Advertisement

ಕೋಲಾರ: ಮತ್ತೆ ಕಠಿಣ ಲಾಕ್‌ಡೌನ್‌ ಅನಿವಾರ್ಯ!

07:24 PM May 31, 2021 | Team Udayavani |

ಕೋಲಾರ: ಜಿಲ್ಲಾಡಳಿತ ಹಿಡಿತ ತಪ್ಪಿ ವ್ಯಾಪಕವಾಗಿಹರಡಿದ್ದ ಕೊರೊನಾ ಸೋಂಕು ಎರಡು ಕಠಿಣ ಲಾಕ್‌ಡೌನ್‌ನಿಂದ ಒಂದಷ್ಟು ತಹಬದಿಗೆ ಬಂದಿದೆ.ಸಂಪೂರ್ಣ ನಿಯಂತ್ರಣಕ್ಕೆ ಬರಬೇಕಾದ್ರೆ ಮತ್ತೂಮ್ಮೆಕಠಿಣ ಕ್ರಮ ಕೈಗೊಳ್ಳಲೇ ಬೇಕಾದ ಅನಿವಾರ್ಯತೆ ಇದೆ.ಸೋಮವಾರ ಮುಕ್ತಾಯ: ನಾಲ್ಕು ದಿನಗಳ ನಂತರಜಿಲ್ಲೆಯಲ್ಲಿ ಕೈಗೊಂಡಿದ್ದ 2ನೇ ಕಠಿಣ ಲಾಕ್‌ಡೌನ್‌ಸೋಮವಾರ ಕೊನೆಗೊಳ್ಳಲಿದೆ.

Advertisement

ಯಥಾ ಪ್ರಕಾರ 6ರಿಂದ 10 ರವರೆಗೂ ವ್ಯಾಪಾರ ವಹಿವಾಟು ಆರಂಭವಾಗಲಿದೆ. ಈ ವೇಳೆ ಜನ ಕೋವಿಡ್‌ಮಾರ್ಗಸೂಚಿ ಪಾಲಿಸದೆ ಗುಂಪಾಗಿ ವ್ಯಾಪಾರಮಾಡುವ ದೃಶ್ಯ ಕಂಡುಬರುತ್ತದೆ.ಲಾಕ್‌ಡೌನ್‌ ಬಿಗಿ ಕ್ರಮಕ್ಕೂ ಮುನ್ನ ನಿತ್ಯ 1 ಸಾವಿರಮೇಲ್ಪಟ್ಟು ಸೋಂಕಿತ ಪ್ರಕರಣ ಪತ್ತೆ ಆಗುತ್ತಿತ್ತು.ಜಿಲ್ಲೆಯ ಬಹುತೇಕ ಆಸ್ಪತ್ರೆಗಳು ಸೋಂಕಿನಿಂದ ತುಂಬಿದ್ದವು. ಜಿಲ್ಲಾಸ್ಪತ್ರೆ ಕಾರಿಡಾರ್‌ನಲ್ಲಿಯೂ ಸೋಂಕಿತರುಬೆಡ್‌ ಸಿಗದೆ ಚಿಕಿತ್ಸೆ ಪಡೆಯುವಂತಹ ವಾತಾವರಣನಿರ್ಮಾಣವಾಗಿತ್ತು. ಎರಡು ವಾರಗಳಿಂದಲೂ ನಾಲ್ಕುದಿನ ಬಿಗಿ ಲಾಕ್‌ಡೌನ್‌ ನಿಯಮ ಜಾರಿಗೊಳಿಸಿದನಂತರ ಪರಿಸ್ಥಿತಿ ಕೊಂಚ ತಿಳಿಗೊಂಡಂತಾಗಿದೆ.

ಪಾಸಿಟಿವಿಟಿ ಹೆಚ್ಚಳ: ಪಾಸಿಟಿವಿಟಿ ದರವು ಇನ್ನೂಶೇ.35 ಆಸುಪಾಸಿನಲ್ಲಿಯೇ ಇರುವುದು ಕೋಲಾರಜಿಲ್ಲೆ ಅಪಾಯ ದಾಟಿದೆ ಎಂದು ಹೇಳಲು ಬರುತ್ತಿಲ್ಲ.ಮೂರು ದಿನಗಳ ಹಿಂದೆ ಶೇ.40 ಇದ್ದ ಪಾಸಿಟಿವಿಟಿದರವು ಇದೀಗ ಶೇ.32ಕ್ಕೆ ಇಳಿದಿದೆ. ಆದರೂ, ರಾಜ್ಯಸರಾಸರಿ ಪಾಸಿಟಿವಿಟಿ ದರವು ಶೇ.15 ಇರುವುದನ್ನುಗಮನಿಸಿದರೆ ಜಿಲ್ಲೆಯು ಅದಕ್ಕೆ ದುಪ್ಪಟ್ಟುಹೊಂದಿರುವುದು ಆತಂಕಕಾರಿ.ಕೋಲಾರ ಜಿಲ್ಲೆಯಲ್ಲಿರುವ 7 ಸಾವಿರಕ್ಕೂ ಹೆಚ್ಚುಸಕ್ರಿಯ ಪ್ರಕರಣಗಳ ಪೈಕಿ, 5 ಸಾವಿರಕ್ಕೂ ಹೆಚ್ಚುಗ್ರಾಮೀಣ ಭಾಗದಲ್ಲಿಯೇ ಇದೆ. ಕೊರೊನಾಸೋಂಕು ಸಮುದಾಯ ಹರಡುವಿಕೆಗೆ ಕಾರಣವಾಗಿರುವುದನ್ನು ದೃಢಪಡಿಸುತ್ತಿದೆ.

ನಿಖರ ಮಾಹಿತಿ ಸಿಗುತ್ತಿಲ್ಲ: ಇಂದಿಗೂ ಸಾಕಷ್ಟುಸೋಂಕಿತರು ಜಿಲ್ಲಾಡಳಿತದ ಗಮನಕ್ಕೆ ಬಾರದೆಜ್ವರ, ಮೈಕೈ ನೋವು, ತಲೆ ನೋವು, ವಾಂತಿಇತ್ಯಾದಿಗಳಿಗೆ ಖಾಸಗಿ ವೈದ್ಯರಿಂದ ಅಥವಾಕೊರೊನಾ ಔಷಧಿ ಕಿಟ್‌ಗಳ ನೆರವಿನಿಂದ ಚಿಕಿತ್ಸೆಪಡೆದು ಮನೆಯಲ್ಲಿಯೇ ಇದ್ದಾರೆ. ಸರಕಾರ ಮತ್ತುಜಿಲ್ಲಾಡಳಿತ ಕೋವಿಡ್‌ ಕೇರ್‌ ಕೇಂದ್ರಗಳಿಗೆ ಬಂದುದಾಖಲಾಗುವಂತೆ ಎಷ್ಟೇ ಮನವಿ ಮಾಡಿದರೂ ಜನತೆಸ್ಪಂದಿಸುತ್ತಿಲ್ಲ.

ಆರಂಭದಲ್ಲಿ ಕೋವಿಡ್‌ ಕೇರ್‌ಕೇಂದ್ರಗಳನ್ನು ತೆರೆಯಲು ಹಿಂದೇಟು ಹಾಕಿದ್ದ ಜಿಲ್ಲಾಡಳಿತ ಇದೀಗ ತೆರೆದರೂ ಸೋಂಕಿತರು ಬರುತ್ತಿಲ್ಲವೆಂಬಂತೆ ಆಗಿಬಿಟ್ಟಿದೆ. ಕೊರೊನಾ ಸೋಂಕು ಹರಡುವಿಕೆ ಕುರಿತಂತೆಸೋಂಕಿತರ ಬಗ್ಗೆ ಇರುವ ಕಳಂಕ ಹಾಗೂಅವರೊಂದಿಗೆ ತಾರತಮ್ಯ ಭಾವನೆಯೊಂದಿಗೆ ಬಂಧುಬಳಗ ವರ್ತಿಸುವ ಕಾರಣದಿಂದ ಬಹುತೇಕಸೋಂಕಿತರು ಮನೆಗಳಲ್ಲಿಯೇ ಚಿಕಿತ್ಸೆ ಪಡೆಯಲುಮುಂದಾಗುತ್ತಿದ್ದಾರೆ. ಇದರಿಂದಲೂ ಕೋಲಾರಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಕುರಿತಂತೆನಿಖರವಾದ ಮಾಹಿತಿ ಸಿಗುತ್ತಿಲ್ಲ. ಇದೇಕಾರಣದಿಂದಲೇ ಗ್ರಾಮಾಂತರ ಪ್ರದೇಶದ ಕೋವಿಡ್‌ಕೇರ್‌ ಕೇಂದ್ರಗಳು ಈಗಲೂ ಖಾಲಿ ಹೊಡೆಯುತ್ತಿವೆ.

Advertisement

ಕೆ.ಎಸ್‌.ಗಣೇಶ್

Advertisement

Udayavani is now on Telegram. Click here to join our channel and stay updated with the latest news.

Next