Advertisement

ಪ್ರವಾಹ ನಿರ್ವಹಣೆಗೆ ಅಧಿಕಾರಿಗಳ ತಂಡ

05:44 PM Jun 10, 2021 | Team Udayavani |

ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಯ ಪ್ರವಾಹದಿಂದ ಬಾಧಿತವಾಗುವ ಗ್ರಾಮಗಳ ಪ್ರವಾಹ ನಿರ್ವಹಣೆಯಲ್ಲಿ ಒಂದು ತಂಡವಾಗಿ ಕೆಲಸ ನಿರ್ವಹಿಸೋಣ. ಆ ನಿಟ್ಟಿನಲ್ಲಿ ಆಯಾ ಗ್ರಾಮಗಳಿಗೆ ನೋಡಲ್‌ ಅ ಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್‌ ಸಂಜಯ ಇಂಗಳೆ ಹೇಳಿದರು.

Advertisement

ರಬಕವಿ-ಬನಹಟ್ಟಿ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಬುಧವಾರ 2021-22 ನೇ ಸಾಲಿನ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಯ ಪ್ರವಾಹದಿಂದ ಬಾ ಧಿತವಾಗುವ ಗ್ರಾಮಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ನೋಡಲ್‌ ಅಧಿಕಾರಿಗಳ ನೇಮಿಸುವ ಕುರಿತು ನಡೆದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಒಟ್ಟು 12 ಗ್ರಾಮಗಳು ಪ್ರವಾಹದಿಂದ ಬಾಧಿತಗೊಳ್ಳುವ ಗ್ರಾಮಗಳೆಂದು ಗುರುತಿಸಲಾಗಿದ್ದು ಅದರಲ್ಲಿ ತಮದಡ್ಡಿ, ಅಸ್ಕಿ, ನಂದಗಾಂವ ಗ್ರಾಮಗಳನ್ನು ಸಂಪೂರ್ಣ ಬಾಧಿತವಾಗುವ ಗ್ರಾಮಗಳಾಗಿದ್ದು, ಉಳಿದ ಹಳಿಂಗಳಿ, ಮದನಮಟ್ಟಿ, ಕುಲಹಳ್ಳಿ, ಹಿಪ್ಪರಗಿ, ಆಸಂಗಿ, ಢವಳೇಶ್ವರ, ಮಾರಾಪುರ, ರಬಕವಿ, ಹೊಸುರ ಸೇರಿದಂತೆ 9 ಗ್ರಾಮಗಳು ಭಾಗಶಃ ಬಾಧಿತವಾಗುವ ಗ್ರಾಮಗಳಾಗಿವೆ. ಆ ನಿಟ್ಟಿನಲ್ಲಿ ಆಯಾ ಹಳ್ಳಿಗಳಲ್ಲಿ ಯಾವ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದರು. ಗ್ರಾಮ ಮಟ್ಟದಲ್ಲಿ ಅ ಧಿಕಾರಿಗಳೊಂದಿಗೆ ಸಭೆ, ಅಗತ್ಯ ಕಾಳಜಿ ಕೇಂದ್ರ ಸ್ಥಾಪನೆಗೆ ಸ್ಥಳ ಗುರ್ತಿಸುವುದು, ಆಹಾರ ಸಂಗ್ರಹಣೆ ಕುರಿತು ಕ್ರಮ, ಗೋಶಾಲೆ ಸ್ಥಾಪಿಸಲು ಸ್ಥಳ ಗುರ್ತಿಸುವುದು, ಮೇವಿನ ಸಂಗ್ರಹಣೆ, ಅಗತ್ಯ ಬಿದ್ದಲ್ಲಿ ಜನರನ್ನು ಸಾಗಿಸಲು ವಾಹನದ ವ್ಯವಸ್ಥೆ, ನುರಿತ ಈಜುಗಾರರ ಹಾಗೂ ಹಾವು ಹಿಡಿಯುವವರ ಮಾಹಿತಿ ಸಂಗ್ರಹಣೆ, ಆರೋಗ್ಯ ಇಲಾಖೆಯೊಂದಿಗೆ ತಂಡ ರಚನೆ ಮಾಡಿ ವೈದ್ಯಕೀಯ ಚಿಕಿತ್ಸೆ ಹಾಗೂ ಸಾಂಕ್ರಾಮಿಕ ರೋಗ ತಡೆಗಟ್ಟಲು ಔಷಧೋಪಚಾರ ವ್ಯವಸ್ಥೆ ಮಾಡುವುದು ಸೇರಿದಂತೆ ನಾವು ವಹಿಸಿರುವ ಗ್ರಾಮಗಳಿಗೆ ತೆರಳಿ ಸಮಗ್ರ ಮಾಹಿತಿ ಸಂಗ್ರಹಿಸಿ ಎಂದರು.

ಕಳೆದ ಬಾರಿ ಪ್ರವಾಹ ಬಂದಾಗ ಒಟ್ಟು 14 ಗ್ರಾಮಗಳಲ್ಲಿ ಬೆಳೆ ಹಾನಿ ಆಗಿತ್ತು. ತಾಲೂಕಿನಲ್ಲಿ 8 ಪಶು ಆಸ್ಪತ್ರೆಗಳಿದ್ದು, 19 ಜನ ಪರಿಣಿತ ಈಜುಗಾರರನ್ನು ಗುರುತಿಸಲಾಗಿದೆ. ಒಟ್ಟಾರೆ ಈ ಬಾರಿಯೂ ಪ್ರವಾಹ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಳೆದ ಬಾರಿ ಪ್ರವಾಹ ನಿರ್ವಹಣೆ ಮಾಡಿದ ತಂಡದಲ್ಲಿದ್ದವರು ಸಾಕಷ್ಟು ಜನ ಅಧಿಕಾರಿಗಳು ಈ ತಂಡದಲ್ಲಿದ್ದು ಅಂತಹ ಸಮಸ್ಯೆ ಎದುರಾಗದು ಎಂದರು.

ತಾಪಂ ಇಒ ಸಂಜೀವ ಹಿಪ್ಪರಗಿ ಮಾತನಾಡಿ, ಪ್ರವಾಹ ಬಂದಾಗ ಕೋವಿಡ್‌ ನಿಯಮ ಪಾಲನೆಯೊಂದಿಗೆ ಜನರನ್ನು ಸ್ಥಳಾಂತರಿಸಲು ಬೇಕಾದ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಬೇಕಾಗಿರುವ ಮಾಹಿತಿ ಕಲೆ ಹಾಕಿ ಎಂದರು. ಉಪತಹಶೀಲ್ದಾರ್‌ ಬಸವರಾಜ ಬಿಜ್ಜರಗಿ, ಶ್ರೀಕಾಂತ ಮಾಯನ್ನವರ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಮಹಾಲಿಂಗಪುರ ಪುರಸಭೆ ಮುಖ್ಯಾ ಧಿಕಾರಿ ಎಚ್‌.ಎಸ್‌. ಚಿತ್ತರಗಿ, ತೇರದಾಳ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಸುನೀಲ ಸಂಕ್ರಟ್ಟಿ, ಪಿ.ಆರ್‌. ಮಠಪತಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next