Advertisement
ಕೆರೆಯಲ್ಲಿ ಬೋಟಿಂಗ್ -ಉದ್ಯಾನವನ ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿದ್ದು, ಕಾಮಗಾರಿ ಅಷ್ಟೇ ವೇಗದಿಂದ ಸಾಗಿದೆ. ವಿವಿಧ ಕೆರೆಗಳ ಅಭಿವೃದ್ಧಿಯ ಮಾದರಿಯನ್ನಿಟ್ಟುಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಯೋಜನೆಯಡಿ ನಾಲ್ಕು ಹಂತದಲ್ಲಿ 6.43 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
Related Articles
ಇತಿಹಾಸ ಪ್ರಸಿದ್ಧ ಈ ಕೆರೆಯನ್ನು ಕರಡಿಕಲ್ ಸಂಸ್ಥಾನ 800ನ್ನು ಆಳಿದ 3ನೇ ಬಿಲ್ಲಮನು(ಕ್ರಿ. ಶ.1025-1050)ನಿರ್ಮಿಸಿದ್ದಾರೆ ಎನ್ನಲಾಗಿದೆ. ಹೈದರಾಬಾದ್ ನಿಜಾಮರ ಹಾಗೂ ಬ್ರಿಟೀಷರ ಆಡಳಿತ ಅವ ಧಿಯಲ್ಲಿ ಲಿಂಗಸುಗೂರು ಜಿಲ್ಲಾ ಕೇಂದ್ರವನ್ನಾಗಿಸಿ ತಮ್ಮ ದಂಡಿನ ತಾಣವನ್ನಾಗಿ ಮಾಡಿ ವಿಹಾರಕ್ಕಾಗಿ ಕೆರೆಗೆ ಬರುತ್ತಿದ್ದರು. ಸೈನಿಕರಿಗೆ-ಕುದುರೆಗಳಿಗೆ ನೀರೊದಗಿಸಲು ಉಪಯೋಗಿಸುತ್ತಿದ್ದರು. ಸಂಜೆ ಹೊತ್ತು ವಿಹರಿಸಲು ಕೆರೆಯ ದಡದಲ್ಲಿ ಎತ್ತರದಲ್ಲಿ ಮಹಲು
ನಿರ್ಮಿಸಲಾಗಿದ್ದು,ಅಧಿಕಾರಿಗಳ ಸ್ಫೋರ್ಟ್ಸ್ ಕ್ಲಬ್ ಆಗಿ ಮಾರ್ಪಾಟ್ಟಿದೆ. ರಾಂಪುರ ಏತ ನೀರಾವರಿ ಕಾಲುವೆಯಿಂದ ಹರಿಯುವ ಹೆಚ್ಚುವರಿ ನೀರನ್ನು ಕಾಲುವೆ ಮೂಲಕ ಈ ಕೆರೆಗೆ ಬಿಡಲಾಗುತ್ತಿದೆ. ಇದರಿಂದ ಅಂತರ್ಜಲವೂ ಹೆಚ್ಚಿಸಿದೆ.
Advertisement
ಕರಡಕಲ್ ಅಭಿವೃದ್ಧಿಗಾಗಿ ಶಾಸಕರು ಆಸಕ್ತಿ ವಹಿಸಿ ಕೆಕೆಆರ್‌ಡಿಬಿಯಿಂದ ನಾಲ್ಕು ಹಂತದಲ್ಲಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಕಾಮಗಾರಿ ವೇಗದಿಂದ ಸಾಗಿದೆ. ಇನ್ನೂ ಎರಡು ತಿಂಗಳಲ್ಲಿ ಕಾಮಗಾರಿ ಮುಗಿಸಿ ಉದ್ಯಾನವನ ಲೋಕಾರ್ಪಣೆಗೊಳಿಸಲಾಗುವುದು.ಶಿವಕುಮಾರ, ಎಇಇ, ಆರ್‌ಡಿಪಿಆರ್
ಲಿಂಗಸುಗೂರು. ಕರಡಕಲ್ ಕೆರೆ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು. ಪುರಸಭೆ ಆಡಳಿತ ಮಂಡಳಿಯವರು ಕೆರೆ ಉದ್ಯಾನವನ ಹಾಳಾಗದಂತೆ ನೋಡಿಕೊಂಡು ಹೋಗಬೇಕಿದೆ.
ಡಿ.ಎಸ್.ಹೂಲಗೇರಿ, ಶಾಸಕರು,
ಲಿಂಗಸುಗೂರು ಶಿವರಾಜ ಕೆಂಭಾವಿ