Advertisement

ನ್ಯಾಯಬೆಲೆ ಅಂಗಡಿಗೆ ಭೇಟಿ-ಪರಿಶೀಲನೆ

03:35 PM Jan 21, 2021 | Team Udayavani |

ಗುಳೇದಗಡ್ಡ: ನಗರದ ನ್ಯಾಯಬೆಲೆ ಅಂಗಡಿ, ಆಹಾರ ಸಂಸ್ಕರಣಾ ಘಟಕಕ್ಕೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್‌.ವಿ. ಶಿವಶಂಕರ ಬುಧವಾರ ದಿಢೀರ್‌ ಭೇಟಿ ನೀಡಿದರು.

Advertisement

ನಗರದ ಪಡಿತರ ವಿತರಣೆ ಕೇಂದ್ರಗಳಿಗೆ ಭೇಟಿ ನೀಡಿ, ಆಹಾರ ಧಾನ್ಯಗಳ ತೂಕ ಮತ್ತು ಸ್ಟಾಕ್‌ ಪರಿಶೀಲಿಸಿದರು. ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಕೇಂದ್ರದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಮತ್ತು ಅಂಗಡಿ ಮಾಲೀಕರು ಗ್ರಾಹಕರನ್ನು ಸತಾಯಿಸುತ್ತಿದ್ದರೆ ತಮ್ಮ ಗಮನಕ್ಕೆ ತರಬೇಕು. ಅಂಥವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ದೂರುಗಳಿದ್ದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದೂರು ಸಲ್ಲಿಸುವಂತೆ ತಿಳಿಸಿದರು.

ಬಳಿಕ ಬಾಗಲಕೋಟೆ ರಸ್ತೆಗೆ ಹೊಂದಿಕೊಂಡಿರುವ ಗುಳೇದಗುಡ್ಡ ಪಡಿತರ ದಾಸ್ತಾನು ಕೇಂದ್ರಕ್ಕೂ ತೆರಳಿ ಅಲ್ಲಿನ ಆಹಾರ, ಧಾನ್ಯ ಹಾಗೂ ಸ್ಟಾಕ್‌ ಪರಿಶೀಲಿಸಿದರು.

ಇದನ್ನೂ ಓದಿ:ಧರ್ಮಗುರು ಅವಹೇಳನ ಖಂಡಿಸಿ ಪ್ರತಿಭಟನೆ

ಈ ವೇಳೆ ಆಯೋಗ ಸದಸ್ಯೆ ಮಂಜುಳಾ ಸಾತನೂರ, ಜಿಲ್ಲಾ ಆಹಾರ ಮತ್ತು ಸರಬರಾಜು ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಸಿಡಿಪಿಒ ಅನ್ನಪೂರ್ಣ ಕುಬಕಡ್ಡಿ, ಜಿಲ್ಲಾ ವಿಕಲಚೇತನ ಕಲ್ಯಾಣ ಅ ಧಿಕಾರಿ ಸವಿತಾ ಕಾಳೆ, ಆಹಾರ ನಿರೀಕ್ಷಕ ಎ.ಎಂ. ಮುಂಡಾಸದ, ಪಡಿತರ ವಿತರಕರ ಸಂಘದ ಕಾರ್ಯದರ್ಶಿ ಕುಮಾರ ಮಂಗಳಗುಡ್ಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next