Advertisement

ಹಕ್ಕಿಗಳಿಗೊಂದು ಬೆಚ್ಚನೆಯ ಕೃತಕ ಗೂಡು: ಮನೆಮ ನೆಗೆ ವಿತರಣೆ

01:08 AM Jun 27, 2019 | mahesh |

ಮಹಾನಗರ: ಗುಬ್ಬಚ್ಚಿ ಸೇರಿದಂತೆ ಅಳಿವಿನಂಚಿನಲ್ಲಿರುವ ಪಕ್ಷಿಗಳನ್ನು ಉಳಿಸಬೇಕು ಎಂಬ ಉದ್ದೇಶದಿಂದ ನಗರದ ಪ್ರಾಣಿ ಸಂರಕ್ಷಕ ತೌಸಿಫ್ ಅಹ್ಮದ್‌ ಅವರು ಈಗ ಸುತ್ತಮುತ್ತಲಿನ ಪರಿಸರದಲ್ಲಿ ಪಕ್ಷಿಗಳಿಗೆ ಗೂಡುಗಳನ್ನು ಇಡುವ ಚಿಂತನೆ ಮಾಡಿದ್ದಾರೆ.

Advertisement

ಮಂಗಳೂರು ದಿನದಿಂದ ದಿನಕ್ಕೆ ಬೆಳೆ ಯುತ್ತಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ಮರಗಳು ನಾಶವಾಗುತ್ತಿವೆ. ಇದರಿಂದ ಪಕ್ಷಿಗಳಿಗೆ ಗೂಡುಕಟ್ಟಲು ಸಮಸ್ಯೆ ಯಾಗುತ್ತಿವೆೆ. ಇದೇ ಕಾರಣಕ್ಕೆ ಪಕ್ಷಿಗಳ ಸಂತತಿ ಉಳಿಸಲು ಪಿವಿಸಿ ಪೈಪ್‌ ತುಂಡು ಮಾಡಿ ಅದರಲ್ಲಿ ತೂತು ಮಾಡುವ ಮುಖೇನ ಪಕ್ಷಿಗಳಿಗೆ ಗೂಡು ತಯಾರು ಮಾಡಲು ಮುಂದಾಗಿದ್ದಾರೆ. ಈ ಕೆಲಸ ಈಗಾಗಲೇ ನಡೆಯುತ್ತಿದ್ದು, ಮಳೆಗಾಲ ಪೂರ್ಣಗೊಂಡ ಬಳಿಕ ನಗರದ ವಿವಿಧ ಮನೆಗಳಿಗೆ ತೆರಳಿ ಹಕ್ಕಿಗಳು ವಾಸಿಸಲು ಗೂಡು ವಿತರಿಸುವ ಕಾರ್ಯಕ್ಕೆ ತೌಸಿಫ್‌ ಅವರು ಮುಂದಾಗಲಿದ್ದಾರೆ.

ಈ ಗೂಡು ನಿರ್ಮಾಣಕ್ಕೆ ಹೆಚ್ಚು ಖರ್ಚಾಗುತ್ತಿಲ್ಲ. ಸುಮಾರು 5 ಇಂಚು ಅಗಲದ, 8 ಫೀಟ್‌ನಂತೆ ಪೈಪ್‌ ತುಂಡು ಮಾಡಿ, ಪೈಪ್‌ಗೆ ತೂತುಗಳನ್ನು ಮಾಡ ಲಾಗುತ್ತದೆ. ಇವುಗಳನ್ನು ಮನೆಯ ಹೊರಗಡೆ, ಕಾರು ಪಾರ್ಕಿಂಗ್‌, ಬಾಲ್ಕನಿ, ಮರಗಳಿರುವ ಪ್ರದೇಶದಲ್ಲಿ ಅಲ್ಲದೆ, ಮರಗಳ ಮೇಲೆಯೂ ಇಡಬಹುದಾಗಿದೆ. ಈ ಪೈಪ್‌ನೊಳಗೆ ದಿನ ಕಳೆದಂತೆ ಗುಬ್ಬಚ್ಚಿ ಸೇರಿದಂತೆ ಇತರ ಪಕ್ಷಿಗಳು ಗೂಡು ಕಟ್ಟಲು ಪ್ರಾರಂಭಿಸುತ್ತವೆ.

ತೌಸಿಫ್‌ ಹೇಳುವ ಪ್ರಕಾರ ‘ಈ ಕಲ್ಪನೆಯನ್ನು ನನ್ನ ಸ್ನೇಹಿತನ ಮನೆಯಲ್ಲಿ ಗಮನಿಸಿದ್ದು, ಅಲ್ಲಿ ಕೂಡ ಇದೇ ಮಾದರಿ ಯನ್ನು ಅಳವಡಿಸಿದ್ದಾರೆ.

ಈಗ ಗುಬ್ಬಚ್ಚಿ ಸೇರಿದಂತೆ ಬುಲ್ ಬುಲ್ ಪಕ್ಷಿಗಳು ಕೂಡ ಈ ಗೂಡಿನಲ್ಲಿ ಬಂದು ಕುಳಿತುಕೊಳ್ಳುತ್ತವೆ. ಈ ಕಲ್ಪನೆಯಲ್ಲಿ ಮನೆಯಲ್ಲಿಯೇ ಧ್ವನಿವರ್ಧಕ ಪೆಟ್ಟಿಗೆ, ದೊಡ್ಡದಾದ ಬಾಕ್ಸ್‌ಗಳಲ್ಲಿಯೂ ಗೂಡು ಮಾಡಬಹುದು ಪಕ್ಷಿಗಳು ಬಂದು ಗೂಡು ಕಟ್ಟುತ್ತದೆ’ ಎನ್ನುತ್ತಾರೆ.

ಬೆಂಗಳೂರಿನಲ್ಲಿ ಸಕ್ಸಸ್‌

ಗುಬ್ಬಚ್ಚಿ ಸೇರಿದಂತೆ ಪಕ್ಷಿಗಳ ಸಂತತಿ ಉಳಿಸುವ ಉದ್ದೇಶದಿಂದ ಬೆಂಗಳೂರು ನಗರದಲ್ಲಿ ಈಗಾಗಲೇ ಮನೆಗಳ ಟೆರೇಸ್‌, ಬಾಲ್ಕನಿಗಳಲ್ಲಿ, ಕಾರು ಪಾರ್ಕಿಂಗ್‌ ಜಾಗಗಳಲ್ಲಿ ಗೂಡುಗಳನ್ನು ನೇತು ಹಾಕಲಾಗಿದೆ. ಈ ಗೂಡುಗಳಲ್ಲಿ ತನ್ನಿಂತಾನೆ ಪಕ್ಷಿಗಳು ಬಂದು ಕೂರಲು ಪ್ರಾರಂಭಿಸಿವೆ. ಈ ಮಾದರಿಯನ್ನು ಮಂಗಳೂರು ನಗರದ ಪ್ರತೀ ಮನೆಯ‌ಲ್ಲೂ ಮಾಡಿದರೆ ಪಕ್ಷಿಗಳ ಸಂತತಿ ಉಳಿಯಲು ಸಾಧ್ಯ.
– ಪ್ರದೀಪ್‌ ಆಚಾರ್ಯ,ಕೊಟ್ಟಾರ ಕ್ರಾಸ್‌ ನಿವಾಸಿ
Advertisement
Advertisement

Udayavani is now on Telegram. Click here to join our channel and stay updated with the latest news.

Next