Advertisement

ಮಹಿಳೆ ಸಂಸತ್ತಲ್ಲಿ ಕೂರಲೂ ಸಮರ್ಥಳು; ಮೋದಿ ಮತ್ತೆ ಪ್ರಧಾನಿಯಾಗಿಸಲು ಸಹಕಾರಕ್ಕೆ ಮನವಿ

10:34 AM Mar 31, 2024 | Team Udayavani |

ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಶನಿವಾರ ಬೆಳಗ್ಗೆ ನಗರದ ಜಿಲ್ಲಾ ಕ್ರೀಡಾಂಗಣ ಹಾಗೂ ವಿದ್ಯಾನಗರ ಉದ್ಯಾನವನಕ್ಕೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಮತಯಾಚನೆ ಮಾಡಿದರು.

Advertisement

ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಜೊತೆ ಸಮಾಲೋಚನೆ ನಡೆಸಿದ ಗಾಯತ್ರಿ ಸಿದ್ದೇಶ್ವರ, ಕೇಂದ್ರ ಸರ್ಕಾರದ ಸಾಧನೆ ಮತ್ತು ಜಿಲ್ಲೆಯಲ್ಲಿ ಸಂಸದರಿಂದ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು. ಬಳಿಕ ತಮಗೆ ಮತ ಚಲಾಯಿಸುವಂತೆ ಮನವಿ ಮಾಡಿದರು.

ಕ್ರಿಕೆಟ್‌ ಆಟಗಾರರ ಜೊತೆ ಕ್ರಿಕೆಟ್‌ ಆಡಿ, ಬೌಲಿಂಗ್‌ ಮಾಡಿ ಗಮನಸೆಳೆದರು. ನಂತರ ವಿದ್ಯಾನಗರದ ಉದ್ಯಾನವನಕ್ಕೆ ಭೇಟಿ ನೀಡಿ ವಾಯು ವಿಹಾರಿಗಳ ಜೊತೆ ವಾಕ್‌ ಮಾಡುತ್ತಾ ಏತಕ್ಕಾಗಿ ಬಿಜೆಪಿಗೆ ಮತ ಹಾಕಬೇಕು. ನರೇಂದ್ರ ಮೋದಿ ಏಕೆ ಮತ್ತೆ ಪ್ರಧಾನಿ ಆಗಬೇಕು ಎನ್ನುವುದನ್ನು ವಿವರಿಸಿ, ಮತಯಾಚನೆ ಮಾಡಿದರು.

ಮಹಿಳೆಯರು ಅಡುಗೆ ಮಾಡಲು ಮಾತ್ರ ಲಾಯಕ್ಕು ಎಂಬ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಸರಿಯಾದ ಉತ್ತರ ಕೊಡಬೇಕು. ನನ್ನನ್ನು ಗೆಲ್ಲಿಸುವ ಮೂಲಕ ಅಡುಗೆ ಮಾಡುವುದು ಮಾತ್ರವಲ್ಲ. ಮಹಿಳೆ ಸಂಸತ್ತಿನಲ್ಲಿ ಕೂತು ಅಧಿಕಾರ ನಡೆಸಲೂ ಸಮರ್ಥಳು ಎಂಬುದನ್ನು ಸಾಬೀತುಪಡಿಸಬೇಕು ಎಂದು ಮತದಾರರಲ್ಲಿ ಕೋರಿದರು.

Advertisement

ಹಲವರ ನಿವಾಸಗಳಿಗೆ ಭೇಟಿ: ಮಾಜಿ ಶಾಸಕ ಟಿ.ಗುರುಸಿದ್ದನಗೌಡ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ, ಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು.

ನಗರದ ಉದ್ಯಮಿ ರಮೇಶ್‌, ಮಂಜುನಾಥ ಕಾಲೇಜಿನ ಕಾರ್ಯದರ್ಶಿ ದ್ಯಾಮಣ್ಣನವರ್‌, ಪಾಲಿಕೆ ಸದಸ್ಯೆ ಗೀತಾ ಬಿ. ದಿಳ್ಯಪ್ಪ, ಲೋಕಿಕೆರೆ ಕೆಂಚಪ್ಪ, ಕುಮಾರ್‌ ಜ್ಯುವೆಲರ್ಸ್‌ ಮಾಲೀಕರಾದ ಸಿ.ಕೆ.ಸಿದ್ದಪ್ಪ, ಶ್ಯಾಗಲೆ ಮಹಾದೇವಪ್ಪ, ಕಸಾಪ ಮಾಜಿ ಅಧ್ಯಕ್ಷ ಕುರ್ಕಿ ಮಂಜುನಾಥ್‌, ಮಹೇಶ್‌, ಡಾ|ಗಾಯಿತ್ರಿ, ಆಂಜನೇಯ ಬಡಾವಣೆ ಬೂತ್‌ ಅಧ್ಯಕ್ಷ ಅರುಣ್‌, ಛಾಯಾ ಶ್ರೀಧರ್‌, ವಿಜಯ್‌ ಕುಮಾರ್‌ ಸೇರಿದಂತೆ ಹತ್ತಾರು ಬೂತ್‌ ಅಧ್ಯಕ್ಷರು, ಕಾರ್ಯಕರ್ತರು, ಅಭಿಮಾನಿಗಳ ನಿವಾಸಕ್ಕೆ ಭೇಟಿ ನಿಡಿ ಚರ್ಚೆ ನಡೆಸಿ ಮತಯಾಚನೆ ಮಾಡಿದರು.

ಮಾಯಕೊಂಡ ಮಾಜಿ ಶಾಸಕ ಬಸವರಾಜ್‌ ನಾಯ್ಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್‌, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್‌, ಬಿ.ಎಸ್‌. ಜಗದೀಶ್‌, ವೀಣಾ ನಂಜಪ್ಪ, ಶಿವಕುಮಾರ್‌, ಪ್ರೇಮಮ್ಮ ನನ್ನಯ್ಯ, ಸೇರಿದಂತೆ ಬಿಜೆಪಿ ಮುಂಖಡರು, ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next