Advertisement

ಬಾಯಕ್ಕ ಮೇಟಿ ನೇತೃತ್ವದ ಪ್ಯಾನೆಲ್‌ಗೆ ಗೆಲುವು

11:40 AM Dec 23, 2019 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ತೀವ್ರ ತುರುಸಿನಿಂದ ನಡೆದ ಕರ್ನಾಟಕ ಪ್ರದೇಶ ಕುರುಬರ ಸಂಘದ ನಾಲ್ವರು ನಿರ್ದೇಶಕರ ಸ್ಥಾನಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ಜಿಪಂ ಅಧ್ಯಕ್ಷೆ ಗಂಗೂಬಾಯಿ (ಬಾಯಕ್ಕ) ಮೇಟಿ ನೇತೃತ್ವದ ಗುಂಪು ಭರ್ಜರಿ ಗೆಲುವು ಸಾಧಿಸಿದೆ.

Advertisement

ಸಾಮಾನ್ಯ ಮಹಿಳಾ ನಿರ್ದೇಶಕ ಸ್ಥಾನಕ್ಕೆ ಬಾಯಕ್ಕ ಮೇಟಿ (1181 ಮತ), ಸಾಮಾನ್ಯ ಸ್ಥಾನಗಳಿಗೆ ಶ್ರೀಶೈಲ ದಳವಾಯಿ (1038), ಡಿ.ಬಿ. ಸಿದ್ದಾಪುರ (743), ಹನಮಂತ ಅಪ್ಪನ್ನವರ (720) ಮತಗಳನ್ನು ಪಡೆದು ಅಯ್ಕೆಯಾಗಿದ್ದಾರೆ. ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಗೆ ಒಟ್ಟು 12 ಜನ ಸ್ಪರ್ಧೆ ಮಾಡಿದ್ದರು. ಕುರುಬರ ರಾಜ್ಯ ಸಂಘಕ್ಕೆ ಜಿಲ್ಲೆಯಿಂದ ನಾಲ್ವರು ನಿರ್ದೇಶಕರನ್ನು ಆಯ್ಕೆ ಮಾಡಬೇಕಿತ್ತು. ರವಿವಾರ ನವನಗರದ ಕಾಳಿದಾಸ ಕಾಲೇಜ್‌ ನಲ್ಲಿ ನಡೆದ ಮತದಾನದಲ್ಲಿ ಸಂಘದ ಸದಸ್ಯತ್ವದ ಜತೆಗೆ ಮತದಾನದ ಹಕ್ಕು ಹೊಂದಿದ್ದ ಸಮಾಜದ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಜಿಲ್ಲೆಯ ಕುರುಬ ಸಮಾಜದ ಮತದಾನ ಹಕ್ಕು ಹೊಂದಿರುವ ಮತದಾರರು, ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುವುದು ಕಂಡು ಬಂತು.

ಕುರುಬರ ಸಂಘದ ನಾಲ್ಕು ನಿರ್ದೇಶಕ ಸ್ಥಾನಕ್ಕೆ ಜಿಪಂ ಅಧ್ಯಕ್ಷೆಯೂ ಆಗಿರುವ ಬಾಯಕ್ಕ ಮೇಟಿ, 2ನೇ ಬಾರಿ ಸ್ಪರ್ಧೆ ಮಾಡಿದ್ದು, ಬಾಯಕ್ಕ ಮೇಟಿ ನೇತೃತ್ವದ ಪ್ಯಾನೆಲ್‌ನಲ್ಲಿ ಶ್ರೀಶೈಲ ದಳವಾಯಿ, ಹನಮಂತ ಅಪ್ಪನ್ನವರ, ಡಿ.ಬಿ. ಸಿದ್ದಾಪುರ ಸ್ಪರ್ಧಿಸಿದ್ದರು. ಸಾಮಾಜಿಕ ಕಾರ್ಯಕರ್ತೆ ಸುವರ್ಣಾ ನಾಗರಾಳ, ಸಿದ್ದಪ್ಪ ಸೂಳಿಬಾವಿ, ಸಿದ್ದು ದೇವಗೋಳ ಹಾಗೂ ಯಮನಪ್ಪ ನಿಂಬಲಗುಂದಿ ಅವರು ಮತ್ತೂಂದು ಗುಂಪು ರಚಿಸಿಕೊಂಡು ಕಣಕ್ಕಿಳಿದ್ದರು. ಈ ಎರಡು ಗುಂಪುಗಳಲ್ಲದೇ ರೈತ ಚಳವಳಿ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಯಲ್ಲಪ್ಪ ಹೆಗಡ್ಯಾರ (ಯಲ್ಲಪ್ಪ ಹೆಗಡೆ), ಚಂದಪ್ಪ ಹೂಲಗೇರಿ, ರೇವಣಸಿದ್ದ ಭೀಮಪ್ಪ ಕುರುಬರ, ಹನಮಂತ ಗೊರವರ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next