Advertisement

ಮುಂದಿನ ವರ್ಷ ಭೀಕರ ಜಾಗತಿಕ ಆರ್ಥಿಕ ಹಿಂಜರಿತ!: ವಿಶ್ವ ಬ್ಯಾಂಕ್‌ ಎಚ್ಚರಿಕೆ

09:30 PM Sep 16, 2022 | Team Udayavani |

ನವದೆಹಲಿ: ಮುಂದಿನ ವರ್ಷ ಜಾಗತಿಕ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳಲಿದೆ ಎಂದು ವಿಶ್ವ ಬ್ಯಾಂಕ್‌ ಮುಖ್ಯಸ್ಥ ಡೇವಿಡ್‌ ಮಾಲ್ಪಾಸ್‌ ಹೇಳಿದ್ದಾರೆ. ಒಂದುಕಡೆ ಜಗತ್ತಿನ ಎಲ್ಲ ದೇಶಗಳ ಕೇಂದ್ರ ಬ್ಯಾಂಕ್‌ಗಳು ಹಣದುಬ್ಬರ ನಿಯಂತ್ರಿಸಲು ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ. ಇದರ ಅಡ್ಡ ಪರಿಣಾಮವೆಂಬಂತೆ ಹೂಡಿಕೆ ಮೇಲೆ ಹೊಡೆತವುಂಟಾಗಿದೆ. ಉದ್ಯೋಗನಷ್ಟ ಸಂಭವಿಸಿದೆ, ಬೆಳವಣಿಗೆ ಕುಸಿದಿದೆ, ವ್ಯಾಪಾರ ಕಡಿಮೆಯಾಗಿದೆ ಎಂದು ವಿಶ್ವ ಬ್ಯಾಂಕ್‌ ಕಳವಳ ವ್ಯಕ್ತಪಡಿಸಿದೆ.

Advertisement

ಈಗಿನ ಲೆಕ್ಕಾಚಾರದ ಪ್ರಕಾರ 1970ರ ನಂತರ ಜಾಗತಿಕವಾಗಿ ಅತ್ಯಂತ ಕಷ್ಟಕರವಾದ ಆರ್ಥಿಕ ಹಿಂಜರಿತ ಸಂಭವಿಸುವುದು ಸ್ಪಷ್ಟ ಎನ್ನುವುದು ಡೇವಿಡ್‌ ಮಾಲ್ಪಾಸ್‌ ವಿಶ್ಲೇಷಣೆ. ಇದನ್ನು ಸರಿಪಡಿಸಲಿಕ್ಕಾಗಿ ಉತ್ಪಾದನೆ ಹೆಚ್ಚಿಸುವುದು, ಪೂರೈಕೆಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವುದು ಒಂದು ದಾರಿಯಾಗಿದೆ.

34.5 ಕೋಟಿ ಜನ ಉಪವಾಸದತ್ತ:

ರಷ್ಯಾ-ಉಕ್ರೇನ್‌ ಯುದ್ಧ ಶುರುವಾದ ನಂತರ ಜಾಗತಿಕವಾಗಿ ಆಹಾರ ಪೂರೈಕೆ ಮೇಲೆ ಭಾರೀ ಹೊಡೆತ ಬಿದ್ದಿದೆ. ಹಾಗಾಗಿ ಜಗತ್ತಿನ 82 ದೇಶಗಳಲ್ಲಿ 34.5 ಕೋಟಿ ಮಂದಿ ಉಪವಾಸ ಬೀಳುವುದಕ್ಕೆ ಹತ್ತಿರವಾಗುತ್ತಿದ್ದಾರೆ. ಈಗಾಗಲೇ 7 ಕೋಟಿ ಮಂದಿ ಆ ಸ್ಥಿತಿಗೆ ಸಮೀಪಿಸಿದ್ದಾರೆ ಎಂದು ವಿಶ್ವ ಆಹಾರ ಸಂಸ್ಥೆ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next