Advertisement
ಹಿಮಾಲಯವೆಂದರೆ ಸಂಸ್ಕೃತದಲ್ಲಿ ಹಿಮದ ಮನೆ ಎಂದರ್ಥ. ಹಿಮಾಲಯ ಭೂಮಿಯ ಅತ್ಯಂತ ವಿನೂತನ ಪರ್ವತ ಶ್ರೇಣಿಗಳಲ್ಲೊಂದು. ನನಗೆ ಎಲ್ಲೋ ಓದಿದ ನೆನಪು ಸುಮಾರು 25 ಕೋಟಿ ವರ್ಷಗಳ ಹಿಂದೆ ಪ್ಯಾಂಜಿಯ ಭೂಭಾಗ ಒಡೆದು ಇಂಡೋ ಆಸ್ಟ್ರೇಲಿಯನ್ ಭೂಭಾಗ ಯುರೋಪಿಯನ್ ಭೂಭಾಗದತ್ತ ತೇಲಲಾರಂಭಿಸಿದಂತೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪರೀಕ್ಷೆ. ಹಿಮಾಲಯದ ತುತ್ತತುದಿಯಲ್ಲಿ ಫಲಿತಾಂಶದ ನೀರಿಕ್ಷೆ. ನಾನೇನು ಬರೆದಿದ್ದೇನೆ ಎಂದು ಆಲೋಚಿಸಬೇಡಿ. ನನ್ನದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೇಪೆಜಾರು ಎಂಬ ಚಿಕ್ಕ ಊರು. ಬಾಲ್ಯದಲ್ಲಿ ಶಾಲಾ ಮೈದಾನದಲ್ಲಿ ಸಹಪಾಠಿಗಳೊಂದಿಗೆ ಆಟೋಟದಲ್ಲಿ ಪಾಲ್ಗೊಳ್ಳುತ್ತಿದ್ದೆ. ಟಿ.ವಿ ಪೇಪರ್‌ಗಳಲ್ಲಿ ನಮ್ಮ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮೈದಾನ ಕಂಠೀರವ ಸ್ಟೇಡಿಯಂನ ಹೆಸರು ಕೇಳುತ್ತಿದ್ದೆ. ಒಂದು ದಿನವಾದರೂ ಅದರೊಳಗೆ ಪ್ರವೇಶ ಪಡೆದು ಏನನ್ನಾದರೂ ಸಾಧಿಸಬೇಕೆಂದು ಆಸೆಪಟ್ಟಿದ್ದೆ. ಅಂತಹದೊಂದು ಅವಕಾಶ ಸಿಕ್ಕಿದ್ದು ಹಿಮಾಲಯ ಪರ್ವತಾರೋಹಣ ಆಯ್ಕೆ ಶಿಬಿರದಲ್ಲಿ. ಎರಡು ವಾರದ ಬಳಿಕ ನನಗೆ ಪರ್ವತಾರೋಹಣಕ್ಕೆ ಆಯ್ಕೆಯಾದ ಬಗ್ಗೆ ಸಂದೇಶ ಬರುತ್ತದೆ. ಅನಂತರದ ಸವಿ ನೆನಪು ಹೇಗಿತ್ತು ಎಂಬುದನ್ನು ಮುಂದಕ್ಕೆ ನೀವೆ ಓದಿ.
Related Articles
ಸುಮಾರು 350ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಲ್ಲಿ 120ರಷ್ಟು ವಿದ್ಯಾರ್ಥಿಗಳು ಪರ್ವತಾರೋಹಣಕ್ಕೆ ಆಯ್ಕೆಯಾಗಿದ್ದರು. ಅದರಲ್ಲಿ ನಾನು ಒಬ್ಬಳು. ರೈಲಿನಲ್ಲಿ ಹೊಸದಿಲ್ಲಿಯತ್ತ ಪಯಣ ಆರಂಭ. ರೈಲು ದಿಲ್ಲಿಯ ನಿಜಾಮುದ್ದೀನ್ ರೈಲ್ವೇ ಸ್ಟೇಶನ್ ತಲುಪಿತು. ಅಲ್ಲಿಂದ ಶ್ರೀನಗರಕ್ಕೆ ಹೋಗಬೇಕಿತ್ತು. ಐಎಂಎಫ್ನ ಸುಸಜ್ಜಿತ ವಾಹನ ನಮಗಾಗಿ ಕಾಯುತ್ತಾ ಇತ್ತು. ನಾವು ಹೋಗಬೇಕಾಗಿದ್ದದ್ದು ಜಮ್ಮು ಕಾಶ್ಮೀರದ ಸೋನಾ ಮಾರ್ಗಕ್ಕೆ. ಒಂದು ರೀತಿಯ ಸಂದಿಗ್ಧ ವಾತಾವರಣಕ್ಕೆ ಸದಾ ಪ್ರಚಾರವಾಗುತ್ತಿದ್ದ ಪ್ರದೇಶ ಅದು. ಸೋನಾ ಮಾರ್ಗಕ್ಕೆ ತಲುಪುತ್ತಾ ಇದ್ದ ಹಾಗೇ ಶಿಸ್ತು, ಸಮಯಪಾಲನೆ, ಜವಾಬ್ದಾರಿಗಳು ಹೊಣೆಗಾರಿಕೆಯ ಒತ್ತಡಗಳು ಕಾಣಬಂದವು. ಯಾಕೆಂದರೆ ನಾವು 25 ದಿನಗಳ ಕಾಲ ಸೈನಿಕರ ಮಧ್ಯೆಯೇ ನಮ್ಮ ಹಿಮಾಲಯ ಪರ್ವತಾರೋಹಣದ ಕಾರ್ಯಚಟುವಟಿಕೆಯನ್ನು ಮಾಡಬೇಕಾಗಿತ್ತು.
Advertisement
ಟೆಂಟ್‌ಗಳೇ ನಮಗಾಧಾರವಿಚಿತ್ರ ವಿಶೇಷ ಪ್ರದೇಶ ಅದು. ಸುತ್ತಲೂ ಗಗನಕ್ಕೆ ಮುತ್ತಿಕ್ಕುವ ಪರ್ವತಗಳು, ಹಿಮಾವೃತಗೊಂಡ ಪ್ರದೇಶಗಳು. ಅಲ್ಲಲ್ಲಿ ಹರಿದು ಹೋಗುವ ನದಿಗಳು, ನಿರ್ಜನ ಪ್ರದೇಶ, ಹಕ್ಕಿಗಳ ಚೀರಾಟ ಇಲ್ಲ. ಪ್ರಾಣಿಗಳ ಓಡಾಟ ಇಲ್ಲ. ಆದರೂ ಕ್ಷಣ ಕ್ಷಣಕ್ಕೂ ಭಯ. ವಾಸಿಸಲು ಮನೆಯಿಲ್ಲ. ಕಟ್ಟಿದ ಟೆಂಟ್‌ಗಳೇ ನಮ್ಮ ಮನೆ. ಒಂದಿಷ್ಟು ಗುಂಪನ್ನು ಬಿಟ್ಟರೂ ದಾರಿತಪ್ಪುವ ಮುನ್ಸೂಚನೆ, ಎಲ್ಲವೂ ಹೊಸತನ. ಅಬ್ಟಾಬ್ಟಾ ಒಮ್ಮೆ ಹಿಂದೆ ಬಂದರೆ ಸಾಕು ಎನಿಸಿತ್ತು. ಆದರೆ ದಿನಕಳೆದಂತೆ ಅಲ್ಲಿ ಕಂಡ ಅನುಭವ ಹಿಮಾಲಯಕ್ಕೆ ಹಿಮಾಲಯವೇ ಸಾಟಿ. ಅದಕ್ಕೆ ನಾನೇ ಅಚ್ಚುಮೆಚ್ಚಿನ ಸಹಪಾಠಿ ಎನ್ನುವ ಮಟ್ಟಕ್ಕೆ ನನ್ನ ಖುಷಿ ದಿನದಿಂದ ದಿನಕ್ಕೆ ಹೆಚ್ಚಾಗಿತ್ತು. 11,500 ಅಡಿ ಎತ್ತರ
ಸುಮಾರು 11,500 ಅಡಿ ಎತ್ತರಕ್ಕೆ ಏಕಾಂಗಿಯಾಗಿ ಏರಬೇಕಾದ ಚಟುವಟಿಕೆಯಾಗಿರಬಹುದು. ಗಗನಕ್ಕೆತ್ತರವಾಗಿರುವ ಪರ್ವತವನ್ನು ಏರಿ ಹಿಂದಿರುಗಿ ಇಳಿಯಬೇಕಾದ ಪರ್ವತಾರೋಹಣ ಎಂಬ ಪ್ರಾಣಾಪಾಯದ ಪಯಣ ನಿಜಕ್ಕೂ ಒಂದು ಸಾಹಸವೇ ಸರಿ. ಅದನ್ನೆಲ್ಲಾ ಪೂರೈಸಿದ ನಾನು ನಿಜವಾಗಿ ಇಂದು ಒಬ್ಬ ಧೈರ್ಯವಂತೆಯಾಗಿದ್ದೇನೆ. ಯಾವುದನ್ನು ಆಲೋಚಿಸಿ ಮುನ್ನಡೆ ಇಟ್ಟರೆ ಗುರಿ ತಲುಪಬಹುದು ಎನ್ನುವ ಸತ್ಯಾಂಶ ನನಗೀಗ ಅರಿವಾಗಿದೆ. ಹಿಮಾಲಯ ತಲುಪಬೇಕಾದರೆ ಅನೇಕ ನದಿ-ಕಣಿವೆಗಳನ್ನು ದಾಟಿಕೊಂಡು ಹೋಗಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅಪಾಯಗಳು ಬರುವುದು ಸಹಜ. ಅದಕ್ಕಾಗಿ ಒಬ್ಬ ಪರ್ವತಾರೋಹಿ ಯಾವ ರೀತಿ ಮುಂಜಾಗ್ರತಾ ಕ್ರಮ ಹೊಂದಿರಬೇಕು ಎಂಬುದನ್ನು ಸ್ವತಃ ನಾನೇ ಪ್ರಯೋಗಾತ್ಮಕವಾಗಿ ತೊಡಗಿಸಿಕೊಂಡದ್ದು ಅನೇಕ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಯಿತು. ಅನಂತರ ಅಲ್ಲಿಂದ ಲಡಾಕ್, ಲೇ, ಸಿಯಾಚಿನ್, ಕಾರ್ಗಿಲ್ ಯುದ್ಧಭೂಮಿ, ಜೊಜಿಲಾಮಾರ್ಗ, ಹಿಮಾಚಲ ಪ್ರದೇಶ, ಮನಾಲಿಯಂತಹ ಪ್ರದೇಶಕ್ಕೆ ಹೋಗಿ ಅಲ್ಲಿನ ಅನುಭವವನ್ನು ಪಡೆದೆನು. ಬಡ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾದ ಈ ಸರಕಾರದ ಯೋಜನೆ ನಿಜವಾಗಿಯೂ ಮರೆಯಲಾರದ ನೆನಪು. ಪ್ರತಿದಿನ ವ್ಯಾಯಾಮ
ಕೊರೆಯುವ ಚಳಿ, ಮಂಜಿನ ಮಳೆ, ಪೂರ್ತಿ ಬದಲಾದ ವಾತಾವರಣವನ್ನು ಹೊಂದಾಣಿಕೆ ಆಗುವುದೇ ಒಂದು ಚಾಲೆಂಜಾಗಿತ್ತು. ಆದರೆ ಪ್ರತಿದಿನ ಮಾಡಿಸುತ್ತಿದ್ದ ವ್ಯಾಯಾಮಗಳು ಪರಿಸ್ಥಿತಿ ನಿಭಾಯಿಸಲು ಸಹಕಾರಿಯಾಗಿದ್ದವು. ಅನೇಕ ಚಟುವಟಿಕೆಗಳನ್ನು ಪೂರೈಸಿ ಅಂತಿಮವಾಗಿ ಹಿಮಾಲಯದ ತುತ್ತ ತುದಿಗೆ ತಲುಪಿದ್ದ ಪಯಣ ವರ್ಣಿಸಲು ಅಸಾಧ್ಯ. ದೈತ್ಯಾಕಾರದ ಕಲ್ಲು ಬಂಡೆಗಳಿಂದ ಕೂಡಿದ ಪರ್ವತಗಳನ್ನು ಏರಬೇಕಾಗಿ ಕೆಳಕ್ಕೆ ಬಿದ್ದು ಕೈಕಾಲು ಮುರಿದುಕೊಳ್ಳಬೇಕಾಗಿತ್ತು. ನಾವು 25 ದಿನಗಳ ಕಾಲ ಸೈನಿಕರ ಮಧ್ಯೆಯೇ ಕಾರ್ಯಚಟುವಟಿಕೆ ಮಾಡಬೇಕಾಗಿತ್ತು. ವಾಸಿಸಲು ಮನೆಯಿಲ್ಲ. ಕಟ್ಟಿದ ಟೆಂಟ್‌ಗಳೇ ನಮ್ಮ ಮನೆ. ಒಂದಿಷ್ಟು ಗುಂಪನ್ನು ಬಿಟ್ಟರೂ ದಾರಿತಪ್ಪುವ ಮುನ್ಸೂಚನೆ, ಎಲ್ಲವೂ ಹೊಸತನ. – ಸುಮಲತಾ ಬಜಗೋಳಿ, ಆಳ್ವಾಸ್ ಕಾಲೇಜು ಮೂಡುಬಿದಿರೆ