Advertisement
“ಮಿ ಟೂ’ ಎನ್ನುವ ಎರಡು ಪದಗಳು ಮೊದಲು ಎರಡು ಪದಗಳೇ ಆಗಿದ್ದವು. ಅದಕ್ಕೂ ಮೊದಲು ಐದು ಅಕ್ಷರಗಳಷ್ಟೇ ಆಗಿದ್ದವು. ಆದರೆ, ನೋಡನೋಡುತ್ತಿದ್ದಂತೆಯೇ ಅವು ಎದೆಯ ಬಿಕ್ಕಳಿಕೆಯಾಯಿತು. ಅಷ್ಟೇ ಎಂದುಕೊಂಡಿದ್ದರೇನೋ ಹಲವರು. ಆದರೆ, ಅವು ಬೆಂಕಿಯುಂಡೆಯಾಗಿ ಹೋದವು. ಬೆಂಕಿಯ ಮೇಲೆ ಬಿದ್ದ ನೀರು ಅದನ್ನು ತಣಿಸಿ ಹಾಕಿಬಿಡುತ್ತದೆ. ಆದರೆ, ಇಲ್ಲಿ ಮಾತ್ರ ಪರಿಣಾಮ ವಿರುದ್ಧವಾಗಿತ್ತು. ಈ ಎರಡು ಪದಗಳ ಬೆಂಕಿಯ ಮೇಲೆ ಬಿದ್ದ ಕಣ್ಣೀರು ಆ ಬೆಂಕಿ ಇನ್ನಷ್ಟು ಉರಿಯುವಂತೆ ನೋಡಿಕೊಂಡಿತು. ನೋಡ ನೋಡುತ್ತಿದ್ದಂತೆಯೇ ಇದು ಕಾಳಿYಚ್ಚಾಯಿತು. ಅಷ್ಟೇ ಅಲ್ಲ ಒಂದು ರಾಜ್ಯದ ಗಡಿ ದಾಟಿ, ದೇಶದ ಗಡಿ ದಾಟಿ ಜಗತ್ತಿನ ಎÇÉೆಡೆ ಸಿಡಿಲಾಗಿ ಅಪ್ಪಳಿಸಿತು.
Related Articles
Advertisement
ಒಂದೊಂದೇ ಕತೆಗಳು ಮೊದಲು ಪಿಸುಗುಟ್ಟುವಿಕೆಯಾಗಿ ನಂತರ ಮಾತಾಗಿ ನಂತರ ಆಕ್ರೋಶವಾಗಿ ಹೊರ ಧುಮ್ಮಿಕ್ಕುತ್ತಲೇ ಇದೆ. ಹಾಗೆ ಒಂದು ಅಂದಾಜಿನ ಪ್ರಕಾರ ಇಂತಹ ರಾಕ್ಷಸೀ ಕ್ರೌರ್ಯದ ಕತೆೆಗಳನ್ನು ಬಿಚ್ಚಿಟ್ಟವರ ಸಂಖ್ಯೆಯೇ 60 ಲಕ್ಷ ಜನ. ಒಬ್ಟಾಕೆ ಬರೆದಳು- “ಹೌದು, ಬೆಳಗಿನ ಜಾವ 8 ಗಂಟೆಗೆ, ನಡು ಮಧ್ಯಾಹ್ನ 12 ಗಂಟೆಗೆ, 2 ಗಂಟೆಗೆ, ಸಂಜೆ 4 ಗಂಟೆಗೆ…’ ಜಗತ್ತು ಓಹ್ ! ಎಂದು ಈ ನಿಟ್ಟುಸಿರು ಕೇಳಿಸಿಕೊಂಡಿತು. ಆ ವೇಳೆಗೆ ಇನ್ನೊಬ್ಟಾಕೆ ಬರೆದಳು- “”ಹೌದು, ಮಿ ಟೂ… ನಾನೂ ಸಹಾ, ನನ್ನ ತಾಯಿ ಸಹಾ, ನನ್ನ ಸೋದರಿ ಸಹಾ, ನನ್ನ ಅಜ್ಜಿ ಸಹಾ, ನನ್ನ ಆಪ್ತ ಗೆಳತಿಯರೂ ಸಹಾ…”. ಜಗತ್ತು ಕಣ್ಣೀರು ಒರೆಸಿಕೊಂಡಿತು. ಎಷ್ಟೋ ಜನ ಟ್ವೀಟ… ಮಾಡಿದರು- “”ಈ ಹ್ಯಾಷ್ ಟ್ಯಾಗ್ ಆಂದೋಲನದ ಒಂದು ಒಳ್ಳೆಯ ಅಂಶವೆಂದರೆ, ಈ ಜಗತ್ತಿನಲ್ಲಿ ಈ ರೀತಿಯ ಕ್ರೌರ್ಯಕ್ಕೆ ಒಳಗಾದವರು ನಾವೊಬ್ಬರೇ ಅಲ್ಲ ಎನ್ನುವುದು ಗೊತ್ತಾದದ್ದು, ಅದೇ ವೇಳೆ ಗೊತ್ತಾದ ಕೆಡುಕಿನ ಅಂಶವೆಂದರೆ ನಾವೊಬ್ಬರೇ ಅಲ್ಲ, ಎಷ್ಟೊಂದು ಜನ ಈ ಕ್ರೌರ್ಯಕ್ಕೆ ಒಳಗಾಗಿದ್ದೇವೆ ಎನ್ನುವುದು”.
ನನ್ನ ತಾಯಿಯ ಸ್ನೇಹಿತನಿಂದ, ನನ್ನ ಮನೆಗೆಲಸದವನಿಂದ, ನನ್ನ ಚಿಕ್ಕಪ್ಪನಿಂದ, ನನ್ನ ಬಾಸ್‌ನಿಂದ, ಲಿಫr…ನಲ್ಲಿ ಕಾಣದ ಕೈಯಿಂದ, ಬಸ್‌ನಲ್ಲಿ ಇದ್ದ ಆ ಸೂಟುಧಾರಿಗಳಿಂದ, ಶಾಲೆಯ ಕೋಣೆಯ ಮೂಲೆಯಲ್ಲಿ ಆ ದುಷ್ಟ ಮಾಸ್ಟರ್‌ನಿಂದ, ನೆರೆಮನೆಯಾತನಿಂದ, ನನ್ನ ಅಣ್ಣನಿಂದ- ಹೀಗೆ ಒಬ್ಬೊಬ್ಬರೂ ಒಂದೊಂದೇ ಮುಖಗಳ ಮೇಲಿದ್ದ ಮುಖವಾಡಗಳು ಉರುಳಿಸಲು ಶುರುಮಾಡಿದರು.
ಹೀಗೆ ಆಗುವ ಮೊದಲು ಆ ಇನ್ನೊಬ್ಬಳಿದ್ದಳು- ಆನ್ ಡೊನಹ್ಯೂ. ಆಕೆ ಯಾವಾಗ ಈ ಸಿನೆಮಾ ನಿರ್ದೇಶಕ ಲೈಂಗಿಕವಾಗಿ ಶೋಷಿಸುತ್ತಿ¨ªಾನೆ ಎಂದು ಗೊತ್ತಾಯಿತೋ… ಯಾವತ್ತೂ ನಾನು ಮಾಡುವ ಹಾಗೆ ನನ್ನ ಮೊದಲ ಅಸ್ತ್ರವನ್ನು ಕೈಗೆತ್ತಿಕೊಂಡೆ ಅದೇ ಟ್ವೀಟರ್ ಎಂದಳು. ಎಲ್ಲರ ಬದುಕಿನಲ್ಲೂ ಇಂಥ ಒಬ್ಬ ಕಾಮುಕ ಇಣುಕಿಹಾಕಿರುತ್ತಾನೆ.
ಎಲ್ಲರ ಬದುಕಿನಲ್ಲೂ ಒಬ್ಬ ಇಂತಹ ಹಾರ್ವೆ ವೀನ್‌ಸ್ಟನ್ ಇಣುಕಿಹಾಕಿರುತ್ತಾನೆ. ಹಾಗಾಗಿಯೇ “ನನ್ನ ಹಾರ್ವೆ ವೀನ್‌ಸ್ಟrನ್’ ಎನ್ನುವ ಹ್ಯಾಷ್ ಟ್ಯಾಗ್‌ನಲ್ಲಿ ಇಂತಹ ದುಷ್ಟರ ಮುಖವಾಡ ಬಯಲಿಗೆಳೆಯಲು ಆರಂಭಿಸಿದಳು. ಆದರೆ ಟ್ವೀಟರ್ ಆಕೆಯ ಖಾತೆಯನ್ನೇ ಬಂದ್ ಮಾಡಿತು. ಆಗ ಉಕ್ಕಿತು ನೋಡಿ, ಮಹಿಳೆಯರ ಆಕ್ರೋಶ. ಹ್ಯಾಷ್‌ಟ್ಯಾಗ್ ಚಳವಳಿ ಎನ್ನುವ ಕಲ್ಪನೆ ಆರಂಭವಾಗಿದ್ದೇ ಎÇÉೆಲ್ಲಿಯೋ ಒಂದೇ ವಿಷಯದ ಬಗ್ಗೆ ಆಲೋಚಿಸುತ್ತಿರುವವರನ್ನು ಬೆಸುಗೆ ಹಾಕಲು. ಅಂತಹದ್ದರಲ್ಲಿ ಟ್ವೀಟರ್ ಇಂತಹ ಬೆಸುಗೆಯನ್ನೇ ಮುರಿಯಲು ಹೊರಟರೆ ಸುಮ್ಮನಿ¨ªಾರೆಯೆ? ಜಗತ್ತಿನ ಎಲ್ಲ ಮಹಿಳೆಯರೂ ಟ್ವೀಟರ್‌ನಿಂದ ಹೊರಗೆ ಹೋಗುತ್ತೇವೆ ಎಂದು ಎಚ್ಚರಿಕೆ ಕೊಟ್ಟರು. ಟ್ವೀಟರ್ ಸಹ ಪಾಠ ಕಲಿಯಿತು.
ಇದೆಲ್ಲ ಆಗುವಾಗಲೇ ನನಗೆ ಅಮೀರ್ ಖಾನ್ ನೆನಪಾದದ್ದು. “ಸತ್ಯಮೇವ ಜಯತೆ’ ನಡೆಸಿಕೊಡುತ್ತಿದ್ದ ಆತ ಕಣ್ಣು ತುಂಬಿ ಹೇಳಿದ್ದ- “”ನಮ್ಮ ಮನೆಯೊಳಗೇ, ನಮ್ಮ ಬಗಲಲ್ಲಿ, ನಮ್ಮ ನೆರೆಯಲ್ಲಿ, ನಮ್ಮ ಬಂಧುವಿನಲ್ಲಿಯೇ ಒಬ್ಬ ಅತ್ಯಾಚಾರಿಯಿ¨ªಾನೆ. ಎಚ್ಚರ”. ಅದು ಹೌದು, ಎನ್ನುವಂತೆ ಈಗ ಜಗತ್ತು ತಮ್ಮ ಕಥೆಗಳನ್ನು ಹೊರಗಿಕ್ಕುತ್ತ ಸಾಗಿತ್ತು. ಅದು ಮುಂಬೈನ ಚಲನಚಿತ್ರೋತ್ಸವ. ಮಧುಶ್ರೀ ದತ್ತಾ ಅವರ Mಛಿಞಟ್ಟಜಿಛಿs ಟf fಛಿಚr ಎನ್ನುವ ಸಾಕ್ಷÂಚಿತ್ರ ನನ್ನ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತಾ ಹೋಯಿತು. ನಾನು ಉಸಿರುಗಟ್ಟಿದವನಂತಾಗಿ¨ªೆ. ಲೈಂಗಿಕ ದೌರ್ಜನ್ಯ ಎನ್ನುವುದು ಬದುಕಿನುದ್ದಕ್ಕೂ ಭಯವಾಗಿ ಬೆನ್ನುಬೀಳುವ ಬಗೆಗಿನ ಚಿತ್ರ ಅದು. ಸದಾ ಕಣ್ಣೆದುರು ಆ ಭಯದ ಚಿತ್ರಗಳನ್ನೇ ಇಟ್ಟುಕೊಂಡ ಹೆಣ್ಣು ಮಕ್ಕಳು ತಮ್ಮ ದೇಹವನ್ನೇ ಕೊರಡಾಗಿಸಿಕೊಂಡು ಉಳಿದುಬಿಡುವ ಕಥಾನಕ. ಅತ್ಯಾಚಾರಿ ಹೊರಗಡೆ ಎÇÉೋ ಇರಬೇಕಿಲ್ಲ, ನಮ್ಮ ಸುತ್ತಮುತ್ತವೆ ನಮ್ಮೊಳಗೇ… ಎನ್ನುವ ಪಾಠವನ್ನು ಅದು ಕಲಿಸುತ್ತಿತ್ತು. ಹೌದು, ಆ ಸಾಕ್ಷ್ಯಚಿತ್ರ ಸಹ “ಮಿ ಟೂ’ ಎನ್ನುವುದಕ್ಕೆ ಸಾಕ್ಷ ನುಡಿಯುತ್ತಿತ್ತು.
ಯಾಕೋ ಇಂತಹದ್ದು ಗೊತ್ತಾದಾಗಲೆÇÉಾ ಜಾನಪದ ಜಂಗಮ ಎಸ್. ಕೆ. ಕರೀಂಖಾನ್ ನೆನಪಾಗಿ ಬಿಡುತ್ತಾರೆ. ಕಾಡುತ್ತಾರೆ. ಅವರು ಆಗೀಗ ತಮ್ಮೊಳಗಿದ್ದ ನೋವನ್ನೇ ಹೊರಚೆಲ್ಲಿಬಿಡುವಂತೆ ಎತ್ತರದ ಕಂಠದಲ್ಲಿ ಜಾನಪದ ತ್ರಿಪದಿಗಳಿಗೆ ದನಿಯಾಗಿಬಿಡುತ್ತಿದ್ದರು. ಒಂದು ಸಂಜೆ ಹೇಗೆ ಹೆಣ್ಣೊಬ್ಬಳು ತನ್ನ ದೇಹ ಸೌಂದರ್ಯವನ್ನೇ ದ್ವೇಷಿಸುವ ಹಂತಕ್ಕೆ ಬಂದುಬಿಡುತ್ತಾಳೆ ಎನ್ನುವ ನೋವಿನ ರಾಗಕ್ಕೆ ದನಿಕೊಟ್ಟರು. ಎಮ್ಮೇಯ ಮೇಯೊÕ$Rಂಡು ಸುಮ್ಮಾನೆ ನಾನಿ¨ªೆ/ ಹಾಳಾದೊವೆರಡು ಮೊಲೆ ಬಂದು/ ನಮ್ಮಪ್ಪಕಂಡೋರ್ಗೆ ನನ್ನ ಕೊಡುತಾನೆ. ಆ ಹಾಡಿನಲ್ಲಿದ್ದ ಹೆಣ್ಣು ಮಕ್ಕಳೂ ಸಹಾ “ಮಿ ಟೂ’ ಎಂದು ನುಡಿದಿದ್ದರು. ನಿರ್ಭಯಾ ಮೇಲೆ ಘೋರ ಅತ್ಯಾಚಾರ ನಡೆದಾಗ ಇದು ಮತ್ತೆ ಮತ್ತೆ ನನ್ನೊಳಗೆ ತೇಲಾಡಿತು. ಇಂತಹದ್ದೇ ಆಕ್ರೋಶ ಚಿಮ್ಮಿಯೇ ನಾವು “ಹೇಳತೇವ ಕೇಳ’ ಎನ್ನುವ ನೋವಿನ ಕಥನವನ್ನು ಸಂಕಲಿಸಲು ಕೈ ಹಾಕಿದ್ದು.
ಮಗಳು ಶಾಲೆಗೆ ಹೋಗುವಾಗ ಅಮ್ಮ ಬುತ್ತಿ ಕಟ್ಟಿ ಕೊಡುವಷ್ಟೇ ಮುತುವರ್ಜಿಯಿಂದ ಬ್ಯಾಗ್‌ನಲ್ಲಿ ಒಂದು ಚಾಕುವನ್ನೂ ಇಡುತ್ತಿದ್ದಳು. “”ಇದನ್ನು ಜೋಪಾನವಾಗಿಟ್ಟುಕೊ, ಬ್ಯಾಗಿಗೆ ಕೈ ಹಾಕಿದ ತಕ್ಷಣ ಇದು ಸಿಗುವಂತಿರಬೇಕು” ಎಂದು ಅಮ್ಮ ಪಿಸುಮಾತಿನಲ್ಲಿ ಹೇಳುತ್ತಿದ್ದಳು ಪ್ರತಿದಿನ. ಅವರು ಆ ನಾಲ್ಕನೆಯ ತರಗತಿಯ ಹುಡುಗಿ “ಮಿ ಟೂ’ ಎಂದು ಬರೆದುಕೊಳ್ಳುವುದನ್ನು ತಪ್ಪಿಸುತ್ತಿದ್ದರು. ಭಾರತ ಪ್ರತೀ ಬಾರಿ ಕ್ರಿಕೆಟ…ನಲ್ಲಿ ಗೆ¨ªಾಗಲೂ ಇನ್ನಿಲ್ಲದ ಭಯದಿಂದ ಕಂಪಿಸಿಬಿಡುವ ಹೆಣ್ಣೊಬ್ಬಳಿ¨ªಾಳೆ. ಭಾರತ ಅತ್ಯಂತ ಸಂಭ್ರಮದಿಂದ ವಿಶ್ವಕಪ್ ಎತ್ತಿ ಹಿಡಿದ ದಿನವೇ ಅಪ್ಪನ ಸ್ನೇಹಿತ ಅವಳ ದೇಹವನ್ನು ಹೊಸಕಿ ಹಾಕಿದ್ದ. ಕಾರ್ ಕಲಿಯಲು ಹೋದಾಗ ಬದುಕಿನ ಸ್ಟಿಯರಿಂಗ್ ಆನ್ ತಿರುವಿಬಿಟ್ಟವರಿದ್ದರು. ಪಾರ್ಕ್‌ನಲ್ಲಿ ಎದುರೆದುರಿಗೇ ಬಂದು ಬಲಾತ್ಕಾರ ಮಾಡಿ ಮುತ್ತಿಟ್ಟವರಿದ್ದರು. ಅವರೆಲ್ಲರೂ “ಮಿ ಟೂ’ ಬರೆದವರೇ. ನಮ್ಮ ಸ್ಕೂಲ…ಬ್ಯಾಗ್‌ನಲ್ಲಿ ಈಗಲೂ ಪಿನ್ನು, ಬ್ಲೇಡು, ಹೇರ್ ಪಿನ್ನೂ, ಶಾರ್ಪ್ ಮಾಡಿದ ಪೆನ್ಸಿಲ… ಇರುತ್ತೆ ಎಂದು ತೋರಿಸಿದ ಹುಡುಗಿಗೆ ಇನ್ನೂ ಒಂಬತ್ತು ವರ್ಷ.
ಹೀಗೆಲ್ಲ ಆಗುವಾಗಲೇ ದೆಹಲಿಯಲ್ಲಿ ಆ ಪ್ರತಿಭಟನಾಕಾರರು ಹಿಡಿದಿದ್ದ ಆ ಫಲಕ ನೆನಪಿಗೆ ಬರುತ್ತಿದೆ. Dont teach me what to wear, Teach ur son not to rape. ಈ ರಾತ್ರಿ, ಈ ಹಗಲು, ಪ್ರತಿ ರಾತ್ರಿ, ಪ್ರತಿ ಹಗಲೂ Don’t Rape ಎನ್ನುವುದನ್ನು ಕಲಿಸುತ್ತಲೇ ಇರೋಣ.
ಈ ಬರಹಕ್ಕೆ ಉಪಸಂಹಾರವಿಲ್ಲ ಎಂಬ ನಿಟ್ಟುಸಿರಿನೊಂದಿಗೆ ಕಿವಿಮಾತು ಹೇಳಿದವರೊಬ್ಬರಿದ್ದರು. ಏಕೆಂದರೆ, ಈ ಘಟನೆಗಳು ನಿತ್ಯ ನಡೆಯುತ್ತಲೇ ಇರುತ್ತವೆ ಇವರೂ ಸಹಾ “ಮಿ ಟೂ’ ಎಂಬ ಸಂದೇಶದ ಜೊತೆಗಿದ್ದವರೇ. ಆ ಅಮೆರಿಕ, ಇಂಗ್ಲೆಂಡ್ ದಾಟಿ ದೇಶದೊಳಗೆ ನಡೆಯುತ್ತಿರುವ ಹ್ಯಾಷ್ ಟ್ಯಾಗ್ ಚಳವಳಿ ನೋಡುತ್ತ ಹೋದೆ. ಅದು ದೇಶದಿಂದ ರಾಜ್ಯಕ್ಕೂ, ರಾಜ್ಯದಿಂದ ನಗರಕ್ಕೂ, ನಗರದಿಂದ ನಮ್ಮದೇ ಮನೆಯೊಳಕ್ಕೂ ಬಂದಿದೆ. ನಮ್ಮ ಜೊತೆಗಿದ್ದವರು, ನಮ್ಮೊಡನೆಯೇ ಇದ್ದವರೂ, ನಮ್ಮ ಮನೆಯಂಗಳದಲ್ಲಿದ್ದವರು. ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು… ಹಾಡಿಗೆ ಯಾಕೆ ಈಗ ಇಷ್ಟು ಕ್ರೂರ ಅರ್ಥ?
– ಜಿ. ಎನ್. ಮೋಹನ್