Advertisement

ಸಾಧಾರಣ ಮಳೆಗೆ ಧರೆಗುರುಳಿದ ಮರ

12:53 AM May 12, 2019 | Team Udayavani |

ಬೆಂಗಳೂರು: ನಗರದಲ್ಲಿ ಶನಿವಾರ ಸುರಿದ ಸಾಧಾರಣ ಮಳೆಗೆ ಮರವೊಂದು ಧರೆಗುರುಳಿದೆ. ಹಲವೆಡೆ ರೆಂಬೆ-ಕೊಂಬೆಗಳು ಮುರಿದು ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

Advertisement

ಶನಿವಾರ ಸಂಜೆ ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ಬಸವನಗುಡಿ, ಲಾಲ್‌ಬಾಗ್‌, ಆರ್‌.ಆರ್‌.ನಗರ, ಮಲ್ಲೇಶ್ವರ, ವಿಜಯನಗರ, ಯಶವಂತಪುರ, ಕೆ.ಆರ್‌.ಪುರ, ಮಹದೇವಪುರ ಸೇರಿದಂತೆ ಹಲವೆಡೆ ಒಂದು ಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆಯಾಯಿತು.

ಈ ವೇಳೆ ಮಹಾಲಕ್ಷ್ಮೀ ಬಡಾವಣೆಯಲ್ಲಿ ಒಂದು ಮರ ಧರೆಗುರುಳಿದೆ. ಇತರೆಡೆ ರೆಂಬೆ ಕೊಂಬೆಗಳು ಮುರಿದಿವೆ ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಎಲ್ಲಿ ಎಷ್ಟು ಮಳೆ: ಎಚ್‌ಎಎಲ್‌ ಭಾಗದಲ್ಲಿ 11.5 ಮಿಲಿ ಮೀಟರ್‌ ಮಳೆಯಾಗಿದ್ದು, ಕೊಟ್ಟಿಗೆಪಾಳ್ಯದಲ್ಲಿ 11 ಮಿ.ಮೀ, ಎಚ್‌ಎಸ್‌ಆರ್‌ ಬಡಾವಣೆ 10.5, ನಂದಿನಿ ಬಡಾವಣೆ, ಹೊಯ್ಸಳ ನಗರ, ಬೊಮ್ಮನಹಳ್ಳಿಯಲ್ಲಿ 10 ಮಿ.ಮೀ, ಅಗ್ರಹಾರ ದಾಸರಹಳ್ಳಿ, ಕೋನೇನ ಅಗ್ರಹಾರ 9.5 ಮಿ.ಮೀ, ದೊಡ್ಡನೆಕ್ಕುಂದಿ 9 ಮಿ.ಮೀ, ವಿಜಯನಗರ, ಪ್ಯಾಲೆಸ್‌ ಗುಟ್ಟಹಳ್ಳಿ 5 ಮಿ.ಮೀ, ಸಾರಕ್ಕಿ 4.5 ಮಿ.ಮೀ, ಬಸವನಗುಡಿ, ಕಣ್ಣೂರು 4 ಹಾಗೂ ಆರ್‌.ಆರ್‌.ನಗರದಲ್ಲಿ 3.5 ಮಿ.ಮೀ. ಮಳೆ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next