Advertisement
ಒಂದೇ ದಿನ ಐವರು ಮೃತ: ಮೃತಪಟ್ಟ ಐವರಲ್ಲಿ ಎಲ್ಲರೂ ವಯೋವೃದ್ಧರೇ ಆಗಿದ್ದಾರೆ. 72 ವರ್ಷದ ವೃದ್ಧ, 60 ವರ್ಷದ ವೃದ್ಧ, 65 ವರ್ಷದ ವೃದ್ಧೆ, 85 ವರ್ಷದ ವೃದ್ಧೆ ಹಾಗೂ 86 ವರ್ಷದ ವೃದ್ಧೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಲ್ಲಿ ರೋಗಿ ಸಂಖ್ಯೆ -4317ರ ಸಂರ್ಪದಲ್ಲಿದ್ದ 72 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇನ್ನು ಸುಂಕದಕಟ್ಟೆಯ 60 ವರ್ಷದ ವೃದ್ಧರೊಬ್ಬರು ಮೃತಪಟ್ಟ ಮೇಲೆ ಅವರಿಗೆ ಕೋವಿಡ್ 19 ಇರುವುದು ದೃಢಪಟ್ಟಿದೆ. ಉಳಿದ 4 ಪ್ರಕರಣಗಳಲ್ಲಿ ಸೋಂಕಿತರು ಜೂ.10ರ ನಂತರವೇ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ವಾಸನೆ ಗ್ರಹಿಕೆ ಕಳೆದುಕೊಂಡವರಿಗೆ ಸೋಂಕು: ಆಹಾರ ಪದಾರ್ಥ ಮತ್ತು ಕೆಲವು ವಸ್ತುಗಳ ವಾಸನೆ ಗ್ರಹಿಕೆ ಕಳೆದುಕೊಂಡ ಹಿನ್ನೆಲೆಯಲ್ಲಿ ಸೋಂಕು ಪರೀಕ್ಷೆಗೆ ಒಳಪಟ್ಟ ಶ್ರೀರಾಮಪುರದ ಹನುಮಂತಪುರದಲ್ಲಿನ 24 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ತಮಿಳುನಾಡಿನಿಂದ ಬಂದ 40 ವರ್ಷದ ಪುರುಷ, ಕೇರಳದಿಂದ ಬಂದ 28 ವರ್ಷದ ಯುವಕ, ದೆಹಲಿಯಿಂದ ಬಂದ 11 ತಿಂಗಳ ಮಗು, ಮಹಾರಾಷ್ಟ್ರದಿಂದ ಬಂದ 24 ವರ್ಷದ ಯುವಕ ಹಾಗೂ ಆಂಧ್ರಪ್ರದೇಶದಿಂದ ಬಂದ 38 ವರ್ಷದ ಪುರುಷರೊಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಯಾವ ಪ್ರದೇಶದಲ್ಲಿ ಸೋಂಕು ದೃಢ?: ಚಾಮರಾಜಪೇಟೆಯ 47 ವರ್ಷದ ಪುರುಷ, ಶಿವಾಜಿನಗರದ 8ನೇ ಕ್ರಾಸ್‌ನ 65 ವರ್ಷದ ವೃದ್ಧೆ, ಶ್ವಾಸಕೋಶ ಸಮಸ್ಯೆ ಎದುರಿಸುತ್ತಿದ್ದ ಶ್ಯಾಮ ವಿದ್ಯಾಶಾಲ ಮಾರ್ಗದ ವಸತಿ ಸಮುಚ್ಚಯವೊಂದರ 42 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಆನಂದಪುರಂನ 45 ವರ್ಷದ ಮಹಿಳೆ, ಹರಿ ಕಾಲೋನಿ ಬಿಎಸ್‌ಕೆ 2ನೇ ಹಂತದ 32 ವರ್ಷದ ಪುರುಷ, ಸಿಡಿ ದೇವಸ್ಥಾನ ರಸ್ತೆ ಜಾಲಿ ಮಹನ್ ಸಮೀಪದ 45 ವರ್ಷದ ಪುರುಷ,
ಚಾಮರಾಜಪೇಟೆ 4ನೇ ಕ್ರಾಸ್‌ನ 62 ವರ್ಷದ ವೃದ್ಧ, ಡಿಜಿ ಹಳ್ಳಿಯ 32 ವರ್ಷದ ಪುರುಷ, ಜಿಜಿಡಿ ಸಲಾಡ್ ಭವನ್ ಸಮೀಪದ 38 ವರ್ಷದ ಪುರುಷ, ನಾಯಂಡಹಳ್ಳಿ ಮೆಟ್ರೋ ಲೇಔಟ್‌ನ 27 ವರ್ಷದ ಯುವತಿ ಹಾಗೂ ಮಾಗಡಿ ರಸ್ತೆಯ 12ನೇ ಕ್ರಾಸ್‌ನ 31 ವರ್ಷದ ಪುರುಷನಿಗೆ ಸೋಂಕು ತಾಕಿದೆ. ಸಬರ್‌ವಾಲ್ ಪ್ರದೇಶದ 60 ವರ್ಷದ ವೃದ್ಧ, ಗೊನ್‌ಗೊಂಡ ಹಳ್ಳಿಯ 85 ವರ್ಷದ ವೃದ್ಧೆ, ಚಾಮರಾಜಪೇಟೆ ಎಂಡಿ ಬ್ಲಾಕ್‌ನ 66 ವರ್ಷದ ವೃದ್ಧ, ನಂದಿನಿ ಲೇಔಟ್‌ನ 59 ವರ್ಷದ ವೃದ್ಧೆ, ಚಾಮರಾಜಪೇಟೆ ಬಾಬಾ ಲೈನ್ ವ್ಯಾಪ್ತಿಯಲ್ಲಿ 62 ವರ್ಷದ ವೃದ್ಧ,
ಕುಮಾರಸ್ವಾಮಿ ಲೇಔಟ್ ನ 38 ವರ್ಷದ ಪುರುಷ, ಕಲಾಸಿಪಾಳ್ಯದ 55 ವರ್ಷದ ಮಹಿಳೆ, ಇಂದಿರಾ ನಗರದ ಕೃಷ್ಣ ದೇವಸ್ಥಾನ ಸಮೀಪದ 86 ವರ್ಷದ ವೃದ್ಧೆಗೆ ಸೋಂಕು ಇರುವುದು ದೃಢಪಟ್ಟಿದೆ. ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮಂಗಳವಾರ 13 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ವಿಭೂತಿಪುರದ 33 ವರ್ಷದ ಪುರುಷ, ಯಲಚೇನಹಳ್ಳಿಯ 29 ವರ್ಷದ ಯುವತಿ, ಮಾರತ್ತಹಳ್ಳಿಯ 65 ವರ್ಷದ ವೃದ್ಧೆ, ತಿಂಡ್ಲುನ 38 ವರ್ಷದ ಮಹಿಳೆ ಹಾಗೂ ಮಾರತ್ತಹಳ್ಳಿಯ 23 ವರ್ಷದ ಯವತಿಗೆ ಸೋಂಕು ಹಬ್ಬಿದೆ.