Advertisement
ಇದರಿಂದ ಖುಷಿಯಲ್ಲಿದ್ದ ಅಲ್ಲಿನ ಜನರಿಗೆ ಮತ್ತೆ ಪ್ರವಾಹ ಎದುರಾಗಿ ಸಂಪರ್ಕ ಕಡಿತವಾಗಿ ಸಮಸ್ಯೆ ಉದ್ಭವಿಸಿದೆ. ಇದೆಲ್ಲವೂ ಮಹಾರಾಷ್ಟ್ರದಲ್ಲಿ ವ್ಯಾಪಾಕ ಮಳೆ ಸುರಿಯುತ್ತಿದ್ದ ಪರಿಣಾಮ ಆಲಮಟ್ಟಿ ಜಲಾಶಯ ಹಾಗೂ ಬಸವಸಾಗರ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ 13 ಕ್ರಸ್ಟ್‌ಗೇಟ್ ಮೂಲಕ 1.30 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿದೆ. ಹಾಗಾಗಿ ಕೃಷ್ಣಾನದಿಯಲ್ಲಿ ಪ್ರವಾಹ ಬಂದಿದ್ದರಿಂದ ನೀಲಕಂಠರಾಯನಗಡ್ಡಿ ಜನರಿಗೆ ಸಮಸ್ಯೆ ಎದುರಾಗಿದೆ. ಸುರಪುರ ತಾಲೂಕು ಅಗ್ನಿ ಶಾಮಕದಳ ಅಧಿ ಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಜ್ವರದಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬಳನ್ನು ಬೋಟ್ ಮೂಲಕಸುರಕ್ಷಿತವಾಗಿ ಕೃಷ್ಣಾ ನದಿ ದಾಟಿಸಿ ಕಕ್ಕೇರಾ ಪಟ್ಟಣದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದಾರೆ.
Related Articles
Advertisement
ನೀಲಕಂಠರಾಯನ ಗಡ್ಡಿಗೆ ಸೇತುವೆ ಕಾಮಗಾರಿ ನಡೆದಿದೆ. ಸದ್ಯ ನದಿಗೆ ನೀರು ಹರಿಸಿದ್ದರಿಂದ ನಿರ್ಮಾಣ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರವಾಹ ಇಳಿದ ನಂತರ ಅದನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ತಹಶೀಲ್ದಾರ್ ಸುರೇಶ ಅಂಕಲಗಿ, ಉಪ ತಹಶೀಲ್ದಾರ್ ರೇವಪ್ಪ ತೆಗ್ಗಿನಮನಿ ಸೇರಿದಂತೆ ಇದ್ದರು.ಪೂಜಮ್ಮಳನ್ನು ಕಕ್ಕೇರಾದಲ್ಲಿರುವ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಎರಡು-ಮೂರು
ದಿನಗಳಲ್ಲಿ ಹೆರಿಗೆ ಆಗಬಹುದು. ತುಂಬು ಗರ್ಭಿಣಿ ಇರುವುದರಿಂದ ರಕ್ತದೊತ್ತಡ (ಬಿಪಿ) ಸಾಮಾನ್ಯವಾಗಿದೆ. ಆರೋಗ್ಯವಾಗಿದ್ದಾಳೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯಾಧಿಕಾರಿ ಧರ್ಮರಾಜ ಹೊಸಮನಿ ತಿಳಿಸಿದ್ದಾರೆ. ಗರ್ಭಿಣಿ ಕುರಿತು ನನಗೆ ಗ್ರಾಮಸ್ಥರಿಂದ ಕರೆ ಬಂದಾಗ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದೆ. ಬೋಟ್ ಮೂಲಕ ಕರೆತನ್ನಿ ಎಂದು ಸೂಚಿಸಿದರು. ಕೃಷ್ಣ ನದಿಯಲ್ಲಿ ಗುರುವಾರ ಬೋಟ್ ಇಳಿಸಿ ಸುರಕ್ಷಿತವಾಗಿ ಗರ್ಭಿಣಿಯನ್ನು ನದಿ ದಾಟಿಸಲಾಗಿದೆ. ಸಂತೋಷ ರೆಡ್ಡಿ, ಗ್ರಾಮ ಲೆಕ್ಕಾಧಿಕಾರಿ ನಮ್ಮೂರಿಗೆ ದಶಕಗಳು ಕಳೆದರೂ ಸಮಸ್ಯೆ ತಪ್ಪಿಲ್ಲ. ಮಳೆ-ಚಳಿ ಬಂದರೂ ನಮ್ಮ ಕಷ್ಟಕ್ಕೆ ದೇವರೆ ಗತಿ. ಬೋಟ್‌ನಲ್ಲಿ ಬರುವಾಗ ಭಯವಾಯಿತು. ವೈದ್ಯಾಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಹೆರಿಗೆಯಾದ ನಂತರ ನನ್ನ ತವರು ಮನೆಗೆ ಹೋಗುತ್ತೇನೆ. ಪೂಜಮ್ಮ, ಗರ್ಭಿಣಿ ಬೋರ್ಗರೆಯುವ ಕೃಷ್ಣಾನದಿಯಲ್ಲಿ ಬೋಟ್ ನಡೆಸುವುದು ಅಷ್ಟೊಂದು ಸುರಕ್ಷಿತವಲ್ಲ. ಆದರೂ ಲೈಫ್ ಜಾಕೆಟ್ ಹಾಕಿಕೊಂಡು ಆತ್ಮವಿಶ್ವಾಸದಿಂದ ನೀಲಕಂಠರಾಯನಗಡ್ಡಿಗೆ ತೆರಳಿ ಗರ್ಭಿಣಿಯನ್ನು ಕರೆ ತಂದು ಆಸ್ಪತ್ರೆಗೆ ಸೇರಿಸಲಾಗಿದೆ. ಸಣ್ಣ ಮಾನಯ್ಯ, ಅಗ್ನಿ ಶಾಮಕ ದಳದ ಪ್ರಭಾರಿ ಅಧಿಕಾರಿ ಸುರಪುರ