Advertisement

ಅಂಬೇಡ್ಕರ್‌ರಿಂದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ

06:10 PM Nov 28, 2022 | Team Udayavani |

ದಾವಣಗೆರೆ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಅಂಬೇಡ್ಕರ್‌ರವರು ಅತ್ಯುತ್ತಮ ಸಂವಿಧಾನ ರಚಿಸಿ ಭದ್ರ ಬುನಾದಿ ಹಾಕಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌ ಸ್ಮರಿಸಿದರು.

Advertisement

ನಗರದ ಅಂಬೇಡ್ಕರ್‌ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್‌ ಇಂಟಕ್‌ ವಿಭಾಗದಿಂದ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಸಮಾರಂಭದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಅಂಬೇಡ್ಕರರು ರಚಿಸಿದ ಸಂವಿಧಾನದ ಬೇರುಗಳು ಗಟ್ಟಿಯಾಗಿವೆ. ಹಾಗಾಗಿ ಸಂವಿಧಾನ ರಚಿಸಿ 72 ವರ್ಷ ಕಳೆದರೂ ಪ್ರಜಾಪ್ರಭುತ್ವ ದೇಶದಲ್ಲಿ ಭದ್ರವಾಗಿದೆ ಎಂದರು.

ಭಾರತದ ಜೊತೆಯಲ್ಲಿಯೇ ಸ್ವಾತಂತ್ರ್ಯ ಪಡೆದ ಪಾಕಿಸ್ತಾನದಲ್ಲಿ ಹಲವು ಬಾರಿ ರಕ್ತ ಕ್ರಾಂತಿಯಾಗಿ ಪ್ರಜಾಪ್ರಭುತ್ವ ಅಪಾಯಕ್ಕೆ ಗುರಿಯಾಗಿದೆ. ಭುಟ್ಟೋ ಅವರನ್ನು ನೇಣುಗಂಬಕ್ಕೆ ಏರಿಸಲಾಯಿತು. ಮಗಳಾದ ಬೆನಜೀರ್‌ ಭುಟ್ಟೋ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಸದಾ ಕಾಲ ಅರಾಜಕತೆ ತಾಂಡವವಾಡುತ್ತಿದೆ.

ಆದರೆ ಭಾರತದಲ್ಲಿ ಸಂವಿಧಾನ ಅಂಗೀಕರಿಸಿದ ದಿನದಿಂದ ಇಂದಿನವರೆಗೂ ಕಳೆದ 72 ವರ್ಷಗಳಿಂದ ದೇಶದಲ್ಲಿ ಶಾಂತಿ-ನೆಮ್ಮದಿ ಜನರಿಗೆ ದೊರಕುತ್ತಿದ್ದರೆ ಅದು ಅಂಬೇಡ್ಕರ್‌ ಬರೆದ ಸಂವಿಧಾನದಿಂದ ಎಂದು ಬಣ್ಣಿಸಿದರು. ಜಿಲ್ಲಾ ಕಾಂಗ್ರೆಸ್‌ ಇಂಟೆಕ್‌ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್‌, ಎಂ.ಡಿ. ಸಮೀವುಲ್ಲಾ, ಮಹಮ್ಮದ್‌ ಜಿಕ್ರಿಯಾ, ರುದ್ರಮುನಿ, ಅಲೆಕ್ಸಾಂಡರ್‌ ಜಾನ್‌, ಕೆ.ಜಿ. ರಹಮತ್‌ಉಲ್ಲಾ, ಆರ್‌.ಸೂರ್ಯ ಪ್ರಕಾಶ್‌, ಜಿ ಎಲ್‌ ಚಂದ್ರಶೇಖರ್‌, ಬಿ.ಎಚ್‌. ಉದಯಕುಮಾರ್‌, ಡಿ. ಶಿವಕುಮಾರ್‌, ಬಿ.ಎಸ್‌. ಸುರೇಶ್‌, ಜಗದೀಶ್‌ ಹಿರೇಮಠ, ವಿರುಪಾಕ್ಷಿ, ವೆಂಕಟೇಶ್‌,ಮಂಜುನಾಥ್‌, ವೈ.ಬಸವರಾಜ್‌, ನಾಗರಾಜ್‌, ಮಹೇಶ್‌, ಮೆಹಬೂಬ್‌ ಸಾಬ್‌, ಈರಣ್ಣ, ಬಾಷಾ ಸಾಬ್‌ ಮತ್ತಿತರರು ಇದ್ದರು.

ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ಕಳೆದ ಎಂಟೂವರೆ ವರ್ಷಗಳಲ್ಲಿ ಹಲವು ಬಾರಿ ಅವರ ಸಂಪುಟದ ಸಚಿವರು, ಬಿಜೆಪಿ ನಾಯಕರು ಸಂವಿಧಾನ ಬದಲಿಸುತ್ತೇವೆ ಎಂದು ಮಾತನಾಡುತ್ತಾರೆ. ಹಾಗಾಗಿ ಮೋದಿ ಸರ್ಕಾರ ಸಂವಿಧಾನ ವಿರೋಧಿ ಸರ್ಕಾರವಾಗಿದೆ. ಅವರ ಸಂಪುಟದಲ್ಲಿದ್ದ ಮಂತ್ರಿಯೊಬ್ಬರು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿದಾಗ ಮೋದಿಯವರು ಅವರನ್ನು ವಜಾ ಮಾಡಲಿಲ್ಲ. ಇದರಿಂದ ಮೋದಿ ಸರ್ಕಾರ ಸಂವಿಧಾನ ವಿರೋಧಿ ಸರ್ಕಾರವೆಂದು ರುಜುವಾತಾಗಿದೆ. ಒಂದೊಮ್ಮೆ ಸಂವಿಧಾನ ಬದಲಿಸಿದರೆ ದೇಶದಲ್ಲಿ ರಕ್ತ ಕ್ರಾಂತಿ ಆಗಲಿದೆ ಎಂದು ಡಿ. ಬಸವರಾಜ್‌ ಎಚ್ಚರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next