Advertisement

Puttur: ಸಹಕಾರ, ನವೋದಯ ಸದಸ್ಯರಿಗೆ ಕ್ರೀಡಾಕೂಟ

09:38 AM Aug 15, 2023 | Team Udayavani |

ಪುತ್ತೂರು: ಸಹಕಾರ, ನವೋದಯ ಸ್ವ-ಸಹಾಯ ಸಂಘದ ಸದಸ್ಯರಿಗೆ ಪುತ್ತೂರಿನಲ್ಲಿ ವಿಭಾಗ ಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ (ಎಸ್‌ಸಿಡಿಸಿಸಿ) ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

Advertisement

ಎಸ್‌ಸಿಡಿಸಿಸಿ ಬ್ಯಾಂಕಿನ ಪುತ್ತೂರು ಶಾಖಾ ಕಟ್ಟಡದಲ್ಲಿ ಸೋಮವಾರ ನೂತನ ಎಟಿಎಂ ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಾಗಲೇ 10 ಶಾಖೆಗಳಲ್ಲಿ ಎಟಿಎಂ ಆರಂಭಗೊಂಡಿದ್ದು ಈ ತಿಂಗಳಲ್ಲಿ ಬೆಳ್ತಂಗಡಿ, ಬೆಳುವಾಯಿಯಲ್ಲಿ ಪ್ರಾರಂಭಗೊಳ್ಳಲಿದೆ. ಮುಂದೆ ಗ್ರಾಮಾಂತರ ಪ್ರದೇಶದ ಶಾಖೆಗಳಲ್ಲೂ ತೆರೆಯಲಿದ್ದೇವೆ ಎಂದರು.

ಮೊಳಹಳ್ಳಿ ಶಿವರಾಯರ ಕನಸಿನ ಕೂಸಾಗಿ ಪುತ್ತೂರಿನಲ್ಲಿ ಮೊಳಕೆಯೊಡೆದ ಎಸ್‌ಸಿಡಿಸಿಸಿ ಬ್ಯಾಂಕ್‌ ಈಗಾಗಲೇ 113 ಶಾಖೆಗಳನ್ನು ಹೊಂದಿದ್ದು ಶೀಘ್ರ ಇನ್ನೆರಡು ಶಾಖೆಗಳನ್ನು ತೆರೆಯಲಿದೆ. ಅನೇಕ ಹೊಸ-ಹೊಸ ತಂತ್ರಜ್ಞಾನಗಳನ್ನು ಜೋಡಿಸಿಕೊಂಡು ಸಹಕಾರ ಸಂಘಗಳನ್ನು ಆಧುನೀಕರಣಗೊಳಿಸುವ ಮೂಲಕ ಜಿಲ್ಲೆಯಲ್ಲಿ ಸಹಕಾರ ಕ್ರಾಂತಿಯೇ ಮೂಡಿದೆ ಎಂದರು.

ಪುತ್ತೂರಿನ ಅಭಿವೃದ್ಧಿಗೆ ಯೋಜನೆಗಳನ್ನು ಅನುಷ್ಠಾನಿಸುವಲ್ಲಿ ಶಾಸಕ ಅಶೋಕ್‌ ಕುಮಾರ್‌ ರೈ ವಿಶೇಷ ಪ್ರಯತ್ನ ನಡೆಸುತ್ತಿದ್ದಾರೆ. ಪುತ್ತೂರಿಗೆ ಸರಕಾರಿ ಮೆಡಿಕಲ್‌ ಕಾಲೇಜು ಅನ್ನು ಮಂಜೂರು ಮಾಡಿಸುವ ಸಾಮರ್ಥ್ಯ ಕೂಡ ಅವರಿಗೆ ಇದೆ ಎಂದರು.

Advertisement

ಶಾಸಕ ಅಶೋಕ್‌ ಕುಮಾರ್‌ ರೈ ಎಟಿಎಂ ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಭಾಷೆಗಳಲ್ಲಿ ವ್ಯವಹರಿಸುವ ಸಿಬಂದಿಯನ್ನು ಹೊಂದಿರುವ ಎಸ್‌ ಸಿಡಿಸಿಸಿನಂತಹ ಸಹಕಾರ ಸಂಘಗಳು ರಾಷ್ಟ್ರೀಕೃತ ಬ್ಯಾಂಕನ್ನು ಮೀರಿ ಬೆಳೆದು ನಿಂತಿವೆ ಎಂದು ಪ್ರಶಂಸಿಸಿದರು.

ನವೀಕೃತ ಡಿ.ಆರ್‌. ಸೆಂಟರನ್ನು ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್‌ ಜೈನ್‌ ಉದ್ಘಾಟಿಸಿದರು. ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್‌ ಕೌಶಲ್‌ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜಾರಾಮ ಭಟ್‌, ಕೆ. ಜೈರಾಜ್‌ ಬಿ. ರೈ ಉಪಸ್ಥಿತರಿದ್ದರು.

ಫ‌ಲಾನುಭವಿಗಳಿಗೆ ಠೇವಣಿಪತ್ರ, ಸಾಲಪತ್ರ, ಚೈನತ್ಯ ವಿಮಾ ಪರಿಹಾರದ ಚೆಕ್‌ ವಿತರಿಸಲಾಯಿತು. ಅಕ್ಷಯ, ಶಾಂತಿ, ಸೌಭಾಗ್ಯ ಹೆಸರಿನ ನವೋದಯ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಲಾಯಿತು.

ಸಮ್ಮಾನ

ಶಾಸಕ ಅಶೋಕ್‌ ಕುಮಾರ್‌ ರೈ ಅವರನ್ನು ಬ್ಯಾಂಕಿನ ವತಿಯಿಂದ, ಡಾ| ರಾಜೇಂದ್ರ ಕುಮಾರ್‌ ಅವರನ್ನು ಸಹಕಾರಿಗಳ ಪರವಾಗಿ ಸಮ್ಮಾನಿಸಲಾಯಿತು. ಸವಣೂರು ಸಿಎ ಬ್ಯಾಂಕ್‌ ಸಿಇಒ ಚಂದ್ರಶೇಖರ ಸಮ್ಮಾನ ಪತ್ರ ವಾಚಿಸಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೊಟ್ಟು ಸ್ವಾಗತಿಸಿ, ಸಿಇಒ ಕೆ. ಗೋಪಾಲಕೃಷ್ಣ ಭಟ್‌ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next