Advertisement

ದೇಶದಲ್ಲಿವೆ 21 ಕೋಟಿ ದ್ವಿಚಕ್ರ ವಾಹನ

09:00 PM Aug 04, 2022 | Team Udayavani |

ನವದೆಹಲಿ: ನಮ್ಮ ದೇಶದಲ್ಲಿ ಇರಬಹುದಾದ ದ್ವಿಚಕ್ರ ವಾಹನಗಳ ಸಂಖ್ಯೆ ಎಷ್ಟು? ಬರೋಬ್ಬರಿ 21 ಕೋಟಿ. ನಾಲ್ಕು ಚಕ್ರ ವಾಹನಗಳ ಸಂಖ್ಯೆ 7 ಕೋಟಿ. ಈ ಬಗ್ಗೆ ಕೇಂದ್ರ ಸರ್ಕಾರವೇ ಲೋಕಸಭೆಗೆ ಗುರುವಾರ ಮಾಹಿತಿ ನೀಡಿದೆ.

Advertisement

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ನೀಡಿದ ಲಿಖೀತ ಉತ್ತರದ ಪ್ರಕಾರ ಒಟ್ಟು ವಾಹನಗಳ ಪೈಕಿ 5,44,643 ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳು. 54, 252 ವಿದ್ಯುತ್‌ ಚಾಲಿತ ನಾಲ್ಕು ಚಕ್ರಗಳ ವಾಹನಗಳು ಎಂದು ಅವರು ತಿಳಿಸಿದ್ದಾರೆ. ವಾಹನಗಳ ನೋಂದಣಿಗೆ ಸಂಬಂಧಿಸಿದ ವೆಬ್‌ಸೈಟ್‌ “ವಾಹನ್‌’ನಲ್ಲಿ ಆ.3ಕ್ಕೆ ಮುಕ್ತಾಯವಾದಂತೆ ಈ ಮಾಹಿತಿಗಳು ಇವೆ ಎಂದಿದ್ದಾರೆ.

ಸಿಎನ್‌ಜಿ, ಇಥೆನಾಲ್‌, ಫ್ಯೂಯೆಲ್‌ ಸೆಲ್‌ ಹೈಡ್ರೋಜನ್‌, ಎಲ್‌ಎನ್‌ಜಿ, ಎಲ್‌ಪಿಜಿ, ಸೌರ ಇಂಧನ, ಮೆಥನಾಲ್‌ಗ‌ಳಿಂದ ಚಲಿಸುವ ದ್ವಿಚಕ್ರವಾಹನಗಳ ಸಂಖ್ಯೆ 2,95,245 ಮತ್ತು 18,47,539 ನಾಲ್ಕು ಚಕ್ರದ ವಾಹನಗಳು ಇವೆ ಎಂದು ಗಡ್ಕರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next