Advertisement

ಸರ್ಕಾರಿ ಶಾಲೆ ದಾಖಲಾತಿ ಹೆಚ್ಚಿಸಿದ ಶಿಕ್ಷಕ

02:38 PM Sep 05, 2022 | Team Udayavani |

ಚೇಳೂರು: ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಪಡಿಸಿ ಗ್ರಾಮಸ್ಥರಲ್ಲಿ ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಮಕ್ಕಳ ದಾಖಲಾತಿ ಹೆಚ್ಚುವಂತೆ ಮಾಡುವ ಜತೆಗೆ ಗುಣಮಟ್ಟದ ಶಿಕ್ಷಣಕ್ಕೂ ಆದ್ಯತೆ ನೀಡುತ್ತಿರುವ ಮುಖ್ಯ ಶಿಕ್ಷಕ ಕೃಷ್ಣಾರೆಡ್ಡಿ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

Advertisement

ಚೇಳೂರು ಸ.ಮಾ.ಪ್ರಾ.ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಉತ್ತಮವಾಗಿ ಸೇವೆ ಮಾಡಿ ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿ ಶೌಚಾಲಯವನ್ನು ಇವರೇ ಸ್ವಚ್ಛಮಾಡಿ ಜನಮನ ಗೆದ್ದಿದ್ದಾರೆ. ಇವರೇ ಗಿಡಗಳಿಗೆ ನೀರು ಹಾಕಿ ಶಾಲೆಯ ಆವರಣ ಸ್ವಚ್ಛಗೊಳಿಸಿ ಶಾಲೆ ಚೊಕ್ಕವಾಗಿರುವಂತೆ ನೋಡಿಕೊಂಡಿದ್ದಾರೆ. ಶಾಲಾ ದಾಖಲಾತಿ ಆಂದೊಲನದಲ್ಲಿ

ಎಲ್‌ಕೆಜಿ ಯಿಂದ 7 ನೇತರಗತಿವರವಿಗೂ 197ಕ್ಕೂ ಹೆಚ್ಚಿನ ಮಕ್ಕಳನ್ನ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಶಿಕ್ಷಕರಿಗೆ ಶಿಕ್ಷಕ ಪ್ರಶಸ್ತಿ ನೀಡಬೇಕಾಗಿದೆಇಂತಹವರನ್ನು ಗುರುತಿಸದ ಇಲಾಖೆ ಮತ್ತು ಅಧಿಕಾರಿಗಳು ಕಣ್ಣು ಇದ್ದರೂಕುರುಡರಂತೆ ಇದ್ದಾರೆ ಎಂದು ಪ್ರಜ್ಞಾವಂತ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಾಸಕರ ಮೆಚ್ಚುಗೆ:

ಶಾಸಕ ಸುಬ್ಬಾರೆಡ್ಡಿ ಶಾಲೆಗೆ ಭೇಟಿ ನೀಡಿ ಮುಚ್ಚಬೇಕಾದ ಶಾಲೆಯನ್ನು ತೆರದು 197 ಜನ ಮಕ್ಕಳನ್ನು ದಾಖಲಾತಿ ಮಾಡಿಶಾಲೆಯ ಕಚೇರಿಯನ್ನು ಅಚ್ಚು ಮೆಚ್ಚಾಗಿ ಇಟ್ಟಿಕೊಂಡು ಪೋಷಕರೊಂದಿಗೆ ಉತ್ತಮ ಪ್ರೀತಿ-ವಿಶ್ವಾಸ ಇಟ್ಟಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡಿರುವ ಶಿಕ್ಷಕ ಕೃಷ್ಣಾರೆಡ್ಡಿ ಅವರ ಕರ್ತವ್ಯ ನಿಷ್ಠೆಯನ್ನು ಅಭಿನಂದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next