Advertisement

ವಧುವಿಲ್ಲದೆ ವರನಿಗೆ ಮದುವೆ

04:04 AM May 14, 2019 | Team Udayavani |
ಹಿಮ್ಮತ್‌ನಗರ: ಎಲ್ಲರಂತೆ ತಾನೂ ಕೂಡ ತನ್ನ ಮದುವೆಯನ್ನು ವಿಜೃಂಭಣೆಯಿಂದ ನೆರವೇರಿಸಿಕೊಳ್ಳಬೇಕು ಎಂಬ ಆಸೆ, ಗುಜರಾತ್‌ನ ಅಜಯ್‌ ಬಾರೋತ್‌ (27) ಎಂಬಾತನದ್ದು. ಇತ್ತೀಚೆಗೆ, ಆತನ ಸಂಬಂಧಿಕನ ಮದುವೆಯೂ ಅದ್ಧೂರಿಯಾಗಿಯೇ ನಡೆ ದಿದ್ದರಿಂದ ಈತನ ಆಸೆಯೂ ಇಮ್ಮಡಿಯಾಗಿತ್ತು. ಈತನ ಆಸೆಯನ್ನು ಅರ್ಥ ಮಾಡಿಕೊಂಡಿದ್ದ ಆತನ ಮನೆಯವರು ಇತ್ತೀಚೆಗೆ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ದೊಡ್ಡ ಛತ್ರದಲ್ಲಿ ಸಂಬಂಧಿಕರೂ ಸೇರಿ ಧಾಂ… ಧೂಂ ಅಂತ ವೈಭವೋಪೇತವಾಗಿ ಮದುವೆ ಮಾಡಿದ್ದಾರೆ. ಆದರೆ, ವಧು ಯಾರು ಎಂದರೆ ಬರುವ ಉತ್ತರ ‘ಯಾರೂ ಇಲ್ಲ’ ಅಂತ! ಅಚ್ಚರಿಯಾದರೂ ಇದು ಸತ್ಯ. ಅಜಯ್‌ನನ್ನು ಮದುವೆಯಾಗಲು ಯಾವ ಯುವತಿಯೂ ಮುಂದೆ ಬಾರದ್ದಕ್ಕೆ ಆತನ ಮನೆಯವರು ಕೊನೆಗೂ ವಧುವಿಲ್ಲದೆಯೇ ಮದುವೆ ಮಾಡಿ ಮುಗಿಸಿದ್ದಾರೆ. ಮದುಮಗ ಅಜಯ್‌, ಬುದ್ಧಿಮಾಂದ್ಯ. ಹಾಗಾಗಿ, ಆತನನ್ನು ಮದುವೆಯಾಗಲು ಯಾರೂ ಮುಂದೆ ಬರಲಿಲ್ಲ. ಆದರೆ, ಆತನ ಮನೆಯವರು ಧೃತಿಗೆಡಲಿಲ್ಲ. 800 ಜನರು ಸೇರಬಹುದಾದ ಛತ್ರ ಬುಕ್‌ ಮಾಡಿ, ಲಕ್ಷಾಂತರ ರೂ. ಖರ್ಚು ಮಾಡಿ ಈ ಅದ್ದೂರಿ ಮದುವೆ ಮಾಡಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next