Advertisement
ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಅತೀ ಹೆಚ್ಚು ಅಂದರೆ 473 ಪ್ರಕರಣ ಕಂಡು ಬಂದಿವೆ. ಉಳಿದಂತೆ ಜನವರಿಯಲ್ಲಿ ಒಟ್ಟು 287, ಫೆಬ್ರವರಿಯಲ್ಲಿ 170, ಮಾರ್ಚ್‌ನಲ್ಲಿ 231, ಎಪ್ರಿಲ್‌ನಲ್ಲಿ 175, ಮೇಯಲ್ಲಿ 233 ಪಾಸಿಟಿವ್ ಪ್ರಕರಣ ದಾಖಲಾಗಿವೆ. ಈ ಪೈಕಿ ನಗರದಲ್ಲಿ ಜನವರಿ-268, ಫೆಬ್ರವರಿ- 152, ಮಾರ್ಚ್-219, ಎಪ್ರಿಲ್-165, ಮೇ-201 ಹಾಗೂ ಜೂನ್ ತಿಂಗಳಲ್ಲಿ 284 ಪ್ರಕರಣಗಳ ಮೂಲಕ ಒಟ್ಟು 1,389 ಮಲೇರಿಯಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಮಲೇರಿಯಾದಿಂದಾಗಿ ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಸಿಬಂದಿ ಮಾಹಿತಿ ನೀಡಿದ್ದಾರೆ.
ಹೊಗೆಬಜಾರ್, ಕಂಟೋನ್ಮೆಂಟ್, ಕೋರ್ಟ್, ಸೆಂಟ್ರಲ್ ಮಾರ್ಕೆಟ್, ಬಂದರು, ಪೋರ್ಟ್, ಮಣ್ಣಗುಡ್ಡ, ದೇರೆಬೈಲ್, ಬೆಂಗ್ರೆ, ಮಿಲಾಗ್ರಿಸ್ ಮುಂತಾದೆಡೆಗಳಲ್ಲಿ ಅತೀ ಹೆಚ್ಚು ಮಲೇರಿಯಾ ವರದಿಯಾಗುತ್ತಿದೆ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಲ್ಲಿಸುವುದು, ಮನೆಯ ಆಸುಪಾಸಿನಲ್ಲಿರುವ ಗುಂಡಿಗಳ ನೀರು ತೆಗೆಯದೇ ಇರುವುದು, ನೀರು ಹರಿದು ಹೋಗಲು ಸ್ಥಳಾವಕಾಶವಿಲ್ಲದಿರುವುದು, ಸೊಳ್ಳೆ ಪರದೆ ಬಳಸದಿರುವುದು ಮುಂತಾದ ಕಾರಣಗಳಿಂದ ಮಲೇರಿಯಾ ತಗಲುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಅಗತ್ಯ ಗಮನ ಹರಿಸಬೇಕು ಎಂದು ಇಲಾಖೆ ವಿನಂತಿಸಿದೆ. ಗ್ರಾಮೀಣ ಭಾಗಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯಲ್ಲಿ ಜನವರಿಯಿಂದ ಜೂನ್ ವರೆಗೆ ಒಟ್ಟು 360 ಡೆಂಗ್ಯೂ ಪ್ರಕರಣಗಳು ಕಂಡುಬಂದಿದೆ.