Advertisement

ಹಾಡಲ್ಲಿ ‘ಕಾಶಿ’ ದರ್ಶನ; ಝೈದ್‌ ಖಾನ್‌ ನಟನೆಯ ‘ಬನಾರಸ್‌’ಚಿತ್ರದ ಸಾಂಗ್ ರಿಲೀಸ್

02:46 PM Jul 02, 2022 | Team Udayavani |

ಝೈದ್‌ ಖಾನ್‌ ಅಭಿನಯದ ಚೊಚ್ಚಲ ಚಿತ್ರ “ಬನಾರಸ್‌’ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ತನ್ನ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

Advertisement

ಸದ್ಯ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ “ಬನಾರಸ್‌’ ಚಿತ್ರದ “ಮಾಯಗಂಗೆ ಮಾಯಗಂಗೆ ಮೌನಿಯಾದಳೇ…’ ಎಂಬ ಮೊದಲ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ. ಡಾ. ವಿ ನಾಗೇಂದ್ರ ಪ್ರಸಾದ್‌ ಬರೆದಿರುವ ಈ ಹಾಡಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದು, ಅರ್ಮಾನ್‌ ಮಲ್ಲಿಕ್‌ ಗೀತೆಗೆ ಧ್ವನಿಯಾಗಿದ್ದಾರೆ. ನಿರ್ಮಾಪಕಿ ಶೈಲಜಾ ನಾಗ್‌ “ಬನಾರಸ್‌’ ಚಿತ್ರದ ಈ ಮೊದಲ ಗೀತೆಯನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

“ಬನಾರಸ್‌’ ಚಿತ್ರದ ಮೊದಲ ಗೀತೆಯ ಬಗ್ಗೆ ಮಾತನಾಡಿದ ನಿರ್ದೇಶಕ ಜಯತೀರ್ಥ, “ಇಡೀ ಸಿನಿಮಾದ ಕಥೆ ಕಾಶಿಯಲ್ಲಿ ನಡೆಯುತ್ತದೆ. ಕಾಶಿ ಅಂದ್ರೆ ವೈರಾಗ್ಯ ಸೂಚಕ. ಅಂಥ ಜಾಗದಲ್ಲಿ ಅರಳುವ ಪ್ರೇಮದ ಸನ್ನಿವೇಶವನ್ನು ಗೀತೆಯ ಮೂಲಕ ಚಿತ್ರದಲ್ಲಿ ಹೇಳಬೇಕಿತ್ತು. ಅದನ್ನು ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್‌, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಗೀತೆಯಲ್ಲಿ ತುಂಬ ಚೆನ್ನಾಗಿ ಕಟ್ಟಿಕೊಟ್ಟಿ ದ್ದಾರೆ. ಅದ್ವೆ„ತ ಗುರುಮೂರ್ತಿ ಈ ಗೀತೆಯ ದೃಶ್ಯವನ್ನು ಅದ್ಭುತವಾಗಿ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ಝೈದ್‌ ಖಾನ್‌, ಸೋನಾಲ್‌ ಮತ್ತು ಸುಜಯ್‌ ಶಾಸ್ತ್ರೀ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೇ ಕೊರಿಯೋಗ್ರಫಿ ಇಲ್ಲದೆ ಸಹಜವಾಗಿ ಈ ಗೀತೆಯನ್ನು ಕಾಶಿಯಲ್ಲಿ ಸೆರೆಹಿಡಿದಿದ್ದೇವೆ’ ಎಂದು ಹಾಡು ಮೂಡಿಬಂದ ಹಿನ್ನೆಲೆ ವಿವರಿಸಿದರು.

ಹಾಡಿನ ಬಗ್ಗೆ ಮಾತನಾಡಿದ ನಾಯಕ ನಟ ಝೈದ್‌ ಖಾನ್‌, “ಸಿನಿಮಾದ ಹಾಡು ತುಂಬಾ ಚೆನ್ನಾಗಿ ಬಂದಿದ್ದು, ನೋಡುಗರಿಗೆ ಹೊಸ ಅನುಭವ ಕೊಡಲಿದೆ. ಇಡೀ ತಂಡದ ಪ್ರಯತ್ನದಿಂದ ಒಳ್ಳೆಯ ಸಿನಿಮಾ ಮಾಡಿದ್ದೇವೆ. ಹಾಡು ಎಲ್ಲರಿಗೂ ಇಷ್ಟವಾಗುವಂತಿದ್ದು, ಅಂತೆಯೇ ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಇದನ್ನೂ ಓದಿ:ಬೈಬಲ್ ಹಿಂದಿದೆ ರೋಚಕ ಕಥೆ…ಪವಾಡ ಪುರುಷ ಶ್ರೀ ಅಜಾತ ನಾಗಲಿಂಗ ಸ್ವಾಮೀಜಿ

ಗೀತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್‌, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಚಿತ್ರದ ಹಾಡಿನ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ನಾಯಕಿ ಸೋನಾಲ್‌ ಮಾಂತೆರೋ, ನಟ ಸುಜಯ್‌ ಶಾಸ್ತ್ರೀ, ನಿರ್ಮಾಪಕ ತಿಲಕ್‌ ರಾಜ್‌ ಬಲ್ಲಾಳ್‌ ಸಿನಿಮಾ ಸಾಗಿಬಂದ ಬಗ್ಗೆ ಮಾತನಾಡಿದರು.

ನಟರಾದ ವಿನೋದ್‌ ಪ್ರಭಾಕರ್‌, ಅಭಿಷೇಕ್‌ ಅಂಬರೀಶ್‌, ಯಶಸ್‌ ಸೂರ್ಯ, ಲಹರಿ ವೇಲು, ಚಂದ್ರು, ನಿರ್ಮಾಪಕ ಸಂತೋಷ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು “ಬನಾರಸ್‌’ ಚಿತ್ರದ ಮೊದಲ ಹಾಡು ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next