Advertisement
ರಾಜ್ಯ ಗುಪ್ತಚರ, ಆಂತರಿಕ ಭದ್ರತಾದಳ(ಐಎಸ್‌ಡಿ) ಮಾಹಿತಿ ಮೇರೆಗೆ ಶಿವಮೊಗ್ಗ ಪೊಲೀಸರು ತನಿಖೆ ನಡೆಸು ತ್ತಿದ್ದರು. ತನಿಖಾಧಿಕಾರಿಗಳಿಂದ ಪ್ರಕ ರಣದ ಇಂಚಿಂಚೂ ಮಾಹಿತಿಯನ್ನು ಎನ್‌ಐಎ ಪಡೆದುಕೊಳ್ಳುತ್ತಿದೆ ಎನ್ನಲಾಗಿದೆ.
Related Articles
Advertisement
ಹಿಂದೂ ಮುಖಂಡರ ಹತ್ಯೆಗೆ ಸಂಚು
ಇದೇ ವರ್ಷ ಹಿಂದೂ ಮುಖಂಡ ಹರ್ಷನ ಕೊಲೆಯಾದ ಬಳಿಕ ಸಂಘಟನೆಯನ್ನು ಶಿವಮೊಗ್ಗದಲ್ಲಿ ಬಲ ಪಡಿಸಲು ಇವರಿಗೆ ಮತ್ತೀನ್ ಸೂಚನೆ ನೀಡಿದ್ದರೆನ್ನಲಾಗಿದೆ. ವೀರಸಾವರ್ಕರ್ ಗಲಾಟೆಯಿಂದ ಆಕ್ರೋಶಗೊಂಡ ಶಂಕಿತರು, ಶಿವಮೊಗ್ಗ ಮತ್ತು ರಾಜ್ಯದ ದಕ್ಷಿಣ ಭಾಗದ ಯಾವುದಾದರೂ ಒಂದು ಜಿಲ್ಲೆಯಲ್ಲಿ ದೊಡ್ಡ ವಿಧ್ವಂಸಕ ಕೃತ್ಯ ಎಸಗಬೇಕು. ಅದು ಪ್ರವಾಸಿ ತಾಣ ಅಥವಾ ಸರಕಾರಿ ಸಂಸ್ಥೆ, ಹಿಂದೂ ಸಂಘಟನೆಯ ಕಾರ್ಯಕ್ರಮವಾಗಿರಬಹುದು. ಒಟ್ಟಿನಲ್ಲಿ ದೊಡ್ಡ ಕೃತ್ಯ ಎಸಗಬೇಕು ಎಂದು ಮಾಜ್ ಡಾರ್ಕ್‌ವೆಬ್ ಸೈಟ್ ಮೂಲಕ ಮತ್ತೀನ್‌ನೊಂದಿಗೆ ಚರ್ಚಿಸಿದ್ದ ಎನ್ನಲಾಗಿದೆ. ಇದೇ ವೇಳೆ ಶಿವಮೊಗ್ಗದಲ್ಲಿ ಹರ್ಷ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾಗಿದೆ.ಅಂಥದ್ದೇ ರೀತಿಯಲ್ಲಿ ಶಿವಮೊಗ್ಗ ಮತ್ತು ಮಂಗಳೂರು ಮೂಲದ ಹಿಂದೂ ಮುಖಂಡರ ಹತ್ಯೆಗೈದರೆ ಹಿಂದೂ ಮುಖಂಡರಲ್ಲಿ ಮತ್ತೆ ಭಯದ ವಾತಾವರಣ ಸೃಷ್ಟಿಯಾಗಲಿದೆ ಎಂದು ಯೋಚಿಸಲಾ ಗಿತ್ತು. ಅದರಂತೆ ಮಾಜ್ ಮುನೀರ್ ಅಹಮ್ಮದ್, ಸೈಯದ್ ಯಾಸೀನ್ ಮತ್ತು ಶಾರೀಕ್ ಸುಧಾರಿತ ಸ್ಫೋಟಕ ವಸ್ತು(ಐಇಡಿ) ಸ್ಫೋಟದ ತರಬೇತಿಯನ್ನು ತುಂಗಾ ತಟದಲ್ಲಿ ಮಾಡುತ್ತಿದ್ದರು. ಈ ಪೈಕಿ ಶಾರೀಕ್‌ಗೆ “ಹವಾಲಾ’ ಮೂಲಕ ಹಣ ಬರುತ್ತಿತ್ತು. ಅದನ್ನು ಸ್ಫೋಟಕ ವಸ್ತುಗಳ ಖರೀದಿಗೆ ಬಳಸಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಮುಖವಾಣಿ ವ್ಯಾಸಂಗ
ಬಂಧಿತ ಇಬ್ಬರು ಶಂಕಿತರು ಐಸಿಸ್ ಸಂಘಟನೆ ನಿಯತಕಾಲಿಕೆಯನ್ನು ಪಡೆದು ಅಧ್ಯಯನ ಮಾಡುತ್ತಿದ್ದರು. ಜತೆಗೆ ಕೇರಳ ಮೂಲದ ಬೇಸ್ ಮೂಮೆಂಟ್ ಸಂಘಟನೆ ಮಾದರಿಯಲ್ಲಿ ಮಲೆನಾಡು ಮತ್ತು ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ದತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.