Advertisement
ಶನಿ ಶಿಂಗ್ನಾಪುರ ಮಹಾರಾಷ್ಟ್ರದ ಅಹ್ಮದಾನಗರ ಜಿಲ್ಲೆಯ ಒಂದು ಹಳ್ಳಿ, ಈ ಊರಿನಲ್ಲಿ ನೂರಾರು ಮನೆಗಳಿವೆ ಆದರೆ ಒಂದೂ ಮನೆಗೂ ಬಾಗಿಲಿಲ್ಲ ಹಾಗಾದರೆ ಈ ಊರಿನಲ್ಲಿ ಕಳ್ಳತನ ನಡೆಯೋದಿಲ್ವಾ ಎಂದರೆ ಹಿಂದೆ ಎರಡು ಭಾರಿ ಕಳ್ಳತನ ಯತ್ನ ನಡೆದಿತ್ತು ಆದರೆ ಶನಿ ದೇವರು ಅದನ್ನು ತಡೆದಿದ್ದರು ಅಂದಿನಿಂದ ಇಂದಿನವರೆಗೂ ಯಾವುದೇ ಕಳ್ಳತನ ಪ್ರಕರಣ ನಡೆದಿಲ್ಲ ಎನ್ನುತ್ತಾರೆ ಊರಿನವರು.
ಅಹ್ಮದಾನಗರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಶನಿ ಶಿಂಗ್ನಾಪುರ ಊರು ಇಲ್ಲಿರುವ ಶನಿ ದೇವರಿಂದ ಬಂದಿದೆ ಎನ್ನಲಾಗಿದೆ ಅಲ್ಲದೆ ಶನಿ ದೇವರು ಈ ಊರಿನಲ್ಲಿ ನೆಲೆಸಿರುವುದರಿಂದ ಶನಿ ಶಿಂಗ್ನಾಪುರ ಎಂಬ ಹೆಸರು ಬಂದಿದೆ.
Related Articles
ಶನಿ ದೇವರ ಶಕ್ತಿಗೆ ಶನಿ ಶಿಂಗ್ನಾಪುರ ಗ್ರಾಮದಲ್ಲಿ ಕಳ್ಳರು ಕಳ್ಳತನಕ್ಕೆ ಹೆದರುತ್ತಾರೆ. ಹಾಗಾಗಿ ಇಲ್ಲಿರುವ ಎಲ್ಲ ಮನೆಗಳಿಗೂ ಬಾಗಿಲುಗಳೇ ಇಲ್ಲ. ಅಲ್ಲದೆ ಇಲ್ಲಿನ ಕಚೇರಿಗಳಿಗೂ ಬಾಗಿಲುಗಳಿಲ್ಲ. ಜನರು ಧೈರ್ಯದಿಂದ ತಮ್ಮ ಮನೆಗಳನ್ನು ತೆರೆದಿಟ್ಟು ಬೇರೆ ಊರುಗಳಿಗೆ ಹೋಗಿ ಬರುತ್ತಾರೆ. ಇಲ್ಲಿನ ಪ್ರಸಿದ್ಧ ಶನಿದೇವನ ದೇವಾಲಯದಲ್ಲಿ 5 ಅಡಿ ಎತ್ತರದ ಶನಿ ದೇವರ ಪ್ರತಿಮೆ ಇದೆ ಇಲ್ಲಿಗೆ ದೂರದ ಊರುಗಳಿಂದ ಭಕ್ತರು ಶನಿ ದೇವರ ದರ್ಶನ ಪಡೆಯಲು ಬರುತ್ತಾರೆ.
Advertisement
ದಂತಕಥೆಗಳು ಹೇಳುವ ಪ್ರಕಾರ ಇಲ್ಲಿನ ಹಳ್ಳಿಯಲ್ಲಿ ಒಮ್ಮೆ ಭಾರಿ ಮಳೆಯಾಗಿದ್ದು ಈ ವೇಳೆ ಶಿಂಗ್ನಾಪುರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ನದಿ ತೀರಕ್ಕೆ ಬೃಹತ್ ಗಾತ್ರದ ಕರಿ ಕಲ್ಲೊಂದು ನದಿ ತೀರಕ್ಕೆ ಬಂದಿತ್ತಂತೆ ಇದನ್ನು ಅಲ್ಲಿ ಆಟವಾಡುತ್ತಿದ್ದ ಮಕ್ಕಳು ನೋಡಿದ್ದಾರೆ ಇದನ್ನು ಕಂಡು ಹೆದರಿದ ಮಕ್ಕಳು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದಾರೆ ಏನಪ್ಪಾ ಎಂದು ನದಿ ತೀರಕ್ಕೆ ಬಂದು ನೋಡಿದಾಗ ಬೃಹತ್ ಗಾತ್ರದ ಕರಿ ಕಲ್ಲು ನದಿ ದಡದಲ್ಲಿ ಕಂಡು ಬಂದಿದೆ ಈ ವೇಳೆ ಏನೆಂದು ನೋಡಲು ಕೋಲಿನಿಂದ ಕಲ್ಲನ್ನು ದೂಡಿದ್ದಾರೆ ಆಗ ಕಲ್ಲಿನಿಂದ ರಕ್ತ ಸುರಿಯಲು ಆರಂಭವಾಗಿದೆ ಇದನ್ನು ಕಂಡು ಗಾಬರಿಗೊಂಡ ಏನೋ ಶಕ್ತಿ ಇದೆ ಎಂದು ಹೇಳಿ ಅಲ್ಲಿಂದ ಮನೆಗೆ ತೆರಳಿದ್ದಾರೆ. ಅದೇ ದಿನ ರಾತ್ರಿ ಊರಿನ ಮುಖಂಡನಿಗೆ ಕನಸ್ಸೊಂದು ಬಿದ್ದಿದ್ದು ನಾನು ಶನಿ ದೇವ ನಾನು ನಿಮ್ಮ ಊರಿನಲ್ಲಿರುವ ನದಿ ತೀರದಲ್ಲಿ ಇದ್ದೇನೆ ನನಗೊಂದು ಉಳಿದುಕೊಳ್ಳಲು ನೆಲೆ ಕಟ್ಟಿ ಕೊಡಿ ನಿಮ್ಮ ಊರಿನ ರಕ್ಷಣೆ ನಾನು ಮಾಡುತ್ತೇನೆ ಎಂದು ಆದೇಶ ನೀಡುತ್ತದೆ, ಅಷ್ಟು ಕೇಳಿದ ಮಾತ್ರಕ್ಕೆ ಎಚ್ಚೆತ್ತ ಮುಖಂಡ ಊರಿನ ಜನರನ್ನು ಕರೆಸಿ ತನಗೆ ಕನಸಿನಲ್ಲಿ ಶನಿ ದೇವರು ಬಂದು ದೇವಸ್ಥಾನ ಕಟ್ಟಿ ಕೊಡುವಂತೆ ಆದೇಶ ನೀಡಿದ್ದಾರೆ ಹಾಗಾಗಿ ಕೂಡಲೇ ನದಿ ತೀರದಲ್ಲಿರುವ ಕರಿ ಕಲ್ಲನ್ನು ತಂದು ದೇವರ ಆಜ್ಞೆಯಂತೆ ಛಾವಣಿ ಇಲ್ಲದ ದೇವಾಲಯವನ್ನು ಊರಿನಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ಆರಂಭಿಸುತ್ತಾರೆ. ಅಂದಿನಿಂದ ಊರಿನಲ್ಲಿ ಯಾವುದೇ ಕಳ್ಳತನ ಸೇರಿದಂತೆ ಅಹಿತಕರ ಘಟನೆಗಳು ನಡೆದಿಲ್ಲವಂತೆ.
ಶನಿ ದೇವರ ದರ್ಶನ ಪಡೆಯಲು ಅದೆಷ್ಟೋ ದೂರದಿಂದ ಲಕ್ಷಾಂತರ ಮಂದಿ ಭಕ್ತರು ಬರುತ್ತಾರಂತೆ ಅಲ್ಲದೆ ದೇವರಿಗೆ ಇಷ್ಟವಾದ ವಸ್ತುಗಳನ್ನು ತಂದು ದೇವರಿಗೆ ವಿಶೇಷ ಪೂಜೆ ನೆರವೇರಿಸುತ್ತಾರೆ ಇದರಿಂದ ತಮ್ಮ ಕಷ್ಟಗಳು, ಅರೋಗ್ಯ ಸಮಸ್ಯೆಗಳು ಪರಿಹಾರ ಆಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಪೊಲೀಸ್ ಠಾಣೆ ಇದ್ದರೂ ಅಪರಾಧ ಪ್ರಕರಣವಿಲ್ಲ:
ಈ ಊರಿನಲ್ಲಿ ಒಂದು ಪೊಲೀಸ್ ಠಾಣೆ ಇದ್ದು ಇಲ್ಲಿನ ಪೊಲೀಸರು ನೀಡಿರುವ ಮಾಹಿತಿಯಂತೆ ಇದುವರೆಗೂ ಈ ಠಾಣೆಯಲ್ಲಿ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ ಎನ್ನುತ್ತಾರೆ. *ಸುಧೀರ್ , ಪರ್ಕಳ