Advertisement

Road Mishap; ಬೆಚ್ಚಿ ಬೀಳಿಸಿದ ಅಪಘಾತ; ವಿದ್ಯಾರ್ಥಿನಿಯರಿಗೆ ಗಾಯ-ವಿಡಿಯೋ ವೈರಲ್

05:18 PM Jul 26, 2023 | Team Udayavani |

ರಾಯಚೂರು: ನಗರದ ಸ್ಟೇಶನ್ ರಸ್ತೆಯಲ್ಲಿ ಈಚೆಗೆ ನಡೆದ ಅಪಘಾತದ ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬೆಚ್ಚಿ ಬೀಳಿಸಿದೆ.

Advertisement

ಜು.18ರಂದು ಸ್ಟೇಶನ್ ರಸ್ತೆಯ ರಾಘವೇಂದ್ರ ಪೆಟ್ರೋಲ್ ಬಂಕ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ.

ವೇಗವಾಗಿ ಬರುತ್ತಿದ್ದ ಕಾರಿಗೆ ಡಿವೈಡರ್ ಬಳಿ ಬೈಕ್ ಸವಾರ‌ ಅಡ್ಡಿ ಬಂದಿದ್ದು, ಅದನ್ನು ತಪ್ಪಿಸಲು ಹೋದ ಚಾಲಕ ನಿಯಂತ್ರಣ ತಪ್ಪಿ ಅಪಘಾತ ಮಾಡಿದ್ದಾನೆ. ಮೊದಲು ಬೈಕ್ ಗೆ ಡಿಕ್ಕಿ ಹೊಡೆದ ಕಾರು ಚಾಲಕ ಅದನ್ನು ತಪ್ಪಿಸಲು ಹೋಗಿ ಪಕ್ಕದಲ್ಲಿ ನಡೆದುಕೊಂಡು ಇಬ್ಬರು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದ್ದಾನೆ. ಆ ರಭಸಕ್ಕೆ ಒಬ್ಬ ವಿದ್ಯಾರ್ಥಿನಿ ನೆಲದಿಂದ ಮೇಲೆ ಎಗರಿ ಬಿದ್ದಿದ್ದಾಳೆ.

ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಹರಿದಾಡುತ್ತಿದೆ.

ಸಿರವಾರ ತಾಲೂಕಿನ ವಿದ್ಯಾರ್ಥಿನಿಯರಾದ ಶಿವಮಂಗಳಾ, ಜ್ಯೋತಿ ಹಾಗೂ ಬೈಕ್ ಸವಾರ ಶಿವರಾಜ್ ಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರು ಚಾಲಕ ಪರಾರಿಯಾಗಿದ್ದು, ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next