Advertisement

ಅಭಿವೃದ್ಧಿ ವೇಗೋತ್ಕರ್ಷಕ್ಕೆ ಭದ್ರ ಬುನಾದಿ

06:30 AM Jan 11, 2018 | |

ಹುಬ್ಬಳ್ಳಿ: ಉದ್ಯಮಶೀಲತೆ, ಅಭಿವೃದ್ಧಿ ಚಿಂತನೆಗಿದ್ದ ಡೆಡ್‌ ಲಾಕ್‌ ತೆಗೆಯುವ ಯತ್ನ ಮಾಡಿದ್ದೇವೆ. ಅಭಿವೃದ್ಧಿ
ವೇಗೋತ್ಕರ್ಷಕ್ಕೆ ಕಳೆದೊಂದು ದಶಕದಲ್ಲಿ ಭದ್ರ ಬುನಾದಿ ಹಾಕಲಾಗಿದೆ. ನಮ್ಮ ಮುಂದಿರುವುದು ವಿಶ್ವದ ಅತ್ಯುನ್ನತ
ಜ್ಞಾನ-ತಂತ್ರಜ್ಞಾನವನ್ನು ಸ್ಥಳೀಯ ಮಟ್ಟಕ್ಕೆ ಕರೆತಂದು ಅದನ್ನು ಸಮೀಕರಿಸುವ ಸವಾಲು. ಇದರ ಪರಿಹಾರಕ್ಕೆ ದೇಶಪಾಂಡೆ ಪ್ರತಿಷ್ಠಾನ ಎದೆಯೊಡ್ಡಲಿದೆ. ಇದು, ಭಾರತೀಯ ಸಂಜಾತ ಅಮೆರಿಕ ಉದ್ಯಮಿ, ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಅವರ ಅನಿಸಿಕೆ.

Advertisement

ಭಾರತದ ಉದ್ಯಮ ಸ್ಥಿತಿ, ಅಮೆರಿಕ-ಭಾರತದ ನಡುವಿನ ಬಾಂಧವ್ಯ, ಎಚ್‌1ಬಿ ವೀಸಾ ಆತಂಕ,ದೇಶಪಾಂಡೆ ಪ್ರತಿಷ್ಠಾನದ ಮುಂದಿನ ಹೆಜ್ಜೆ ಇನ್ನಿತರ ವಿಷಯಗಳ ಕುರಿತು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಸಾಂಸ್ಕೃತಿಕ ಬದಲಾವಣೆ: ದೇಶದಲ್ಲಿ 1.2ಬಿಲಿಯನ್‌ ಜನರಿದ್ದಾರೆ. ಅದರಲ್ಲಿ ಸುಮಾರು 200 ಮಿಲಿಯನ್‌ ಜನ
ಮೆಟ್ರೊ ಸಿಟಿಗಳಲ್ಲಿದ್ದು, ಅವರ ಬೇಡಿಕೆಗೆ ತಕ್ಕ ತಂತ್ರಜ್ಞಾನ, ಅನ್ವೇಷಣೆಗಳಾಗುತ್ತಿವೆ. ಹುಬ್ಬಳ್ಳಿಯಂತಹ ನಗರವನ್ನು
ದೃಷ್ಟಿಯಲ್ಲಿಟ್ಟುಕೊಂಡು ಬಿಲಿಯನ್‌ಗಟ್ಟಲೆ ಜನರ ಅಗತ್ಯತೆಗಳಿಗೆ ತಕ್ಕ ರೀತಿಯಲ್ಲಿ ಸ್ಥಳೀಯ ಅನ್ವೇಷಣೆ,ತಂತ್ರಜ್ಞಾನ ಅಳವಡಿಕೆ ಕಾರ್ಯ ಆರಂಭಿಸಲಾಗಿದೆ.

ಹುಬ್ಬಳ್ಳಿಯಲ್ಲಿ ದೇಶದಲ್ಲೇ ಅತಿ ದೊಡ್ಡ ಕೌಶಲ್ಯಾಭಿವೃದ್ಧಿ ಕೇಂದ್ರ, ನವೋದ್ಯಮ ಪ್ರಯೋಗ ಕೇಂದ್ರ, ನವೋದ್ಯಮಿ,ಕೃಷಿ ಹೊಂಡ ಹೀಗೆ ವಿವಿಧ ಪ್ರಯೋಗ, ಯತ್ನಗಳು ಇನ್ನೈದು ವರ್ಷಗಳಲ್ಲಿ ಮಹತ್ವ ಫ‌ಲ ನೀಡಲಿವೆ.

ಭಾರತದಲ್ಲಿ ಅವಕಾಶ ಅಧಿಕ: ಭಾರತದಲ್ಲಿನ ನವೋದ್ಯಮ ಬೆಳವಣಿಗೆ ಪರವಾಗಿಲ್ಲ ಎನ್ನುವಂತಿದೆ. ಅಮೆರಿಕದ ಅನೇಕ
ಉದ್ಯಮ ಮಾದರಿಗಳು ಇಲ್ಲಿ ನಕಲುಗೊಂಡಿವೆ. ಭಾರತಕ್ಕೆ ಹೋಲಿಸಿದರೆ ಚೀನಾ ಉತ್ತಮವಾಗಿದೆ. ಅಲ್ಲಿನ ಜನರ
ಜೀವನಮಟ್ಟವೂ ಉತ್ತಮವಾಗಿದೆ. ಭಾರತದಲ್ಲಿ ಇನ್ಫೋಸಿಸ್‌, ವಿಪ್ರೋ ಇನ್ನಿತರ ಕಂಪೆನಿಗಳು ತಂತ್ರಜ್ಞಾನ ಜತೆಗೆ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿವೆ. ತಂತ್ರಜ್ಞಾನ ಬಳಸಿಕೊಂಡು ಬೆಳವಣಿಗೆ ಕಾಣಬೇಕಿದೆ. ಅಮೆರಿಕದಲ್ಲಿ ತಾವು ಸ್ಥಾಪಿಸಿದ “ತೇಜಸ್‌’ ಉತ್ತಮ ಬಿಜಿನೆಸ್‌ ಮಾದರಿಗಳನ್ನು ನೀಡಿದ್ದು, ಸುಮಾರು 65 ದೇಶಗಳಲ್ಲಿ ಕಂಪೆನಿ ಉತ್ಪನ್ನಗಳಿಗೆ ಮಾರುಕಟ್ಟೆ ಇದೆ.

Advertisement

ಭಾರತದಲ್ಲಿ ಉತ್ಪಾದನಾ ವಲಯ ಕುಗ್ಗುತ್ತಿದೆ ಎಂದು ತಮಗನಿಸುತ್ತಿಲ್ಲ. ಆದರೆ, ಉತ್ಪಾದನೆಯಲ್ಲಿ ಯಂತ್ರೋಪಕರಣ, ರೋಬೋಟ್‌ನಿಂದ ಉದ್ಯೋಗ ಕುಸಿತ ಆಗಬಹುದು. ಚೀನಾದಲ್ಲಿ ಉತ್ಪಾದನೆ ದುಬಾರಿ ಆಗುತ್ತಿದ್ದು, ಉತ್ಪಾದನೆ ದೃಷ್ಟಿಯಿಂದ ಭಾರತ ವಿಶ್ವ ಆಕರ್ಷಣೀಯವಾಗಿದೆ. ಮುಖ್ಯವಾಗಿ ಎಲೆಕ್ಟ್ರಾನಿಕ್‌ ಇನ್ನಿತರ ಉತ್ಪನ್ನಗಳ ಆಮದು ವಾರ್ಷಿಕ ಅಂದಾಜು 300 ಬಿಲಿಯನ್‌ ಡಾಲರ್‌ನಷ್ಟಿದ್ದು, ಇದನ್ನು ತಪ್ಪಿಸಲು ದೇಸಿ ಉತ್ಪಾದನೆ ಹೆಚ್ಚಬೇಕಿದೆ. ಭಾರತ ಸರಕಾರದ ಸ್ಟಾರ್ಟ್‌ಅಪ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ ಯೋಜನೆಗಳೂ ಉತ್ತಮವಾಗಿವೆ.

ಅಧಿಕಾರಶಾಹಿ ಇದರ ಸಮರ್ಪಕ ಅನುಷ್ಠಾನಕ್ಕೆ ಮುಂದಾಗದಿದ್ದರೆ ಪ್ರಯೋಜನವಿಲ್ಲ.ಕೃಷಿ-ಉದ್ಯಮ ಸಮತೋಲನ ಮುಖ್ಯ: ಭಾರತದಲ್ಲಿ ಕೃಷಿ-ಉದ್ಯಮಕ್ಕೆ ಸಮತೋಲನ ಆದ್ಯತೆ ಅವಶ್ಯ. ಕೃಷಿ ಉತ್ಪನ್ನ ಹೆಚ್ಚಳಕ್ಕೆ ಆದ್ಯತೆ ಅವಶ್ಯವಾಗಿದೆ. ದೇಶಪಾಂಡೆ ಪ್ರತಿಷ್ಠಾನ ನವಲಗುಂದ ತಾಲೂಕಿನಲ್ಲಿ ಕೈಗೊಂಡ ಕೃಷಿಹೊಂಡ ನಿರ್ಮಾಣ ಅಭಿಯಾನ ರೈತರ ಮೊಗದಲ್ಲಿ ನಗು ತರಿಸಿದೆ. ಸರಕಾರ ಇಂತಹ ಮಾದರಿಗೆ ಉತ್ತೇಜನ ಹಾಗೂ ಬೆಳವಣಿಗೆಗೆ ಮುಂದಾಗಬೇಕು. ನನ್ನ ದೃಷ್ಟಿಯಲ್ಲಿ ಕೃಷಿ ಬೆಳವಣಿಗೆಗೆ ಸುಮಾರು 1ಮಿಲಿಯನ್‌ನಷ್ಟು ಕೃಷಿ ಹೊಂಡಗಳ ಅವಶ್ಯಕತೆ ಇದೆ.

ಭಾರತದಲ್ಲಿ ಆಂತರಿಕ ಒಟ್ಟು ಬೆಳವಣಿಗೆ ದರ(ಜಿಡಿಪಿ) ಶೇ.6-7ರಷ್ಟಿದೆ. ಜಾಗತಿಕ ಜಿಡಿಪಿಗೆ ಹೋಲಿಸಿದರೆ ಪರವಾಗಿಲ್ಲ. ಆದರೆ, ದೇಶದ ಜಿಡಿಪಿ ಶೇ.10ಕ್ಕೆ ತಲುಪಬೇಕಾದ ಅವಶ್ಯಕತೆ ಇದೆ. ಜಿಎಸ್‌ಟಿ ಜಾರಿ ಉತ್ತಮ ನಿರ್ಧಾರ.ಭವಿಷ್ಯದಲ್ಲಿ ಇದರ ಪ್ರಯೋಜನ ಜನರ ಅರಿವಿಗೆ ಬರಲಿದೆ.2022ರ ವೇಳೆಗೆ ಭಾರತದ ರೈತರ ಆದಾಯ ದುಪ್ಪಟ್ಟು ಕೇಂದ್ರದ ಗುರಿಯಾಗಿದೆ. ಆದರೆ, ರೈತರ ಆದಾಯ 2-3ಪಟ್ಟು ಹೆಚ್ಚಾದರೂ ಸಾಕು. ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸಲಿದೆ ಎಂಬುದು ನನ್ನ ನಂಬಿಕೆ.

ಭಾರತದ ಸ್ನೇಹ
ಅನಿವಾರ್ಯ

1973ರಿಂದ ನಾನು ಅಮೆರಿಕದಲ್ಲಿ ವಾಸವಾಗಿದ್ದೇನೆ. ಭಾರತದ ಜತೆ ಸ್ನೇಹದ ವಿಚಾರದಲ್ಲಿ ಇಲ್ಲಿವರೆಗಿನ ಸ್ಥಿತಿಗೂ ಈಗಿನ ಸ್ಥಿತಿಗೂ ಸಾಕಷ್ಟು ಬದಲಾಗಿದೆ. ಎರಡೂ ದೇಶಗಳ ನಡುವೆ ಪೂರಕ ಹಾಗೂ ಸಕಾರಾತ್ಮಕ ವಾತಾವರಣ, ಮೋದಿ-ಅಮೆರಿಕ ಅಧ್ಯಕ್ಷ ಟ್ರಂಪ್‌ ನಡುವೆ ಬಾಂಧವ್ಯ ಗಟ್ಟಿಯಾಗುತ್ತಿದೆ. ಚೀನಾ ಬಲಶಾಲಿ ಆಗಿರುವುದರಿಂದ ಅಮೆರಿಕಕ್ಕೆ ಭಾರತದ ಸ್ನೇಹ-ಬಾಂಧವ್ಯ ಹೆಚ್ಚಿನ ಅವಶ್ಯಕತೆ ಇದೆ.

ಅಮೆರಿಕ ನೀತಿಯಿಂದ ಆತಂಕ ಅಗತ್ಯವಿಲ್ಲ..
ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಎಚ್‌1ಬಿ ವೀಸಾ ರದಟಛಿತಿ ನಿರ್ಧಾರದಿಂದ ಭಾರತೀಯ ಸಂಜಾತ ಉದ್ಯೋಗಿಗಳಿಗೆ
ಆಂತಕ ಸೃಷ್ಟಿಯಾಗಿದ್ದು ನಿಜ. ಅಲ್ಲಿನ ಸರಕಾರ ರದಟಛಿತಿ ಕೈಬಿಟ್ಟಿದ್ದಾಗಿ ಘೋಷಿಸಿದೆ. ಅಮೆರಿಕದಲ್ಲಿ ಸರಿ ಸುಮಾರು 3 ಮಿಲಿಯನ್‌ ಭಾರತೀಯರಿದ್ದಾರೆ. ಅತ್ಯುತ್ತಮ ವೇತನ ಪಡೆಯುವ, ಮೌಲ್ಯಯುತ ಜನ ರಾಜಕೀಯವಾಗಿಯೂ ಪ್ರಭಾವ ಬೀರುವ ಮಟ್ಟಕ್ಕೆ ಬೆಳೆದಿದ್ದಾರೆ. ಇಂದಿನ ಜಾಗತೀಕರಣ ಸಂದರ್ಭದಲ್ಲಿ ಭಾರತೀಯ ಪ್ರತಿಭೆ, ಜ್ಞಾನವನ್ನು ಸುಲಭವಾಗಿ ಅಲ್ಲಗಳೆಯುವ, ಹೊರ ಹಾಕುವ ಸಾಧ್ಯತೆ ಸುಲಭವಲ್ಲ. ಭಾರತೀಯರ ಜ್ಞಾನ, ಪ್ರತಿಭೆ ಅಮೆರಿಕಕ್ಕೆ ಅವಶ್ಯ.

ಹುಬ್ಬಳ್ಳಿಯಂತಹ ನಗರವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಲಿಯನ್‌ಗಟ್ಟಲೆ ಜನರ ಅಗತ್ಯತೆಗಳಿಗೆ ತಕ್ಕ ರೀತಿಯಲ್ಲಿ ಸ್ಥಳೀಯ ಅನ್ವೇಷಣೆ, ತಂತ್ರಜ್ಞಾನ ಅಳವಡಿಕೆ ಕಾರ್ಯ ಆರಂಭಿಸಲಾಗಿದೆ. ಹುಬ್ಬಳ್ಳಿಯಲ್ಲಿ ದೇಶದಲ್ಲೇ ಅತಿ ದೊಡ್ಡ ಕೌಶಲ್ಯಾಭಿವೃದ್ಧಿ ಕೇಂದ್ರ, ನವೋದ್ಯಮ ಪ್ರಯೋಗ ಕೇಂದ್ರ, ನವೋದ್ಯಮಿ, ಕೃಷಿ ಹೊಂಡ ಹೀಗೆ ವಿವಿಧ ಪ್ರಯೋಗ, ಯತ್ನಗಳು ಇನ್ನೈದು ವರ್ಷಗಳಲ್ಲಿ ಮಹತ್ವ ಫ‌ಲ ನೀಡಲಿವೆ.
– ಡಾ| ಗುರುರಾಜ ದೇಶಪಾಂಡೆ,
ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next