Advertisement

ಕಲ್ಪನಾತೀತ ಸಿನಿಮಾ

08:45 PM Jun 27, 2019 | mahesh |

ಚಿತ್ರರಂಗಕ್ಕೆ ಬರುವ ಹೊಸಬರು ಒಂದಾ ಆ್ಯಕ್ಷನ್‌ ಸಿನಿಮಾ ಮಾಡುತ್ತಾರೆ, ಇಲ್ಲವಾದಲ್ಲಿ ಸಸ್ಪೆನ್ಸ್‌, ಕ್ರೈಮ್‌, ಥ್ರಿಲ್ಲರ್‌ ಸಿನಿಮಾಗಳ ಮೊರೆ ಹೋಗುತ್ತಾರೆ. ಅದರಲ್ಲೂ ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳ ಮೂಲಕ ಹೊಸತನ ಕಟ್ಟಿಕೊಡಲು ಸಾಕಷ್ಟು ತಂಡಗಳು ಪ್ರಯತ್ನಿಸುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ “ಕಲ್ಪನಾ ವಿಲಾಸಿ’. ಹೌದು, ಹೊಸಬರೇ ಸೇರಿ ಮಾಡಿರುವ “ಕಲ್ಪನಾ ವಿಲಾಸಿ’ ಎಂಬ ಸಿನಿಮಾವೊಂದು ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರ ಮುಂದಿನ ತಿಂಗಳು ತೆರೆಕಾಣಲಿದೆ. ಈಗಾಗಲೇ ಚಿತ್ರದ ಪೋಸ್ಟರ್‌ ಅನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಚಿತ್ರದ ಹಾಡೊಂದು ಕೂಡಾ ಬಿಡುಗಡೆಯಾಗಿ, ಮೆಚ್ಚುಗೆ ಪಡೆಯುತ್ತಿದೆ.

Advertisement

ವಿಶ್ವ ಜಿ ಕಡೂರು ನಿರ್ದೇಶಿಸಿರುವ “ಕಲ್ಪನಾ ವಿಲಾಸಿ’ ಚಿತ್ರ ಒಂದು ಕ್ರೈಮ್‌ ಥ್ರಿಲ್ಲರ್‌ ಜಾನರ್‌ಗೆ ಸೇರಿದ್ದು, ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ. ಚಿತ್ರಕ್ಕೆ ಕಿರಣ್‌ ಎನ್ನುವವರ ಕಥೆ ಇದೆ. ನಟಿ ಕಲ್ಪನಾ ಅವರ ಸಾವಿನ ನಂತರ ಆ ಊರಲ್ಲಿ ಅವರ ಆತ್ಮ ತಿರುಗುತ್ತಿದೆ ಎಂದು ಆ ಊರಿನವರು ಹೇಳುತ್ತಿದ್ದಾರಂತೆ. ಆ ಅಂಶವನ್ನಿಟ್ಟುಕೊಂಡು ಈ “ಕಲ್ಪನಾ ವಿಲಾಸಿ’ ಎಂಬ ಚಿತ್ರ ಮಾಡಲಾಗಿದೆ. ನಿಜಕ್ಕೂ ಆತ್ಮ ತಿರುಗುತ್ತಿದೆಯಾ ಅಥವಾ ಜನರ ಊಹೆನಾ ಎಂಬ ಅಂಶವನ್ನಿಟ್ಟುಕೊಂಡು ಚಿತ್ರವನ್ನು ಕಟ್ಟಿಕೊಡಲಾಗಿದೆಯಂತೆ. ಚಿತ್ರದ ಬಹುತೇಕ ಭಾಗ ಮಡಿಕೇರಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ.

ಅಶೋಕ್‌ ಭಾರಧ್ವಾಜ್‌ ಈ ಚಿತ್ರದ ನಿರ್ಮಾಪಕರು. ವಿಜಯ್‌ ರಾಮ್‌, ವೇದ, ಆಶಿಕ್‌ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.ಸಾಫ್ಟ್ವೇರ್‌ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡಿರುವ ಸಮಾನ ಮನಸ್ಕರು ಈ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರಕ್ಕೆ ವೈಜೆಕೆ ಸಂಗೀತವಿದ್ದು, ಐದು ಹಾಡುಗಳಿವೆ. ಚಿತ್ರದ ಹಾಡೊಂದು ಶುಕ್ರವಾರ (ಜೂ.28)ರಂದು ಬಿಡುಗಡೆಯಾಗಲಿದೆ. ಅಂದಹಾಗೆ, ಇದು ಕ್ರೈಮ್‌ ಥ್ರಿಲ್ಲರ್‌ ಸಿನಿಮಾವಾದ ಕಾರಣ, ಬಹುತೇಕ ನೈಟ್‌ ಎಫೆಕ್ಟ್‌ನಲ್ಲೇ ಚಿತ್ರೀಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next