Advertisement

10 ಬಗೆಯ ವಸ್ತುಗಳಿಂದ ತಯಾರಾದ ವಿಶಿಷ್ಟ ನಕ್ಷತ್ರ: “ನೈಸರ್ಗಿಕ ಕ್ರಿಸ್ಮಸ್‌ ನಕ್ಷತ್ರ’ಕ್ಕೆ ದಶಮ ಸಂಭ್ರಮ

12:20 AM Dec 24, 2022 | Team Udayavani |

ಮೂಡುಬಿದಿರೆ: ಕಳೆದ ಹತ್ತು ವರ್ಷಗಳಿಂದ ನೈಸರ್ಗಿಕ ವಸ್ತುಗಳನ್ನು ಬಳಸಿ ಬೃಹತ್‌ ಗಾತ್ರದ ವಿಶಿಷ್ಟ ಕ್ರಿಸ್ಮಸ್‌ ನಕ್ಷತ್ರ ರಚಿಸಿ ಸುದ್ದಿಯಾಗುತ್ತಿರುವ ಶಿರ್ತಾಡಿಯ ಲೈಫ್‌ ಸಂಸ್ಥೆಯವರು ಈ ಬಾರಿ ತಲಾ 1 ಕೆಜಿ ಸಾಸಿವೆ, ಕೊತ್ತಂಬರಿ, ಹುರುಳಿ, ರಾಗಿ, ಹಸಿ ಅಡಿಕೆ, ತಲಾ 2 ಕೆಜಿ ನೆಲಗಡಲೆ, ಒಣ ಅಡಿಕೆ ಮತ್ತು 1 ಅಶ್ವಶಕ್ತಿಯ ಮೋಟಾರು, ವಾಹನದ ಹೌಸಿಂಗ್‌ ಮತ್ತು ಮರದ ತುಂಡುಗಳನ್ನು ಬಳಸಿ, ತಿರುಗುವ ಕ್ರಿಸ್ಮಸ್‌ ನಕ್ಷತ್ರವನ್ನು ರಚಿಸಿ ಮೌಂಟ್‌ ಕಾರ್ಮೆಲ್‌ ಚರ್ಚ್‌ನ‌ ಆವರಣದಲ್ಲಿ ಜ. 5ರ ವರೆಗೆ ಪ್ರದರ್ಶನಕ್ಕೆ ಇರಿಸಿದ್ದಾರೆ.

Advertisement

ನಕ್ಷತ್ರದ ಮಧ್ಯಭಾಗದಲ್ಲಿ ಏಸುಕ್ರಿಸ್ತನ ಹುಟ್ಟನ್ನು ಬಿಂಬಿಸುವ ಬೈಹುಲ್ಲಿನ ಮೇಲ್ಛಾವಣಿಯ ಆಕರ್ಷಕ ಗೋದಲಿ ಯನ್ನು ಅಳವಡಿಸಿದ್ದು ಒಟ್ಟು 120 ಕೆಜಿ ತೂಕ, 12 ಅಡಿ ಎತ್ತರ, 11 ಅಡಿ ಅಗಲವಿದೆ. ಮೋಟಾರು ಚಾಲಿತ, ದೀಪಾಲಂಕೃತ ನಕ್ಷತ್ರವನ್ನು ತಯಾರಿಸಲು ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಜೋಯೆಲ್‌ ಸಿಕ್ವೇರಾ 3 ವಾರಗಳ ಕಾಲ ಶ್ರಮಿಸಿದ್ದು, ಸದಸ್ಯರಾದ ನವೀನ್‌ ಶೆಟ್ಟಿ ಶಿರ್ತಾಡಿ, ಸಿಪ್ರಿಯಾನ್‌ ಡಿ’ಸೋಜಾ ಶಿರ್ತಾಡಿ, ರಮೇಶ್‌ ಶೆಟ್ಟಿ ಮಂಗಳೂರು, ನಾಗರಾಜ್‌ ಅಲಂಗಾರು ಸಹಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next