Advertisement

ಶಿರಸಿ:  ಗ್ರಾಮದ 500 ಜನರಿಗೆ ಲಸಿಕೆ ನೀಡಿದ ನರ್ಸ್‍ಗೆ ಶ್ಲಾಘನೆ

08:11 PM Aug 23, 2021 | Team Udayavani |

ಶಿರಸಿ: ತಾಲೂಕಿನ ಯಡಹಳ್ಳಿಯ ಗ್ರಾಮ‌ ಪಂಚಾಯತದಲ್ಲಿ ಕೋವಿಡ್ ಲಸಿಕೆ ಸೋಮವಾರ ಹಾಕಲಾಗಿದ್ದು, ಓರ್ವ ನರ್ಸ ಸುಮಾರು ೫೦೦ ಜನರಿಗೆ ‌ಲಸಿಕೆ‌ ನೀಡಿ ಗಮನ ಸೆಳೆದಿದ್ದಾರೆ.

Advertisement

ಯಡಹಳ್ಳಿಯಲ್ಲಿ ಮುಂಜಾನೆ ಹತ್ತರಿಂದ ಆರಂಭಗೊಂಡ‌ ಲಸಿಕಾಕರಣವನ್ನು  ನರ್ಸ್ ಜ್ಯೋತಿ ಎಸ್.ನಾಯ್ಕ ಅವರು ಯಶಸ್ವಿಯಾಗಿ ಪೂರೈಸಿದರು.

ಗ್ರಾ.ಪಂ ಪಿಡಿಓ ಪ್ರೀತಿ ಶೆಟ್ಟಿ ಹಾಗೂ ಸಿಬಂದಿಗಳು, ಅಧ್ಯಕ್ಷೆ ರಾಜೇಶ್ವರಿ ಗೌಡ, ಉಪಾಧ್ಯಕ್ಷ ರವೀಶ ಹೆಗಡೆ, ಸದಸ್ಯರಾದ ಭಾಸ್ಕರ ಶೆಟ್ಟಿ, ಮಧುಕರ ಶೇಟ್ ಹಾಗೂ ಆಶಾ ಕಾರ್ಯಕರ್ತೆಯರು ಸಹಕಾರ‌ ನೀಡಿದರು.

ಸುಮಾರು ೫೦೦ ಜನರಿಗೆ ಎಡಬಿಡದೇ ನಗು‌ ಮೊಗದಿಂದಲೇ ಲಸಿಕೆ ಹಾಕಿದ ನರ್ಸ್ ಕುರಿತು ಸಾರ್ವಜನಿಕ ಶ್ಲಾಘನೆ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next