Advertisement
ಜಲಫಿರಂಗಿ ಪ್ರಯೋಗಜಾಥಾ ಸಂದರ್ಭದಲ್ಲಿ ಉದ್ರಿಕ್ತ ಗೊಂಡು ಬ್ಯಾರಿಕೇಡ್ ಕೆಡವಿ ಮುಂದುವರಿಯಲು ಪ್ರಯತ್ನಿಸಿದ ಮುಸ್ಲಿಂ ಲೀಗ್ ಕಾರ್ಯಕರ್ತರನ್ನು ನಿಯಂತ್ರಿಸಿ ಚದುರಿಸಲು ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದರು.
ಜಾಥಾವನ್ನು ಮುಸ್ಲಿಂ ಲೀಗ್ ರಾಜ್ಯ ಉಪಾಧ್ಯಕ್ಷ ಸಿ.ಟಿ. ಅಹಮ್ಮದಾಲಿ ಉದ್ಘಾಟಿಸಿದರು. ಎ.ಎಂ. ಕಡವತ್ ಅಧ್ಯಕ್ಷತೆ ವಹಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಅಬ್ದುಲ್ ರಹಿಮಾನ್, ಮೂಸಾ ಬಿ. ಚೆರ್ಕಳ, ಸಿ.ಬಿ. ಅಬ್ದುಲ್ಲ ಹಾಜಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್, ಅಬ್ದುಲ್ಲ ಕುಂಞಿ ಚೆರ್ಕಳ ಮೊದಲಾದವರು ಮಾತನಾಡಿದರು.
ಬೆಳಗ್ಗೆ ಸೂರ್ಲಿನಿಂದ ಆರಂಭಗೊಂಡ ಮುಸ್ಲಿಂ ಲೀಗ್ ಕಾರ್ಯಕರ್ತರ ಮೆರವಣಿಗೆ ಎಸ್.ಪಿ. ಕಚೇರಿಗೆ ತಲುಪಿದಾಗ ಉದ್ರಿಕ್ತರಾದ ಕಾರ್ಯಕರ್ತರು ಕಚೇರಿಯಿಂದ ಕೆಲವೇ ದೂರದಲ್ಲಿ ಪೊಲೀಸರು ನಿರ್ಮಿಸಿದ ಬ್ಯಾರಿಕೇಡ್ ಕೆಡವಿ ಮುಂದು ವರಿಯಲು ಯತ್ನಿಸಿದರು. ಕಾರ್ಯಕರ್ತರನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಜಲಫಿರಂಗಿ ಪ್ರಯೋಗಿಸ ಬೇಕಾಯಿತು. ಇದೇ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆ. ಕೆಲವು ಪತ್ರಿಕೆಗಳ ಛಾಯಾಚಿತ್ರಗ್ರಾಹಕರ ಕೆಮರಾಗಳು ಕೆಳಗೆ ಬಿದ್ದು ಹಾನಿಗೀಡಾದವು. ಸಂಘ ಪರಿವಾರ ಹಿಂಸೆಯಲ್ಲಿ ತೊಡಗಿದ್ದರೂ ಪೊಲೀಸರು ನಿಷ್ಕ್ರಿಯರಾಗಿದ್ದಾರೆಂದು ಆರೋಪಿಸಿ ಜಾಥಾ ಆಯೋಜಿಸಲಾಗಿತ್ತು.