Advertisement

ಸರಳವಾಗಿ ನಡೆದ ಬಂಕಸಾಣದ ಹೊಳೆಲಿಂಗೇಶ್ವ ರ ಜಾತ್ರೆ

09:43 PM Jan 15, 2022 | Girisha |

ಸೊರಬ: ತಾಲೂಕಿನ ವರದಾ ಮತ್ತು ದಂಡಾವತಿ ನದಿಗಳ ಸಂಗಮ ಕ್ಷೇತ್ರ ಬಂಕಸಾಣದ ಶ್ರೀ ಹೊಳೆಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ತಾಲೂಕು ಆಡಳಿತದಿಂದ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಕೇವಲ ಧಾರ್ಮಿಕ ವಿಧಿ-  ವಿಧಾನಗಳು ಮಾತ್ರ ಜರುಗಿದವು. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜನ ಸಂದಣಿ ಹೆಚ್ಚು ಸೇರದಂತೆ ಸರ್ಕಾರ ಕೈಗೊಂಡ ನಿರ್ಧಾರದಿಂದ ಜಾತ್ರೆಗೆ ನಿಷೇಧ ಹೇರಲಾಗಿತ್ತು. ತಾಲೂಕು ಮಾತ್ರವಲ್ಲದೆ, ನೆರೆಯ ಜಿಲ್ಲೆಗಳಿಂದ ಸಾವಿರಾರು ಭಕ್ತರನ್ನು ಒಳಗೊಂಡ ಶ್ರೀ ದೇವರ ಸನ್ನಿ ಧಿಯಲ್ಲಿ ಬಿಕೋ ಎನ್ನುವ ವಾತಾವರಣ ಸೃಷ್ಟಿಯಾಗಿತ್ತು.

Advertisement

ಶ್ರೀ ದೇವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕಿಕ್ಕಿರಿದು ಭಕ್ತ ಸಮೂಹ ಪಾಲ್ಗೊಳ್ಳುತ್ತಿತ್ತು. ನೆರೆಯ ತಾಲೂಕಿನ ಭಕ್ತರು ಎತ್ತಿನ ಗಾಡಿಯ ಮೂಲಕ ಆಗಮಿಸಿ, ಸುಮಾರು ಎರಡೂ¾ರು ದಿನ ತಂಗುತ್ತಿದ್ದರು. ಜಾತ್ರಾ ಮಹೋತ್ಸವ ಮಾತ್ರವಲ್ಲದೆ ನಾಟಕ ಪ್ರದರ್ಶನ, ಮಕ್ಕಳ ಆಟಿಕೆಗಳ ಪ್ರದರ್ಶನ ತಿಂಗಳುಗಟ್ಟಲೆ ನಡೆಯುತ್ತಿತ್ತು. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದೇವರ ಸನ್ನಿ ಧಿಯಲ್ಲಿ ಕೊರೊನಾ ತಂದ ಆತಂಕದಿಂದ ಭಕ್ತರಿಲ್ಲದೇ ಜಾತ್ರೋತ್ಸವ ನಡೆಯಿತು. ಹೆಚ್ಚಿನ ಜನ ಸೇರದಂತೆ ಬಂಕಸಾಣಕ್ಕೆ ತೆರಳುವ ಮಾರ್ಗಗಳಲ್ಲಿ ಪೊಲೀಸ್‌ ಇಲಾಖೆಯಿಂದ ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸಿ ದೇವಸ್ಥಾನದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಆದರೆ, ರಥೋತ್ಸವವನ್ನು ನಿಯಮದಂತೆ ಎಳೆಯಲು ಅವಕಾಶ ನೀಡಿದ್ದರೆ ಚೆನ್ನಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಸ್ಥಳೀಯರು. ಶ್ರೀ ಹೊಳೆಲಿಂಗೇಶ್ವರ ರಥೋತ್ಸವ ತಾಲೂಕಿ ನಲ್ಲಿಯೇ ಅತಿ ದೊಡ್ಡ ಜಾತ್ರಾ ಮಹೋತ್ಸವವಾಗಿತ್ತು. ತಿಂಗಳುಗಳ ಕಾಲ ನಡೆಯುವ ಏಕೈಕ ಜಾತ್ರೆ ಎಂದರೆ ಬಂಕಸಾಣ ಜಾತ್ರೆ ಎಂದೇ ಪ್ರಸಿದ್ಧಿ. ಸರ್ವ ಧರ್ಮೀಯರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೇ ಮೊದಲ ಬಾರಿಗೆ ಜನರಿಲ್ಲದೆ ಜಾತ್ರೋತ್ಸವವನ್ನು ಕೇವಲ ಧಾರ್ಮಿಕ ವಿ ಧಿ- ವಿಧಾನಗಳನ್ನು ಪೂರೈಸಲಾಗಿದೆ ಎನ್ನುತ್ತಾರೆ ಶ್ರೀ ಹೊಳೆಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜು ಗೌಡ.

 

Advertisement

Udayavani is now on Telegram. Click here to join our channel and stay updated with the latest news.

Next