Advertisement

ಮೈ ನವಿರೇಳಿಸಿದ ರಾಜ್ಯಮಟ್ಟದ ಟಗರಿನ ಕಾಳಗ

06:10 PM Aug 19, 2022 | Shwetha M |

ಬಸವನಬಾಗೇವಾಡಿ: ಬಸವೇಶ್ವರ (ಮೂಲ ನಂದೀಶ್ವರ) ಜಾತ್ರಾ ಮಹೋತ್ಸವ 4ನೇ ದಿನವಾರದ ಗುರುವಾರ ಪಟ್ಟಣದ ಬಸವೇಶ್ವರ ದೇವಾಲಯದ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಟಗರಿನ ಕಾಳಗ ನೋಡುಗರ ಮೈ ನವಿರೇಳುವಂತೆ ಮಾಡಿತು. ‘

Advertisement

ಕಾಳಗ ವೀಕ್ಷಿಸಲು ವಿಜಯಪುರ, ಬಾಗಲಕೋಟೆ ಸೇರಿ ರಾಜ್ಯದ ವಿವಿಧ ಜಿಲ್ಲೆಯಿಂದ ಸಾವಿರಾರು ಜನರು ಆಗಮಿಸಿ ಕೇಕೆ, ಶಿಳ್ಳೆ, ಚಪ್ಪಾಳೆ ಹೊಡೆಯುವ ಮೂಲಕ ಟಗರಿನ ಕಾಳಗ ಹುರಿದುಂಬಿಸಿದರು. ಅಪಾರ ಸಂಖ್ಯೆಯ ಭಕ್ತರು ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆದರು. 4 ಹಲ್ಲಿನ ಟಗರಿನ ಕಾಳಗದಲ್ಲಿ ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿಯ ಕನಕ ಶ್ರೀ ಗೆಳೆಯರ ಬಳಗ ಪ್ರಥಮ, ಮನಗೂಳಿಯ ಎಂ.ಜಿ. ಗ್ರೂಪ್‌ ದ್ವಿತೀಯ, ಬನ್ಮದಬುನ್ನಿಯ ಕರೆಮ್ಮದೇವಿ ಪ್ರಸನ್ನ ಟಗರು ತೃತೀಯ ಬಹುಮಾನ ಪಡೆದವು. 8 ಹಲ್ಲಿನ ಟಗರಿನ ಕಾಳಗದಲ್ಲಿ ಬಸವನಬಾಗೇವಾಡಿ ಲವ್ಲಿಬಾಯ್‌ ಬಿ ಪ್ರಥಮ, ಕೇಸಾಪೂರಗಿಡ್ಡಿ. ಬಿ (ದ್ವಿತೀಯ), ಬಸವನಬಾಗೇವಾಡಿ ಲವ್ಲಿಬಾಯ್‌ ಎ. ತೃತೀಯ ಬಹುಮಾನ ಪಡೆದವು.

ಟಗರಿನ ಕಾಳಗಕ್ಕೆ ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು, ಶಿವಾನಂದ ಈರಕಾರ ಮುತ್ಯಾ ಚಾಲನೆ ನೀಡಿದರು. ಈ ವೇಳೆ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಸಂಗಮೇಶ ಓಲೇಕಾರ, ವಿಕಾಸ ಜೋಗಿ, ಎಂ.ಜಿ. ಆದಿಗೊಂಡ, ಶಂಕರಗೌಡ ಬಿರಾದಾರ, ರವಿ ಚಿಕ್ಕೊಂಡ, ಬಸವರಾಜ ಕೋಟಿ, ಸುಭಾಷ ಚಿಕ್ಕೊಂಡ , ಪರಶುರಾಮ ಜಮಖಂಡಿ, ಬಸವರಾಜ ಅಳ್ಳಗಿ ಇತರರಿದ್ದರು. ರಸಮಂಜರಿ ಇಂದು: ಆ.19ರಂದು ಸಂಜೆ 7ಕ್ಕೆ ಕಂಬದ ರಂಗಯ್ಯ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next