪಡೆದಿದ್ದ ಸಾಲದ ಹಣವನ್ನು
ತೆಗೆದುಕೊಂಡು ಪರಾರಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾಜಮುನಿಯನ್ನು ನೋಡಿದ ಚೀಟಿದಾರರು, ರಾಜಮುನಿಯನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ
ಒಪ್ಪಿಸಿದ್ದಾರೆ. ತಾವರೆಕೆರೆ ಪೊಲೀಸರು ಘಟನೆ ಕುರಿತು ಪ್ರಕರಣ
ದಾಖಲಾಗಿದೆ.
ಮರಕ್ಕೆ ಕಟ್ಟಿ ಥಳಿಸಿದ ಆರೋಪದಲ್ಲಿ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.