Advertisement

ನಾಗರಪಂಚಮಿಯಂದು ಚೇಳಿಗೆ ಹಾಲೆರೆದು ಜಾತ್ರೆ!

08:57 PM Aug 03, 2022 | Team Udayavani |

ದೋಟಿಹಾಳ: ಸಾಮಾನ್ಯವಾಗಿ ರಾಜ್ಯದ ನಾಗರಪಂಚಮಿಯಂದು ನಾಗರ ಹಾವಿಗೆ ಮತ್ತು ಹಾವಿನ ವಿಗ್ರಹಕ್ಕೆ  ಹಾಲು ಹಾಕುತ್ತಾರೆ ಆದರೆ ಈ ಗ್ರಾಮದಲ್ಲಿ ಮಾತ್ರ ಚೋಳುಗಳಿಗೆ ಹಾಲೆರೆದು ಹಬ್ಬ ಆಚರಿಸುತ್ತಾರೆ.

Advertisement

ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಕಂದಕೂರು ಗ್ರಾಮದ ಕೊಂಡಮಾಯಿ ಬೆಟ್ಟದ ಮೇಲೆ ಪ್ರತಿ ನಾಗರಪಂಚಮಿಯಂದು ಚೇಳುಗಳ ಹಾಲೆರೆಯದು ಜಾತ್ರೆಯಲ್ಲಿ ಚೇಳಿಗಳನ್ನು ಮೈಮೇಲೆ ಬಿಟ್ಟುಕೊಂಡು ಆರಾಧಿಸಿಸುತ್ತಾರೆ. ಈ ಚೋಳಿನ ಜಾತ್ರೆಗೆ ರಾಜ್ಯದ ವಿವಿಧ ಭಾಗದ ಜನರು ಸೇರಿದಂತೆ ಪಕ್ಕದ ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಭಕ್ತರು ಪಂಚಮಿ ದಿನ ಇಲ್ಲಿಗೆ ಆಗಮಿಸುತ್ತಾರೆ.

ಮಾಯಿ ಅಂದರೆ ಚೇಳುಗಳ ದೇವತೆ. ಜುಲೈ- ಆಗಸ್ಟ್ ತಿಂಗಳ, ಶ್ರಾವಣ ಮಾಸದ ನಾಗರಪಂಚಮಿಯಂದು ಇಡೀ ಬೆಟ್ಟದಲ್ಲಿ ಕೆಂಪು ಚೇಳುಗಳದ್ದೇ ಕಾರುಬಾರು. ಕಲ್ಲುಸಂದಿಗಳಲ್ಲಿರುವ ಚೇಳುಗಳನ್ನು ಹೊರ ತೆಗೆದು ಯುವಕರು, ಮಕ್ಕಳು, ಮಹಿಳೆಯರು, ಹಿರಿ-ಕಿರಿಯರು ಮೈಮೇಲೆಲ್ಲಾ ಬಿಟ್ಟುಕೊಂಡು ಹಬ್ಬ ಆಚರಿಸುತ್ತಾರೆ.

ಇದನ್ನೂ ಓದಿ: ಶಬರಿಮಲೆ, ಮಂತ್ರಾಲಯದಲ್ಲಿ ಛತ್ರ ಅಭಿವೃದ್ದಿಗೆ ವಿಶೇಷ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ

ಚೇಳುಗಳ ಜೊತೆ ಸರಸ: ಅಚ್ಚರಿ ಎಂದರೆ, ಈ ಜಾತ್ರೆಗೆ ಬರುವ ಬಹುತೇಕರಿಗೆ ಚೇಳು ಕಡಿಯುವುದೇ ಇಲ್ಲ. ಚೇಳುಗಳು ಮೈಮೇಲೆ ಹರಿದಾಡಿದ ಬಳಿಕ ಕೆಳಗೆ ಬಿಡುತ್ತಾರೆ. ಕೆಲವರಿಗೆ ಕಡಿದರೂ ಅಲ್ಲಿನ ‘ಆಧಾರ (ವಿಭೂತಿ) ಹಚ್ಚಿದರೆ ನೋವು ಮಾಯವಾಗಿ ವಿಷ ಇಳಿಯುತ್ತದೆ ಅನ್ನೋ ನಂಬಿಕೆಯಿದೆ.

Advertisement

-ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ, ಭೀಮಣ್ಣ ಬ ವಡವಟ್

Advertisement

Udayavani is now on Telegram. Click here to join our channel and stay updated with the latest news.

Next