Advertisement

ಒಂದು ಹೊಟ್ಟೆಯ ಕತೆ, ಪ್ರಗ್ನೆನ್ಸಿ ನಂತರ ಹೊಟ್ಟೆ ನಿಂತರೆ… 

06:10 AM Jul 26, 2017 | Team Udayavani |

ಹೆರಿಗೆಯಾದ ಆರಂಭದಲ್ಲಿ ಪ್ರತಿ ಹೆಣ್ಣಿಗೆ ಕಾಡುವ ಆತಂಕ ಹೊಟ್ಟೆಯದ್ದು. ಇಷ್ಟು ದಿನ ಗರ್ಭದಲ್ಲಿ ಮಗು ಇತ್ತೆಂಬ ಕಾರಣಕ್ಕೆ ಹೊಟ್ಟೆ ಉಬ್ಬಿಕೊಂಡಿತ್ತು. ಆದರೆ, ಈಗ ಮಗು ಗರ್ಭದಿಂದ ಹೊರಬಂದಿದ್ದರೂ ಹೊಟ್ಟೆ ತುಸು ಉಬ್ಬಿಕೊಂಡಿದೆ. ವಿಸ್ತಾರವಾದಂತಿದೆ. ಹೊಟ್ಟೆ ಭಾಗದ ಚರ್ಮ ಬಿಗಿಗೊಂಡು, ಮೊದಲಿನಂತೆ ಸ್ಲಿಮ್‌ ಆಗಲು ಏನ್ಮಾಡ್ಬೇಕು?

Advertisement

1. ಮಗುವಿಗೆ ಹಾಲುಣಿಸಿ: ಎದೆಹಾಲನ್ನು ಮಗುವಿಗೆ ಉಣಿಸುವುದರಿಂದ ಕೇವಲ ಮಗುವಿಗಷ್ಟೇ ಅಲ್ಲ, ಬಾಣಂತಿಗೂ ಲಾಭವಿದೆ. ಇದರಿಂದ ಹೊಟ್ಟೆಯ ಗಾತ್ರ ಇಳಿಯುವುದಲ್ಲದೆ, ಸ್ನಾಯುಗಳೂ ಬಿಗಿಗೊಳ್ಳುತ್ತವೆ. ಯಾವುದೇ ಪ್ರಯತ್ನ ಹಾಕದೆ ಕ್ಯಾಲೊರಿ ಕಳೆದುಕೊಳ್ಳಲು “ಹಾಲುಣಿಸುವ ಕ್ರಿಯೆ’ ಅತ್ಯುತ್ತಮ ಮಾರ್ಗ.

2. ಬೆಲ್ಲಿ ರ್ಯಾಪಿಂಗ್‌: ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಈ ಕ್ರಿಯೆಯನ್ನು ಅನುಸರಿಸಬೇಕು. ಒಂದು ಮೆತ್ತನೆಯ ಬಟ್ಟೆಯನ್ನು ಹೊಟ್ಟೆಯ ಸುತ್ತ ಕಟ್ಟಿಕೊಳ್ಳಬೇಕು. ಕೆಲವರು ದುಪ್ಪಟ್ಟಾಗಳನ್ನು ಕಟ್ಟಿಕೊಳ್ಳುತ್ತಾರೆ. ಮಾರ್ಕೆಟಿನಲ್ಲಿ ಇದಕ್ಕಾಗಿಯೇ ಕೆಲವು ಬೆಲ್ಟ್‌ಗಳೂ ಬಂದಿವೆ. 

3. ಜಾಸ್ತಿ ಕೊಬ್ಬು ಬೇಡ: ಬಾಣಂತನದ ವೇಳೆ ಕಾಬೋìಹೈಡ್ರೇಟ್‌ಗಳ ಸೇವನೆಯಿಂದ ಆದಷ್ಟು ದೂರವಿರಬೇಕು. ಸಕ್ಕರೆ, ಕೊಬ್ಬುಗಳು ಜಠರದ ಖಾಲಿ ಪ್ರದೇಶವನ್ನು ಆಕ್ರಮಿಸುವ ಅಪಾಯಗಳು ಅಧಿಕವಿರುತ್ತವೆ. ಕಡಿಮೆ ಕೊಬ್ಬು ಇರುವ ಡೈರಿ ಉತ್ಪನ್ನಗಳು, ಹಸಿರು ಧಾನ್ಯಗಳನ್ನು ಆಹಾರದಲ್ಲಿ ಬಳಸಿ.

4. ಗ್ರೀನ್‌ ಟೀಗೆ ಜೈ ಎನ್ನಿ: ಪ್ರಗ್ನೆನ್ಸಿ ನಂತರದ ಹೊಟ್ಟೆಯನ್ನು ನಿಯಂತ್ರಿಸಲು ಗ್ರೀನ್‌ ಟೀ ಒಳ್ಳೆಯ ಮದ್ದು. ಕೊಬ್ಬನ್ನು ಕರಗಿಸಬಲ್ಲ ಈ ಪೇಯದಲ್ಲಿ ಆ್ಯಂಟಿಆಕ್ಸಿಡೆಂಟ್ಸ್‌ಗಳು ಆರೋಗ್ಯವನ್ನು ಕಾಪಾಡುತ್ತವೆ. ಚಯಾಪಚಯ ಕ್ರಿಯೆ ಹೆಚ್ಚಿಸಿ, ತೂಕ ಕಳೆದುಕೊಳ್ಳಲು ಸಹಕರಿಸುತ್ತವೆ.

Advertisement

5. ಮೆತ್ತನೆಯ ಮಸಾಜ್‌: ಸ್ನಾನಕ್ಕೂ ಮುನ್ನ ಕೊಬ್ಬರಿ ಎಣ್ಣೆ ಇಲ್ಲವೇ ಆಲಿವ್‌ ತೈಲದಿಂದ ಹೊಟ್ಟೆ ಮತ್ತು ಸೊಂಟದ ಭಾಗಕ್ಕೆ ಮಸಾಜ್‌ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಸ್ನಾಯುಗಳು ಬಿಗಿಗೊಳ್ಳುವುದಲ್ಲದೆ, ಆ ಭಾಗದಲ್ಲಿ ರಕ್ತ ಸಂಚಾರವೂ ಅಧಿಕಗೊಳ್ಳುವುದು.

6. ಒಂದು ಗ್ಲಾಸ್‌ ಬಿಸಿನೀರು: ಬೆಳಗ್ಗೆ ಎದ್ದಕೂಡಲೇ ಒಂದು ಗ್ಲಾಸ್‌ ಬಿಸಿನೀರನ್ನು ಸೇವಿಸಿದರೆ, ನಿಧಾನಕ್ಕೆ ಹೊಟ್ಟೆ ಕರಗುತ್ತದೆ. ಅಲ್ಲದೆ, ದೇಹದ ತಾಪಮಾನವನ್ನೂ ನಿಯಂತ್ರಿಸುವ ಶಕ್ತಿ ಬಿಸಿನೀರಿಗಿದೆ. ಇದಕ್ಕೆ ತುಸು ಲಿಂಬೆಹಣ್ಣಿನ ರಸ, ಅರ್ಧ ಚಮಚ ಜೇನುತುಪ್ಪ ಬೆರೆಸಿ ಸೇವಿಸಿದರೂ ಯೋಗ್ಯ ಫ‌ಲಿತಾಂಶ ಸಿಗುತ್ತದೆ.

7. “ಕೋಸು’ ಫ್ರೆಂಡ್‌ ಆಗಲಿ: ಕಡಿಮೆ ಕ್ಯಾಲೊರಿ, ಹೆಚ್ಚು ವಿಟಮಿನ್ಸ್‌ ಹೊಂದಿರುವ ಕೋಸನ್ನು ಆಹಾರದಲ್ಲಿ ಹೆಚ್ಚು ಬಳಸಿ. ಇದರಲ್ಲಿರುವ ಫೈಬರ್‌ ಅಂಶವು ಅನಗತ್ಯವಾಗಿ ಉಬ್ಬಿರುವ ಹೊಟ್ಟೆಯನ್ನು ನಿಯಂತ್ರಿಸುತ್ತದೆ. ಪ್ಯಾಂಟಾಥೆನಿಕ್‌ ಆ್ಯಸಿಡ್‌, ಥಿಯಾಮಿನ್‌, ರಿಬೋಫ್ಲೇವಿನ್‌ ಅಂಶಗಳು ಚಯಾಪಚಯ ಕ್ರಿಯೆಗೆ ಹೆಚ್ಚು ನೆರವಾಗುತ್ತವೆ.

8. ಅಧಿಕ ಮಸಾಲೆ ಸೇವನೆ: ಮಸಾಲೆ ಪದಾರ್ಥಗಳು ಕೇವಲ ನಾಲಿಗೆಯ ರುಚಿಯನ್ನು ಆಕರ್ಷಿಸುವುದಿಲ್ಲ. ಇವು ಅನಗತ್ಯ ಹೊಟ್ಟೆಯನ್ನೂ ಕರಗಿಸುತ್ತವೆ. ಕಾಳುಮೆಣಸು, ಜೀರಿಗೆ, ಅರಿಶಿನಗಳು ಜೀರ್ಣಕ್ರಿಯೆಯನ್ನೂ ಹೆಚ್ಚಿಸಿ, ದೇಹದೊಳಗಿನ ಕೊಬ್ಬನ್ನು ನಿಯಂತ್ರಿಸುತ್ತವೆ.

9. ಲಘು ವ್ಯಾಯಾಮ: ಬಾಣಂತನದ ವೇಳೆ ಭಾರ ಎತ್ತುವ, ದೇಹಕ್ಕೆ ಅದರಲ್ಲೂ ಹೊಟ್ಟೆಯ ಭಾಗಕ್ಕೆ ಅಧಿಕ ಆಯಾಸ ತರುವಂಥ ವ್ಯಾಯಾಮಗಳನ್ನು ಮಾಡುವಂತಿಲ್ಲ. ಕೆಲವು ಸರಳವಾದ ಆಸನಗಳು, ನಡಿಗೆ ಹೊಟ್ಟೆಯ ಗಾತ್ರವನ್ನು ಕುಗ್ಗಿಸಬಲ್ಲವು.

Advertisement

Udayavani is now on Telegram. Click here to join our channel and stay updated with the latest news.

Next