Advertisement

ಸಂಪ್ರದಾಯದಿಂದಲೇ ಸಣ್ಣ ಸಮುದಾಯ ಅಸ್ತಿತ್ವದಲ್ಲಿ

04:38 AM Feb 25, 2019 | |

ಕಲಬುರಗಿ: ಸಂಪ್ರದಾಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಣ್ಣ-ಪುಟ್ಟ ಸಮುದಾಯಗಳ ಅಸ್ತಿತ್ವಕ್ಕೆ ಸಹಕಾರಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌. ಸತೀಶ ಹೇಳಿದರು.

Advertisement

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರವಿವಾರ ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘ ಏರ್ಪಡಿಸಿದ್ದ “ಸಮಷ್ಟಿ’ ವಧು-ವರರ ಪರಿಚಯ ಮಾಹಿತಿ-2019 ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದ ಅವರು, ಪ್ರಬಲ ಸಮುದಾಯಗಳ ಮುಂದೆ ಸಣ್ಣ-ಪುಟ್ಟ ಸಮುದಾಯಗಳು ಗುರುತಿಸಿಕೊಳ್ಳುವುದು ಕಷ್ಟದ ಕೆಲಸ ಎಂದರು.

ವಧು-ವರರ ಪುಸ್ತಕ ಹೊರತರುವುದರಿಂದ ಸಮಾಜವನ್ನು ಬಲಪಡಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ವಧು ಕಡೆಯವರಿಗೆ ವರನ ಕಡೆಯವರು ಕಷ್ಟ ಕೊಡುವ, ಸತಾಯಿಸುವ ಮನೋಭಾವನೆ ಎಂದಿಗೂ ಬೇಡ. ಹಿರಿಯರ ಮಾರ್ಗದರ್ಶನ ಇಲ್ಲದ ಸಮಾಜ ಸಮಾಜವಲ್ಲ. ಸಮಾಜಕ್ಕೆ ಹೊರೆಯಾಗಿರುವ ಕೆಟ್ಟ ಪದ್ಧತಿಗಳು ನಿರ್ಮೂಲನೆ ಮಾಡುವಲ್ಲಿ ಪ್ರಜ್ಞಾವಂತರು ಯತ್ನಿಸಬೇಕು. ಆಗ ಸಮಾಜ ಸುಧಾರಣೆಯತ್ತ ಸಾಗುತ್ತದೆ ಎಂದು ಹೇಳಿದರು.

ಕಲಬುರಗಿ ಶಿಕ್ಷಣ ಸಂಸ್ಥೆ (ರೋಟರಿ ಕ್ಲಬ್‌) ಅಧ್ಯಕ್ಷ ಹಾಗೂ ನಗರೇಶ್ವರ ವೆಲ್‌ಫೇರ್‌ ಸೊಸೈಟಿ ಕಾರ್ಯದರ್ಶಿ ರವೀಂದ್ರ ಮುಕ್ಕಾ ಮುಖ್ಯ ಅತಿಥಿಯಾಗಿದ್ದರು. ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಭಾವಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾನೂನು ಸಲಹೆಗಾರ ಕೆ.ಎಸ್‌. ಸಕ್ರಿ, ಸಂಘಟನಾ ಕಾರ್ಯದರ್ಶಿ ರಾವ್‌ ಬಹಾದ್ದೂರ ರೂಗಿ ವೇದಿಕೆ ಮೇಲಿದ್ದರು. 

ಕೃಷಿ ಇಲಾಖೆ ಆತ್ಮಯೋಜನೆಯಡಿ “ಶ್ರೇಷ್ಠ ಕೃಷಿಕ’ ಪ್ರಶಸ್ತಿ ಪಡೆದ ಗುರುನಾಥ ಸೊನ್ನದ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಆಯ್ಕೆಯಾದ ಪತ್ರಕರ್ತ ಸಂಗಮನಾಥ ರೇವತಗಾಂವ್‌ ಅವರನ್ನು ಸನ್ಮಾನಿಸಲಾಯಿತು. ಸಂಘದ ಸೂರ್ಯಕಾಂತ ಕಾಬನೆ, ರಾಮಚಂದ್ರ ಗಂಜಿ, ಸೂರ್ಯಕಾಂತ ಸೊನ್ನದ, ಸೋಮಶೇಖರ ಧುತ್ತರಗಿ, ಅಣವೀರಪ್ಪ ಬಳ್ಳಾ, ಚಂದ್ರಕಾಂತ ಮುನ್ನೋಳಿ, ಶಾಂತಕುಮಾರ ಗೌರ, ಬಸವರಾಜ ಖರಾಡೆ, ಶ್ರವಣಕುಮಾರ ಮುನ್ನೋಳಿ, ಶಾಂತಮಲ್ಲಪ್ಪ ಜೇವೂರ, ವಿನೋದಕುಮಾರ ಜನೇವರಿ, ಶಿವಲಿಂಗಪ್ಪ ಅಷ್ಟಗಿ
ಮುಂತಾದವರಿದ್ದರು.

Advertisement

ಸೃಜನಾ ಮತ್ತು ಸಂಪದಾ ಸ್ವಾಗತಗೀತೆ ಹಾಡಿದರು. ಸಂಘದ ಆಡಳಿತ ಮಂಡಳಿ ಸದಸ್ಯ ಸಂಗಮನಾಥ ರೇವತಗಾಂವ ಸ್ವಾಗತಿಸಿದರು, ವಾಣಿಶ್ರೀ ನಿರೂಪಿಸಿದರು, ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ ಜಮಖಂಡಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next