ಸಂಕೇಶ್ವರ: ಹುಕ್ಕೇರಿ ತಾಲೂಕಿನ ಹರಗಾಪುರಗಡ ಗ್ರಾಮದಲ್ಲಿ ರಸ್ತೆ ಕಾಮಗಾರಿ ಮಾಡುತ್ತಿದ್ದಸಂದರ್ಭದಲ್ಲಿ ಪುರಾತನ ಸುರಂಗ ಮಾರ್ಗ (ಗುಹೆ) ಪತ್ತೆಯಾಗಿದ್ದು, ಕೋಟೆ ಪಕ್ಕದಲ್ಲಿ ಈ ಸುರಂಗ ಮಾರ್ಗ (ಗುಹೆ) ಪತ್ತೆಯಾಗಿರುವದು ಹಲವು ಅಚ್ಚರಿಗೆ ಕಾರಣವಾಗಿದೆ.
ಈ ಸುರಂಗ ಮಾರ್ಗವು (ಗುಹೆ)ಯು ಸುಮಾರು 3.5 ಅಡಿಎತ್ತರ, 3 ಅಡಿ ಅಗಲ ಇದೆ. ಸುಮಾರು28 ಅಡಿಗಿಂತಲೂ ಹೆಚುÌ ಉದ್ದವಾಗಿದೆ ಎನ್ನಲಾಗಿದೆ. ಈ ಸುರಂಗ ಮಾರ್ಗ(ಗುಹೆ)ದಲ್ಲಿ ಕೆಲವು ಯುವಕರು ಸ್ವಚ್ಚತಾ ಕಾರ್ಯ ಮಾಡಿದ್ದಾರೆ. ಈ
ಸುರಂಗ ಮಾರ್ಗವು ಕಲ್ಲಿನ ಗುಡ್ಡದಲ್ಲಿ ಕೊರೆದ ಸುರಂಗ ಮಾರ್ಗ ವಾಗಿದೆ. ಹರಗಾಪೂರ ಗಡ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಸಚಿವ ಹಾಗೂ ಹುಕ್ಕೇರಿ ಶಾಸಕ ಉಮೇಶಕತ್ತಿ ಕೆಲ ದಿನಗಳ ಹಿಂದೆ ಚಾಲನೆ ನೀಡಿದ್ದರು.
ಹರಗಾಪೂರ ಗಡ ಗ್ರಾಮವು ಎತ್ತರದ ಪ್ರದೇಶದಲ್ಲಿದ್ದು, ಅಲ್ಲಿನಕೋಟೆಯನ್ನು ಭೋಜರಾಜ ಎನ್ನುವರಾಜನು ನಿರ್ಮಾಣ ಮಾಡಿದ್ದನು ಎಂದು ಹೇಳಲಾಗುತ್ತಿದೆ. ನಂತರ ಛತ್ರಪತಿ ಶಿವಾಜಿ ಮಾಹಾರಾಜರು ಈ ಕೋಟೆ ಅಭಿವೃದ್ಧಿಪಡಿಸಿದ್ದರು ಎನ್ನುವ ಮಾತುಗಳು ಇವೆ. ಆದರೆ ಈಗ ಈ ಕೋಟೆಪ್ರದೇಶದಲ್ಲಿ ಜನರ ಮನೆಗಳಿದ್ದು,ಈ ಕೋಟೆ ಹಾಗೂ ಮನೆಗಳಿಗೆ ಸಂಪರ್ಕ ಮಾಡುವ ನಿಟ್ಟಿನಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ.ಜೆಸಿಬಿ ಯತ್ರದ ಮೂಲಕ ಗುಡ್ಡವನ್ನುಅಗೆಯುತ್ತಿರುವಾಗ ಸುರಂಗ ಮಾರ್ಗ (ಗುಹೆ) ಪತ್ತೆಯಾಗಿದೆ.
ಅದರಂತೆ ಈ ಹರಗಾಪೂರ ಗಡದಲ್ಲಿರುವ ಈ ಕೋಟೆಯಿಂದ ಸಂಕೇಶ್ವರದ ನಗರದ ಪುರಾತನಕಾಲದ ಶ್ರೀ ಶಂಕರಾಚಾರ್ಯರ ಮಠಕ್ಕೆ ಹಾಗೂ ಮಹಾರಾಷ್ಟ್ರದ ಗಡಿಹಿಂಗ್ಲಜ್ ತಾಲೂಕಿನ ಸಾಮಾನ ಗಡ ಎಂಬ ಗುಡ್ಡದಲ್ಲಿನ ಕೋಟೆಪ್ರದೇಶಕ್ಕೆ ಸುರಂಗ ಮಾರ್ಗದಿಂದಸಂಪರ್ಕ ಎಂಬುದು ಹಳಬರಮಾತು. ಈಗ ಹರಗಾಪೂರ ಗಡದಲ್ಲಿ ಪತ್ತೆಯಾಗಿರುವ ಸುರಂಗ ಮಾರ್ಗ (ಗುಹೆ) ಅದಕ್ಕೆ ಪುಷ್ಟಿ ನೀಡುವಂತಿದೆ.
–ಪಾರೇಶ ಭೋಸಲೆ