Advertisement
ಚಾರ್ಮಾಡಿ ಚೆಕ್ ಪೋಸ್ಟ್ ಸಮೀಪವಿರುವ ಮತಗಟ್ಟೆ ಸಂಖ್ಯೆ 21, 22, 23 ರಲ್ಲಿ ರಾತ್ರಿ 8.30 ಆದರೂ ಮತದಾನವಾಗಿರಲಿಲ್ಲ. ಬಳಿಕ ಮತದಾನ ಪ್ರಕ್ರಿಯೆ ಪೂರ್ಣಗೊಂಡರೂ ಅಧಿಕಾರಿಗಳು ಮತಗಟ್ಟೆ ಒಳಗೆ ಎರಡು ತಾಸು ವಿಳಂಬ ಮಾಡಿರುವುದನ್ನು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿ ಅಧಿಕಾರಿಗಳು ಹೊರಡುವ ವೇಳೆ ತಡೆದರು. ಇದರಿಂದ ಪರಿಸ್ಥಿತಿ ಹದಗೆಟ್ಟಿತ್ತು. ಬಳಿಕ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು. ರಾತ್ರಿ ಸುಮಾರು 11.30 ಗಂಟೆಯಾದರು ಇವಿಎಂ ಮತಯಂತ್ರಗಳನ್ನು ಕಳುಹಿಸಿಕೊಡಲು ಸೇರಿದ್ದ ಜನ ಆಕ್ರೊಶ ವ್ಯಕ್ತಪಡಿಸಿದ್ದಲ್ಲದೆ ಕಲ್ಲು ತೂರಾಟಕ್ಕೆ ಮುಂದಾಗಿದ್ದರು. ರಾತ್ರಿ 500 ಕ್ಕೂ ಅಧಿಕ ಮಂದಿ ಜಮಾಯಿಸಿದ್ದರು.
Related Articles
Advertisement
ಇದೇ ಮತಗಟ್ಟರಯಲ್ಲಿ ಮುಂಜಾನೆ 7:30 ರ ಸುಮಾರಿಗೆ 15 ಮತವಾಗಿದ್ದಾಗ ಇವಿಎಂ ಹಾಳಾಗಿತ್ತುಮ. ಬಳಿಕ ಹೊಸ ಇವಿಎಂ ಯಂತ್ರ ತರಿಸಲಾಗಿತ್ತು. ಎರಡನೇ ಯಂತ್ರ ತರಿಸಿ ಮತದಾನ ಆರಂಭವಾದಾಗ 10 ಗಂಟೆಯಾಗಿತ್ತು. 6 ಗಂಟೆ ಬಳಿಕ ಮತದಾರರನ್ನು ಗೇಟ್ ಒಳಕ್ಕೆ ಬಿಟ್ಟಿರಲಿಲ್ಲ. ಆದರೆ ಗೇಟ್ ಒಳಕ್ಕೆ ನೂರಾರು ಮತದಾರರು ಸರತಿ ಸಾಲಿನಲ್ಲಿ ನಿಂತಿ ರಾತ್ರಿ 8.30 ಕ್ಕೆ ಮತದಾನ ಪ್ರಕ್ರಿಯೆ ಮುಗಿದಿತ್ತು. ಕೈಕೊಟ್ಟ ವಿದ್ಯುತ್ ಅಭಾವ ಎದುರಾಗಿದ್ದರಿಂದ ಮತದಾನ ಬಳಿಕದ ಪ್ರಕ್ರಿಯೆ ನಡೆಸಲು ಸಿಬಂದಿಗಳು ಎರಡು ತಾಸು ತೆಗೆದುಕೊಂಡಿದ್ದರಿಂದ ರಾತ್ರಿ 10 ಗಂಟೆಯಾದರು ಮತಪೆಟ್ಟಿಗೆ ಸಾಗಿಸಿರಲಿಲ್ಲ. ಈ ವಿಚಾರ ಸ್ಟ್ರಾಂಗ್ ರೂಮ್ ಗೂ ತಿಳಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಮಧ್ಯೆ ಪಕ್ಷದ ಏಜೆಂಟರನ್ನು ಹೊರಕ್ಕೆ ಕಳುಹಿಸಿದ್ದರು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಡೆದು ಮಾತಿನ ಚಕಮಕಿಗೆ ಕಾರಣವಾದ್ದರಿಂದ ಪರಿಸ್ಥಿತಿ ಶಾಂತಗೊಳಿಸಲು ಲಾಠಿ ಚಾರ್ಜಾ ಮಾಡಬೇಕಾಯಿತು.