Advertisement

ಜಾತ್ರೇಲಿ ನನ್ನದೇ ಮಾತಿನ ತೇರು

06:50 AM Dec 26, 2017 | Harsha Rao |

ಹಾಯ್‌, 
ಹೇಗಿದ್ದೀಯಾ? ಚೆನ್ನಾಗಿದ್ದೀಯಾ? ಕ್ಷಮಿಸು, ನಿಜ ಹೇಳಬೇಕೆಂದರೆ ನಿನ್‌ ಹೆಸರು ಸರಿಯಾಗಿ ನೆನಪಾಗ್ತಾ ಇಲ್ಲ. ಅದಕ್ಕೇ ಈ ಕಾಗದಾನ ನನ್‌ ಸ್ನೇಹಿತನ ಮೂಲಕ ಕಳಿಸಿದೀನಿ. ಅರೆ, ಇದೇನು? ಹೆಸರೇ ಗೊತ್ತಿಲ್ಲ, ಆದರೂ ಕಾಗದ ಬರೆದಿದ್ದಾನಲ್ಲ ಅಂತ ಅಂದೊRಳ್ತಿದೀಯಾ? ನಾನು ಮರೆತಿರೋದು ನಿನ್‌ ಹೆಸರನ್ನೇ ಹೊರತು ನಿನ್ನನ್ನಲ್ಲ. 

Advertisement

ನಿಂಗೆ ನೆನಪಿದೆಯಾ? ನಾವು ಚಿಕ್ಕವರಿ¨ªಾಗ ಊರಿನ ಬೀದಿಗಳಲ್ಲಿ ಬಾಡಿಗೆ ಸೈಕಲ್‌ ಹೊಡೆದಿದ್ದು, ಸೈಕಲ್ಲಿಂದ ಬಿದ್ದು ಹಣೆಗೆ ಗಾಯ ಮಾಡ್ಕೊಂಡಿದ್ದು, ಊರಾಚೆ ಇರೋ ಹನುಮಪ್ಪನ ದೇವಸ್ಥಾನಕ್ಕೆ ಊಟ ತಗೊಂಡ್‌ ಹೋಗಿ ಊಟ ಮಾಡಿ, ಪಕ್ಕದಲ್ಲಿದ್ದ ಬೇವಿನ ಮರಕ್ಕೆ ಹಗ್ಗ ಕಟ್ಟಿ ಜೋಕಾಲಿ ಆಡಿದ್ದು, ಆ ಹಗ್ಗ ಹರಿದು ನಾನು ಬಿ¨ªಾಗ ನೀನು ಗೇಲಿ ಮಾಡಿ ನಗಾಡಿದ್ದು, ಜಾತ್ರೇಲಿ ತೇರಿಗೆ ಉತ್ತುತ್ತಿ ಬಾಳೆಹಣ್ಣು ಎಸೆದಿದ್ದು, ಮಣ್ಣಲ್ಲಿ ಮನೆ ಕಟ್ಟಿದ್ದು, ಮಳೆ ಬಂದು ಅದು ಬಿ¨ªಾಗ ರಾತ್ರಿಯೆಲ್ಲ ಅತ್ತಿದ್ದು, ಬೇರೆಯವರ ಹೊಲಗಳಿಗೆ ಹೋಗಿ ಶೇಂಗಾ ತಿಂದಿದ್ದು, ಅಬ್ಟಾ, ನಾವು ಜೊತೆಗಿದ್ದುದು ಕೆಲವೇ ದಿನಗಳಾದ್ರೂ ಎಷ್ಟೊಂದು ನೆನಪುಗಳು!

ಎಷ್ಟು ಸುಂದರ ಅಲ್ವಾ, ಆ ದಿನಗಳು! ಇವುಗಳನ್ನೆಲ್ಲ ಕೇವಲ ನಾನು ನೀನು ಅಷ್ಟೇ ಮಾಡಿದ್ದಲ್ಲ, ನಮ್‌ ಜೊತೆ ಇನ್ನೂ ಇಬ್ಬರು ಮೂವರು ಬೇರೆ ಸ್ನೇಹಿತರೂ ಇದ್ರು, ಆದರೆ ಅದ್ಯಾಕೋ ನಿನ್‌ ಜೊತೆ ಕಳೆದ ಕ್ಷಣಗಳು ಮಾತ್ರ ಜಾಸ್ತಿ ನೆನಪಿದೆ. ಸಿಟಿಗೆಂದು ನಾನು ಬಸ್ಸಿನಲ್ಲಿ ಹೋಗುವಾಗ, ನೀನು ದೂರ ನಿಂತು “ಹೋಗಿ ಬೇಗ ಬಾ, ಟಾಟಾ’ ಅಂತ ಹೇಳಿ¨ªೆ. ಅದಕ್ಕೆ ನಾನು “ಆಯ್ತು’ ಅಂದಿ¨ªೆ.

ಅದಾದ ಮೇಲೆ ನಾನು ವರ್ಷಕ್ಕೊಮ್ಮೆ ಜಾತ್ರೆಗೆ ಬರ್ತಾ ಇ¨ªೆ. ಆದರೆ, ಎಲ್ಲೂ ನಿನ್‌ ಸುಳಿವು ಇರಲಿಲ್ಲ. ನಮ್ಮನೆ ಮುಂದೇನೆ ನಿಮ್ಮ ಮನೆ ಕೂಡ ಇತ್ತು. ಆದರೆ, ಮಳೆಗೆ ನಿಮ್ಮ ಮನೆ ಪೂರ್ತಿ ಬಿದೊØàಗಿತ್ತು. ಪ್ರತಿ ಸರ್ತಿ ಹೋದಾಗಲೂ ಆ ಮನೆ ನೋಡಿ ಮನಸ್ಸು ಮರುಗ್ತಾ ಇತ್ತು, ವಿಚಾರಿಸಿದಾಗ ತಿಳೀತು, ಪಕ್ಕದೂರಿನ ನಿಮ್ಮ ಚಿಕ್ಕಪ್ಪನ ಮನೇಲಿ ನೀನಿದೀಯ ಅಂತ.

ಹೋದ ವರ್ಷ ಜಾತ್ರೇಲಿ ನಿನ್ನನ್ನು ನೋಡಿದೆ. ನೀನೂ ನನ್ನ ನೋಡಿದೀಯ ಅನ್ಕೊಂಡೆ. ಆದರೆ, ಇಬ್ಬರೂ ಮಾತಾಡಿಸೋ ಧೈರ್ಯ ಮಾತ್ರ ಮಾಡಲಿಲ್ಲ. ನಾನು ಮಾತಾಡಿಸಲಿ ಅಂತ ನೀನು, ನೀನೇ ಮಾತಾಡಿಸಲಿ ಅಂತ ನಾನು… ಹೀಗೆ ಇಬ್ಬರೂ ಕಣ್ಣುಗಳಲ್ಲಿ ಮಾತಾಡಿದ್ವಿ. ಜಾತ್ರೇಲಿ ನಿಮ್ಮ ಅಮ್ಮ ಸಿಕ್ಕಿದ್ದರು, ಅವರೇ ಗುರುತು ಹಿಡಿದು ಮಾತಾಡಿಸಿದರು. 

Advertisement

ಮುಂದಿನ ವರ್ಷದ ಜಾತ್ರೇಲಾದರೂ ಮಾತಾಡಿಸ್ತೀಯಾ? ಅಥವಾ ನಾನೇ ಮಾತಾಡಿಸ್ಲಾ? 16 ವರ್ಷಗಳಿಂದ ಮಾತುಗಳ ಮೂಟೆಗಳನ್ನು ಹೊತ್ತು ತಿರುಗಾಡ್ತಾಯಿದ್ದೀನಿ. ವರ್ಷಗಳು ಕಳೆದಂತೆ ಆ ಮೂಟೆಗಳ ಸಂಖ್ಯೆ ಜಾಸ್ತಿಯಾಗ್ತಾ ಇದೆ. ಅವುಗಳ ಭಾರ ತಡೆಯಲಾಗ್ತಿಲ್ಲ. 

ನಾವು ಇನ್ನೊಮ್ಮೆ ನಮ್ಮೂರಿನ ಬೀದಿ ಸುತ್ತೋಣ, ಊರಾಚೆ ಇರೋ ಹನುಮಪ್ಪನ ದೇಗುಲಕ್ಕೆ ಊಟ ತಗೊಂಡ್‌ ಹೋಗಿ ಊಟ ಮಾಡಿ, ಬೇವಿನ ಮರಕ್ಕೆ ಜೋಕಾಲಿ ಕಟ್ಟೋಣ, ಹೊಲಗಳಿಗೆ ಹೋಗಿ ಶೇಂಗಾ ತಿನ್ನೋಣ, ಜಾತ್ರೇಲಿ ತೇರಿಗೆ ಉತ್ತುತ್ತಿ ಬಾಳೆ ಹಣ್ಣು ಎಸೆಯೋಣ… ಈ ಖುಷಿಗಾದ್ರೂ ದಯವಿಟ್ಟು ಸಿಗು…

ಇಂತಿ ನಿನ್ನ
ದೂರವಿದ್ದರೂ ಹತ್ತಿರದ ಗೆಳೆಯ
(ಈರ)
 

– ಈರಯ್ಯ ಸೂರಿ

Advertisement

Udayavani is now on Telegram. Click here to join our channel and stay updated with the latest news.

Next