Advertisement
ಸಂಸತ್ತಿನ ಒಳಗೆ – ಹೊರಗೆ ಬೆಂಕಿ ಹಚ್ಚಿಕೊಳ್ಳುವ ಮೂಲಕ ಗಮನ ಸೆಳೆಯುವ ಯೋಜನೆ ಹಾಕಿಕೊಂಡಿದ್ದೆವು. ಇದರಿಂದ ಸರಕಾರಕ್ಕೆ ಸಂದೇಶ ನೀಡಿದಂತಾ ಗುತ್ತದೆ ಎಂಬ ಲೆಕ್ಕಾಚಾರವಿತ್ತು ಎಂದು ಝಾ ತಿಳಿಸಿದ್ದಾಗಿ ಪೊಲೀ ಸರು ಹೇಳಿದ್ದಾರೆ.
ನಾವೆಲ್ಲರೂ ಭಗತ್ ಸಿಂಗ್ ಮತ್ತು ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದವರು. ದೇಶದ ಸಮಸ್ಯೆಗಳನ್ನು “ಕಿವುಡಾಗಿರುವ ಕಿವಿಗಳಿಗೆ’ ತಲುಪಿಸುವುದು ನಮ್ಮ ಉದ್ದೇಶವಾಗಿತ್ತು. ಜತೆಗೆ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಗುರಿಯನ್ನೂ ಹಾಕಿಕೊಂಡಿದ್ದೆವು ಎಂದು ಆರೋಪಿಗಳು ಹೇಳಿ ದ್ದಾಗಿ ಪೊಲೀಸರು ತಿಳಿಸಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ದರಷ್ಟೇ ನಮ್ಮೆಲ್ಲ ಅಭಿಪ್ರಾಯಗಳನ್ನು ಜನರಿಗೆ ತಲುಪಿಸಲು ಸಾಧ್ಯ ಎಂದು ನಂಬಿದ್ದರು. ಪ್ರಸ್ತುತ ಇರುವ ಯಾವ ರಾಜಕೀಯ ಪಕ್ಷಗಳ ಸಿದ್ಧಾಂತ ಗಳೂ ನಮಗೆ ಒಪ್ಪಿಗೆಯಾಗುತ್ತಿಲ್ಲ. ಹೀಗಾಗಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸಲಿಲ್ಲ ಎಂದು ಸಾಗರ್ ಶರ್ಮಾ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.