Advertisement

ಹುಣಸೂರು ಅರಸು ಕಟ್ಟಿದ ವೈವಿಧ್ಯಪೂರ್ಣ ತಾಲೂಕು

09:54 PM Aug 20, 2019 | Team Udayavani |

ಹುಣಸೂರು: ಹುಣಸೂರು ಅರಸು ಕಟ್ಟಿದ ವೈವಿಧ್ಯಪೂರ್ಣ ತಾಲೂಕು. ಇಲ್ಲಿ ಇಂದಿಗೂ ಸಾಮಾಜಿಕ ನ್ಯಾಯದ ತಳಹದಿಯಲ್ಲಿಯೇ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇಂತಹಪುಣ್ಯ ಭೂಮಿಯಲ್ಲಿ ತಮಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯವಾಗಿದೆ ಎಂದು ತಹಶೀಲ್ದಾರ್‌ ಐ.ಇ.ಬಸವರಾಜು ತಿಳಿಸಿದರು.

Advertisement

ನಗರದ ಬಾಚಳ್ಳಿ ಅಂಬೇಡ್ಕರ್‌ ಕಾಲೋನಿಯಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ದೇವರಾಜ ಅರಸು ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಅರಸು ಸಾಮಾಜಿಕ ನ್ಯಾಯದ ದೇವರಾಗಿದ್ದಾರೆ. ಅರಸರು ಜಾರಿಗೆ ತಂದ ಹಲವಾರು ಕ್ರಾಂತಿಕಾರಿ ಯೋಜನೆಗಳಿಂದಾಗಿ ಇಂದು ಲಕ್ಷಾಂತರ ಮಂದಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಸ್ಮರಿಸಿದರು.

ಮಾಜಿ ಶಾಸಕ ಎಚ್‌.ವಿಶ್ವನಾಥ್‌ ಮಾತನಾಡಿ, ಅರಸು ಕನಸನ್ನು ನನಸಾಗಿಸಲು ಅವರ ಮಂತ್ರಿಮಂಡಲದ ಸಚಿವ ಬಸವಲಿಂಗಪ್ಪ ಶ್ರಮಿಸಿದರು. ಶೋಷಿತರ ಅಭಿವೃದ್ಧಿಯ ವಿಚಾರ ಬಂದಾಗ ನಾವೆಲ್ಲರೂ ಬಸವಲಿಂಗಯ್ಯನವರನ್ನು ಮರೆಯುತ್ತಿದ್ದೇವೆಂದರು.

ಅಂಬೇಡ್ಕರ್‌ ಕನಸನ್ನು ನನಸಾಗಿಸಲು ಅರಸರು ಪ್ರಯತ್ನಿಸಿದರೆ, ಅರಸರ ಕನಸನ್ನು ನನಸಾಗಿಸಲು ಅವರ ಮಂತ್ರಿಮಂಡಲದ ಸಚಿವ ಬಸವಲಿಂಗಪ್ಪ ಶ್ರಮಿಸಿದರು. ಮುಂದಿನ ದಿನಗಳಲ್ಲಿ ಬಸವಲಿಂಗಯ್ಯನವರ ಜೀವನಾದರ್ಶಗಳ ಕುರಿತು ವಿಚಾರ ಸಂಕಿರಣ ನಡೆಸುವ ಬಯಕೆ ಇದೆ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿಪದಕ ಪುರಸ್ಕೃತ ಹುಣಸೂರು ಉಪವಿಭಾಗದ ಡಿವೈಎಸ್‌ಪಿ ಕೆ.ಸುಂದರರಾಜ್‌ರನ್ನು ಸನ್ಮಾನಿಸಲಾಯಿತು. ಬೆಂಗಳೂರು ಮೂಲದ ರಮೇಶ್‌ ಮತ್ತು ಅಚ್ಯುತ ಕುಟುಂಬದವರು ಕಾಲೋನಿಯ 70 ಕುಟುಂಬಗಳಿಗೆ ಜೀವನಾವಶ್ಯಕ ವಸ್ತುಗಳನ್ನು ಒಳಗೊಂಡ ಕಿಟ್‌ ವಿತರಿಸಿದರು.

Advertisement

ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ಮುಖಂಡರಾದ ಹರಿಹರಾನಂದಸ್ವಾಮಿ, ಡಿ.ಕೆ.ಕುನ್ನೇಗೌಡ, ಬಸವಲಿಂಗಯ್ಯ, ಶಿವಶೇಖರ್‌, ಕಿರಿಜಾಜಿ ಗಜೇಂದ್ರ, ಕಟ್ಟೆಮಳಲವಾಡಿ ದೇವೇಂದ್ರ, ಪೌರಾಯುಕ್ತ ಶಿವಪ್ಪನಾಯಕ, ಇಒ ಗಿರೀಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next