Advertisement
ಉಡುಪಿಯ 12 ಹಾಗೂ ದಕ್ಷಿಣ ಕನ್ನಡದ 21 ಸಹಿತ ರಾಜ್ಯದಲ್ಲಿ 430 ಸರಕಾರಿ ಪದವಿ ಕಾಲೇಜುಗಳಿವೆ. ಸುಮಾರು 3.5 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕರಾವಳಿಯ ಉಭಯ ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ವಿವಿಧ ಸರಕಾರಿ ಪದವಿ ಕಾಲೇಜುಗಳ 5 ಸಾವಿರಕ್ಕೂ ಅಧಿಕ ತರಗತಿ ಕೊಠಡಿಗಳನ್ನು ಸ್ಮಾರ್ಟ್ ಆಗಿ ಪರಿವರ್ತಿಸಲಾಗಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಈ ಹಿಂದೆ ಲ್ಯಾಪ್‌ಟಾಪ್ ವಿತರಿಸಲಾಗಿತ್ತು. ಆರ್ಥಿಕ ಹೊರೆಯಾಗುವುದರಿಂದ ಲ್ಯಾಪ್ ಟಾಪ್ ಬದಲಿಗೆ ಟ್ಯಾಬ್ ವಿತರಣೆಗೆ ಸರಕಾರ ನಿರ್ಧರಿಸಿತ್ತು. ಆದರೆ ಎರಡು ವರ್ಷಗಳಿಂದ ಟ್ಯಾಬ್ ಕೂಡ ಸರಿಯಾಗಿ ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ.
2022-23ನೇ ಸಾಲಿನಲ್ಲಿ ಪ್ರಥಮ ವರ್ಷದ ಪದವಿ ಕೋರ್ಸ್‌ಗೆ ಸೇರಿರುವ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಟ್ಯಾಬ್ (ಕುಟುಂಬದ ನಿರ್ದಿಷ್ಟ ಆದಾಯದ ಆಧಾರದಲ್ಲಿ) ವಿತರಣೆ ಮಾಡುವ ಮೂಲಕ ಕಲಿಕೆ ಹಾಗೂ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಸರಕಾರ ಯೋಜನೆ ರೂಪಿಸಿತ್ತು. ಪ್ರಸಕ್ತ ಸಾಲಿನ ಪದವಿ ಕಾಲೇಜುಗಳ ಮೊದಲ ವರ್ಷ ವಿದ್ಯಾರ್ಥಿಗಳ ಎರಡನೇ ಸೆಮಿಸ್ಟರ್ ನಡೆಯುತ್ತಿದೆ. ಈಗಾಗಲೇ ಟ್ಯಾಬ್ ವಿದ್ಯಾರ್ಥಿಗಳ ಕೈ ಸೇರಿದ್ದರೆ ಶೈಕ್ಷಣಿಕವಾಗಿ ಅನು ಕೂಲವಾಗುತ್ತಿತ್ತು. ಇನ್ನು ಎರಡು ಮೂರು ತಿಂಗಳಲ್ಲಿ ಶೈಕ್ಷಣಿಕ ವರ್ಷವೂ ಮುಗಿಯುತ್ತದೆ. ಅಷ್ಟರೊಳಗೆ ಸರಕಾರ ಟ್ಯಾಬ್ ನೀಡಬೇಕು ಎಂಬುದು ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಆಗ್ರಹ.
Related Articles
ಸರಕಾರಿ ಪದವಿ ಕಾಲೇಜುಗಳ ಸುಮಾರು ಅರ್ಹ 1.43 ಲಕ್ಷ ವಿದ್ಯಾರ್ಥಿಗಳಿಗೆ ತಲಾ 10 ಸಾ. ರೂ.ಗಳಿಂದ 11 ಸಾ. ರೂ. ಮೌಲ್ಯದ ಟ್ಯಾಬ್ ವಿತರಣೆಗೆ ಇಲಾಖೆ ಪ್ರಸ್ತಾ ವನೆ ಸಿದ್ಧಪಡಿಸಿದೆ. ಈ ಟ್ಯಾಬ್‌ನಲ್ಲಿ ವಿದ್ಯಾರ್ಥಿ ಗಳ ಕಲಿಕೆಗೆ ಪೂಕರವಾದ ಮಾಹಿತಿ ಯನ್ನು ಮೊದಲೇ ಅಪ್‌ಲೋಡ್ ಮಾಡಲಾಗುತ್ತದೆ. 1.43 ಲಕ್ಷ ಟ್ಯಾಬ್‌ಗಳಿಗೆ ಕೋಟ್ಯಂತರ ರೂ. ಬೇಕಾಗುವುದರಿಂದ ಆರ್ಥಿಕ ಇಲಾಖೆ ಇನ್ನೂ ಅನುಮತಿ ನೀಡಿಲ್ಲ. ಬಜೆಟ್‌ನಲ್ಲಿ ಟ್ಯಾಬ್ ಜತೆಗೆ ಇನ್ನು ಕೆಲವು ಘೋಷಣೆಗಳ ನಿರೀಕ್ಷೆಯಲ್ಲಿ ಶಿಕ್ಷಣ ಇಲಾಖೆಯಿದೆ.
Advertisement
ಸರಕಾರಿ ಪದವಿ ಕಾಲೇಜಿನ ಅರ್ಹ ವಿದ್ಯಾರ್ಥಿಗಳಿಗೆ ಟ್ಯಾಬ್ ಒದಗಿಸುವ ಸಂಬಂಧ ಈಗಾಗಲೇ ಪ್ರಸ್ತಾವನೆ ಸಲ್ಲಿಸಿ ದ್ದೇವೆ. ಸರಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಬಜೆಟ್ ನಲ್ಲಿ ಪ್ರತ್ಯೇಕ ಅನುದಾನದ ಬಗ್ಗೆಯೂ ಮಾಹಿತಿ ಯಿಲ್ಲ.– ಪಿ. ಪ್ರದೀಪ್, ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ -ರಾಜು ಖಾರ್ವಿ ಕೊಡೇರಿ