Advertisement

ಬಸ್ರೂರು ಪೇಟೆಯಲ್ಲಿ ಬೇಕು ಸುಸಜ್ಜಿತ ಸರ್ಕಲ್‌

08:40 PM Jan 26, 2020 | Sriram |

ಬಸ್ರೂರು :ಬಸ್ರೂರು ಬಸ್‌ ನಿಲ್ದಾಣದಲ್ಲಿ ವಾಹನಗಳ ಸಂಚಾರ ಈಗ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಕಂಡ್ಲೂರು, ಸಿದ್ಧಾಪುರ ಕಡೆಯಿಂದ, ಹುಣ್ಸೆಮಕ್ಕಿ ಹಾಲಾಡಿ ಕಡೆಯಿಂದ ಬರುವ ವಾಹನಗಳು ಹಾಗೂ ಕುಂದಾಪುರ ಕಡೆಯಿಂದ ಬರುವ ವಾಹನಗಳು ನಿರಂತರವಾಗಿ ಸಂಚರಿಸುತ್ತಿವೆ. ಇಲ್ಲಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಸರ್ಕಲ್‌ ಅಗತ್ಯವಿದ್ದು, ಈ ಬೇಡಿಕೆಯನ್ನು ಈಡೇರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

ಬಸ್‌ ನಿಲ್ದಾಣದಲ್ಲಿ ದಿ| ರಮೇಶ್‌ ಶೆಟ್ಟಿ ಸ್ಮಾರಕದ ಒಂದು ಬಸ್‌ ನಿಲ್ದಾಣವಿದ್ದು ಎದುರುಗಡೆ ವಿಧಾನ ಪರಿಷತ್‌ ಸದಸ್ಯರ ಅನುದಾನದಿಂದ ನಿರ್ಮಾಣವಾದ ಮತ್ತೂಂದು ತಂಗುದಾಣವಿದೆ. ದಿ| ರಮೇಶ್‌ ಶೆಟ್ಟಿ ಸ್ಮಾರಕದ ಒಂದು ಬಸ್‌ ನಿಲ್ದಾಣ ಭಿಕ್ಷುಕರು ನೆಲೆಸುವ ತಾಣವಾಗಿದೆ. ಇವೆಲ್ಲವನ್ನು ಪಕ್ಕಕ್ಕಿಟ್ಟು ಸೂಕ್ಷವಾಗಿ ಅವಲೋಕಿಸಿದಾಗ ವಿಶಾಲವಾದ ಬಸ್‌ ತಂಗುದಾಣದ ಎದುರು ಒಂದು ಸರ್ಕಲ್‌ ನಿರ್ಮಿಸಿದರೆ ಉತ್ತಮ ಎನ್ನುವುದು ಊರವರ ವಾದ.

ಕನಿಷ್ಠ ಬಸ್‌ ನಿಲ್ದಾಣದಿಂದ ನೂರು ಮೀ. ಪಶ್ವಿ‌ಮಕ್ಕೆ, ನೂರು ಮೀ. ಪೂರ್ವ ದಿಕ್ಕಿಗೆ ರಸ್ತೆಯನ್ನು ಅಗಲ ಮಾಡಿದಾಗ ಎರಡು ರಸ್ತೆಗಳನ್ನು ನಿರ್ಮಿಸಬಹುದಾಗಿದೆ. ಸರಕಾರಿ ಹಾಗೂ ಖಾಸಗಿ ಬಸ್‌ಗಳ ಸ್ಪರ್ಧಾತ್ಮಕ ಓಟ ಇಲ್ಲಿ ನಡೆಯುತ್ತಿದ್ದು ಇದಕ್ಕೆ ಸರ್ಕಲ್‌ ಪರ್ಯಾಯ ವ್ಯವಸ್ಥೆಯಾಗಿ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಬಸ್ರೂರು ಬಸ್‌ ನಿಲ್ದಾಣದಲ್ಲಿ ಒಂದು ಸರ್ಕಲ್‌ ನಿರ್ಮಾಣ ಅಗತ್ಯವಾಗಿದೆ ಎನ್ನುವುದು ಗ್ರಾಮಸ್ಥರ ಅನಿಸಿಕೆ.

ಸುಗಮ ಸಂಚಾರ
ಬಸ್ರೂರು ಬಸ್‌ ನಿಲ್ದಾಣದ ಸಮೀಪ ವಿಶಾಲವಾದ ಜಾಗ ವಿದ್ದು ಲೋಕೋಪಯೋಗಿ ಇಲಾಖೆ ಅಥವಾ ರಾಜ್ಯ ಹೆದ್ದಾರಿ ವಿಭಾಗದವರು ಇಲ್ಲೊಂದು ಸರ್ಕಲ್‌ ನಿರ್ಮಿಸಿದರೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ. ಶೀಘ್ರ ಬಸ್ರೂರುಬಸ್‌ ನಿಲ್ದಾಣದ ಸಮೀಪ ಸರ್ಕಲ್‌ ನಿರ್ಮಾಣವಾಗುತ್ತದೆ ಎನ್ನುವ ಆಶಯ ನಮ್ಮದು. ಈ ಜಾಗ ಗ್ರಾ.ಪಂ. ವ್ಯಾಪ್ತಿಗೆ ಬರುವುದಿಲ್ಲ.
-ನಾಗರಾಜ ಗಾಣಿಗ,
ಅಧ್ಯಕ್ಷರು, ಬಸ್ರೂರು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next