Advertisement

Belthangady ನ್ಯಾಯಕ್ಕಾಗಿ ಪ್ರತಿಭಟಿಸಿದವರ ವಿರುದ್ಧವೇ ದೂರು

11:04 PM Jun 26, 2024 | Team Udayavani |

ಬೆಳ್ತಂಗಡಿ: ಉಜಿರೆಯಲ್ಲಿ ಭಾರೀ ಗಾತ್ರದ ಮರ ಬಿದ್ದು ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ರೀಕ್ಷಾ, ನಿಲ್ಲಿಸಿದ್ದ ಕಾರುಗಳು ಜಖಂಗೊಂಡ ಘಟನೆಯ ಬಳಿಕ ಈ ಬಗ್ಗೆ ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಉದ್ಯಮಿ ಪ್ರವೀಣ್‌ ಫೆರ್ನಾಂಡಿಸ್‌ ಸೇರಿದಂತೆ 15 ಮಂದಿಯ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

ಜೂ. 24ರಂದು ಈ ಘಟನೆ ಸಂಭವಿಸಿದ್ದು ಹೆದ್ದಾರಿ ಕಾಮಗಾರಿ ನಡೆಸುತ್ತಿರುವವರ ಬೇಜವಾಬ್ದಾರಿಯಿಂದಾಗಿ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯರು, ಆಟೋ ಚಾಲಕರು ಮತ್ತು ಸಾರ್ವಜನಿಕರು ಗಾಯಗೊಂಡವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸ್ಥಳದಲ್ಲಿಯೇ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು.

ಇದೀಗ ಜಿಲ್ಲಾಡಳಿತ ಅಥವಾ ಪೊಲೀಸ್‌ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಕಾನೂನು ಬಾಹಿರವಾಗಿ ಅಕ್ರಮವಾಗಿ ಜನರನ್ನು ಗುಂಪು ಸೇರಿಸಿ ಸಾರ್ವಜನಿಕ ರಸ್ತೆಯಲ್ಲಿ ಕೂತು ವಾಹನ ಸುಗಮ ಸಂಚಾರಕ್ಕೆ ತಡೆಯೊಡ್ಡಿ ಜನಸಂಚಾರಕ್ಕೆ ಅಡ್ಡಿ ಉಂಟುಮಾಡಿದ್ದಾರೆ ಎಂದು ಆರೋಪಿಸಿ 15 ಜನರು ಮತ್ತು ಇತರರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಸಂಚಾರ ಪೊಲೀಸ್‌ ಠಾಣೆ ಸಹಾಯಕ ಪೊಲೀಸ್‌ ಉಪ ನಿರೀಕ್ಷಕ ರಾಮಚಂದ್ರ ಅವರು ಈ ಬಗ್ಗೆ ದೂರನ್ನು ದಾಖಲಿಸಿದ್ದು ಪ್ರವೀಣ್‌ ಫೆರ್ನಾಂಡಿಸ್‌, ರಮೇಶ ಗಾಂಧಿನಗರ, ಶೀನಗಾಂಧಿನಗರ, ಇಕ್ಬಾಲ್‌ ಅತ್ತಾಜೆ, ಸಂತೋಷ್‌ ಉಜಿರೆ, ಉಮೇಶ ಆಚಾರ್ಯ, ಅಣ್ಣು ಗಾಂಧಿ ನಗರ, ಸುಜನ್‌ ಪಜಿರಡ್ಕ, ಬಾಬು ಗಾಂಧಿ ನಗರ, ಗಿರೀಶ ಪೆರ್ಲ, ಗೋಪಾಲ ಗಾಂಧಿ ನಗರ, ಗಣೇಶ ಬಡೆಕೊಟ್ಟು, ಉಮರ್‌ ಟಿ.ಬಿ. ಕ್ರಾಸ್‌, ರಂಜನ್‌ ಗಾಂಧಿ ನಗರ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next