Advertisement

Wonderla: ವಿಶ್ವ ಪುರುಷರ ದಿನದ ಪ್ರಯುಕ್ತ ವಂಡರ್‌ಲಾದಿಂದ ವಿಶೇಷ ಕೊಡುಗೆ

02:25 PM Nov 17, 2023 | Team Udayavani |

ಬೆಂಗಳೂರು: ಅಮ್ಯೂಸ್‌ಮೆಂಟ್‌ ಪಾರ್ಕ್‌ ವಂಡರ್‌ಲಾ ಹಾಲಿಡೇಸ್‌ ಲಿಮಿಟೆಡ್‌ “ವಿಶ್ವ ಪುರುಷರ’ ದಿನಾಚರಣೆಯ ಅಂಗವಾಗಿ ವಿಶೇಷ ಕೊಡುಗೆಯನ್ನು ಘೋಷಿಸಿದೆ.

Advertisement

ಈ ಕೊಡುಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸುವವರಿಗೆ ಮಾತ್ರ ಸಿಗಲಿದೆ. ನ.19ರಂದು ವಂಡರ್‌ಲಾಗೆ ಬರುವ ಪುರುಷರಿಗೆ ವಿಶೇಷ ಕೊಡುಗೆ ನೀಡಲಾಗಿದೆ. ಒಂದು ಟಿಕೆಟ್‌ಗೆ ಇನ್ನೊಂದು ಟಿಕೇಟ್‌ ಉಚಿತವಿರಲಿದೆ. ಈ ಉಚಿತ ಟಿಕೆಟ್‌ ಸೌಲಭ್ಯ ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿದೆ. ಬೆಂಗಳೂರು, ಕೊಚ್ಚಿ ಅಥವಾ ಹೈದ್ರಾಬಾದ್‌ ಪಾರ್ಕ್‌ನಲ್ಲಿ ಪುರುಷರಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿದೆ.

ಇದರ ಭಾಗವಾಗಿ ಪಾರ್ಕ್‌ ಪ್ರವೇಶಕ್ಕೆ ಮೋಜಿನ ಚಟುವಟಿಕೆ ಆಯೋಜಿಸ ಲಾಗುತ್ತದೆ. ಪ್ರಭಾವಶಾಲಿ ಪ್ರದರ್ಶನ ನೀಡುವ ಮೊದಲ 100 ಅರ್ಹ ಪುರುಷರಿಗೆ ಉಚಿತ ಟಿಕೇಟ್‌ ಸಿಗಲಿದೆ. ವಂಡರ್‌ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್‌ ಕೆ.ಚಿಟ್ಟಿಲಪ್ಪಿಳ್ಳಿ ಮಾತನಾಡಿ, ಒಂದು ಕುಟುಂಬಕ್ಕೆ ಗಣನೀಯ ಕೊಡುಗೆ ನೀಡುವಲ್ಲಿ ಪುರುಷರ ಪಾತ್ರ ಮಹತ್ವದಾಗಿದೆ. ವಂಡರ್‌ಲಾನಲ್ಲಿ ಮರೆಯಲಾಗದ ಅನುಭವ ಮತ್ತು ಕೊಡುಗೆಯನ್ನು ನೀಡುವ ಮೂಲಕ ಪುರುಷರಿಗೆ ಗೌರವ ನೀಡಲಾಗುತ್ತಿದೆ ಎಂದರು.

https://bookings.wonderla.com/ ನಲ್ಲಿ ಟಿಕೇಟ್‌ ಬುಕ್‌ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next