Advertisement

ಯಶಸ್ವಿಯಾಯ್ತು ಆನೆಗೊಂದಿ ಉತ್ಸವ

03:12 PM Jan 12, 2020 | Suhan S |

ಗಂಗಾವತಿ: ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಶುಕ್ರವಾರ ರಾತ್ರಿ ತೆರೆ ಬಿದಿದ್ದೆ. 15 ದಿನಗಳಿಂದ ಆನೆಗೊಂದಿಯಲ್ಲಿದ್ದ ಉತ್ಸಾಹ, ಹುರುಪು ನಿನ್ನೆಗೆ ಕೊನೆಗೊಂಡಿದೆ. ಆನೆಗೊಂದಿ ಉತ್ಸವವನ್ನು ಜಿಲ್ಲಾಡಳಿತ ಈ ಭಾರಿ ವೈಶಿಷ್ಟ ಪೂರ್ಣವಾಗಿ ಆಯೋಜನೆ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಶುಕ್ರವಾರ ಉತ್ಸವಕ್ಕೆ ತೆರೆ ಬಿದ್ದ ನಂತರ ಆನೆಗೊಂದಿ ಗ್ರಾಮ ಹಾಗೂ ಉತ್ಸವದ ಸ್ಥಳಗಳಲ್ಲಿ ಬಹುತೇಕ ಮೌನ ಆವರಿಸಿದೆ. ಉತ್ಸವಕ್ಕಾಗಿತಳವಾರಘಟ್ಟ ರಸ್ತೆಯಲ್ಲಿ ಶ್ರೀಕೃಷ್ಣದೇವರಾಯ ವೇದಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಶ್ರೀವಿದ್ಯಾರಣ್ಯ ವೇದಿಕೆ ನಿರ್ಮಿಸಲಾಗಿತ್ತು. ಮುಖ್ಯಮಂತ್ರಿ ಆಗಮಿಸುವ ಮೂಲಕ

Advertisement

ಆನೆಗೊಂದಿ ಹಾಗೂ ಜಿಲ್ಲೆಯ ಹಲವು ಸಮಸ್ಯೆಗಳ ಕುರಿತು ಮಾತನಾಡಲಿದ್ದು, ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆಂಬ ಜನರ ಭರವಸೆ ಈಡೇರಿಲ್ಲ. ಹಂಪಿ ಅಭಿವೃದ್ಧಿ ಪ್ರಾಧಿಕಾರದ ಮಲತಾಯಿ ಧೋರಣೆ ಬಗ್ಗೆ ಸ್ವತಃ ಶಾಸಕ ಪರಣ್ಣ ಮುನವಳ್ಳಿ ಸಮಾರೋಪದಲ್ಲಿ ಪ್ರಸ್ತಾಪಿಸುವ ಮೂಲಕ ಹಂಪಿ ಆನೆಗೊಂದಿ ಸಮನಾಗಿ ಕಾಣುವಂತೆ ತಾಕೀತು ಮಾಡಿದ್ದಾರೆ.

ಆನೆಗೊಂದಿ ಉತ್ಸವದ ಮೂಲ ಆಶಯ ಆನೆಗೊಂದಿ ಭಾಗದ ಐತಿಹಾಸಿಕ ಸ್ಮಾರಕ ಹಾಗೂ ಸ್ಥಳಗಳನ್ನು ಇತರೆ ಪ್ರದೇಶದವರಿಗೆ ಪರಿಚಯ ಮಾಡುವುದಾಗಿದೆ. ಎರಡು ದಿನಗಳ ಕಾಲ ಜರುಗಿದ ಉತ್ಸವದಲ್ಲಿ ಹತ್ತು ಹಲವಾರು ವಿಷಯಗಳನ್ನು ಮುಖಂಡರು ಚರ್ಚೆ ಮಾಡುವ ಮೂಲಕ ಆನೆಗೊಂದಿ ಭಾಗದ ಪ್ರಗತಿಗೆ ಶ್ರಮಿಸುವ ಭರವಸೆ ನೀಡಿದ್ದಾರೆ. ಮಹಿಳಾ ಮತ್ತು ಯುವಗೋಷ್ಠಿ ಮೂಲಕ ಪ್ರಸಕ್ತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವಾಗಿದೆ.

ಅಂಜನಾದ್ರಿ ಸೇರಿ ಇಲ್ಲಿಯ ಸ್ಮಾರಕಗಳ ಸಂರಕ್ಷಣೆ ಹಾಗೂ ಮೂಲಸೌಕರ್ಯ ಕಲ್ಪಿಸುವ ಕುರಿತು ಭರವಸೆಗಳ ಮಹಾಪೂರವಾಗಿದೆ. ಐದು ವರ್ಷಗಳ ಹಿಂದೆ ಜರುಗಿದ್ದ ಆನೆಗೊಂದಿ ಉತ್ಸವ ಪುನಃ ಜರುಗಿರುವುದು ಸ್ಥಳೀಯರಲ್ಲಿ ಸಂತೋಷ ತಂದಿದೆ. ಹಗಲು-ರಾತ್ರಿ ದುಡಿದ ಆನೆಗೊಂದಿ, ಸಂಗಾಪೂರ, ಸಾಣಾಪೂರ ಮತ್ತು ಮಲ್ಲಾಪೂರ ಗ್ರಾಪಂ ಕಾರ್ಮಿಕರನ್ನು ಮತ್ತು ಸಿಬ್ಬಂದಿ ವರ್ಗ ಉತ್ಸವದ ಆಯೋಜಕರು ನೆನಪಿನ ಕಾಣಿಕೆ ನೀಡದೇ ಇರುವುದು ಸ್ಥಳೀಯರಲ್ಲಿ ಅಸಮಧಾನ ತಂದಿದೆ. ಶ್ರೀಕೃಷ್ಣ ದೇವರಾಯ ವೇದಿಕೆಯಲ್ಲಿ ನಟ ಯಶ್‌ ಆಗಮಿಸಿದ ಸಂದರ್ಭದಲ್ಲಿ ಜರುಗಿದ ನೂಕಾಟ ತಳ್ಳಾಟ ಹಾಗೂ ಅನಗತ್ಯ ಸನ್ಮಾನ ಹಾರ, ತುರಾಯಿ ಪ್ರೇಕ್ಷಕರಿಗೆ ಇರಿಸುಮುರಿಸು ಮಾಡಿದೆ. ಸಣ್ಣಪುಟ್ಟ ಸಮಸ್ಯೆಗಳ ಮಧ್ಯೆ ಆನೆಗೊಂದಿ ಉತ್ಸವವನ್ನು ಜನಪ್ರತಿನಿ ಧಿಗಳು ಜಿಲ್ಲಾಡಳಿತ ಯಶಸ್ವಿಗೊಳಿಸಿದೆ.

ಆನೆಗೊಂದಿ ಉತ್ಸವ ನಮ್ಮೂರ ಉತ್ಸವಾಗಿದೆ. ಆನೆಗೊಂದಿ ಹಳೆ ಮಂಡಲದ ನಾಲ್ಕು ಗ್ರಾಪಂ ಸಿಬ್ಬಂದಿ, ಪೌರಕಾರ್ಮಿಕರು 15 ದಿನಗಳಿಂದ ಹಗಲು ರಾತ್ರಿ ಸ್ವತ್ಛತೆ ಹಾಗೂ ಇತರೆ ಕಾರ್ಯಕ್ಕಾಗಿ ಶ್ರಮಿಸಿದ್ದಾರೆ. ಅವರ ಶ್ರಮ ಸಾರ್ಥಕವಾಗಿದೆ. ಇಲ್ಲಿ ಸನ್ಮಾನ, ಹಾರ ತುರಾಯಿ ಪ್ರಶ್ನೆ ಬರಲ್ಲ. ನಮ್ಮೂರ ಉತ್ಸವದಲ್ಲಿ ಪಾಲ್ಗೊಂಡ ಸವಿನೆನಪು ಮಾತ್ರ ಉಳಿಯುತ್ತದೆ. ಜಿಲ್ಲಾಡಳಿತ ಸಲಹೆ, ಸೂಚನೆ ಪಾಲನೆ ಮಾಡುವ ಮೂಲಕ ಉತ್ಸವದ ಯಶಸ್ವಿಗೆ ಕೆಲಸ ಮಾಡಲಾಗಿದೆ. ಕೆ. ಕೃಷ್ಣಪ್ಪ, ಆನೆಗೊಂದಿ ಗ್ರಾಪಂ ಪಿಡಿಒ

Advertisement

 

-ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next