Advertisement
ಮಂಗಳವಾರ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ಯಲ್ಲಿ ಜರಗಿದ ಜಿ.ಪಂ.ನ 18ನೇ ಸಾಮಾನ್ಯ ಸಭೆಯಲ್ಲಿ ಮಮತಾ ಡಿ.ಎಸ್. ಗಟ್ಟಿ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಎಸ್‌ಟಿಪಿ ಕಡ್ಡಾಯಗೊಳಿಸಲಾಗಿದೆ. ಸದ್ಯ 2 ಗ್ರಾ.ಪಂ.ಗಳು ಎಸ್‌ಟಿಪಿ ರಹಿತ ಕಟ್ಟಡಗಳಿಗೆ ಪರವಾನಿಗೆ ತಡೆಹಿಡಿದಿವೆ. ಪರವಾನಿಗೆ ನವೀಕರಣ ಕೂಡ ಮಾಡುತ್ತಿಲ್ಲ ಎಂದರು.
ಸದಸ್ಯ ಕೊರಗಪ್ಪ ನಾಯ್ಕ, ಜಿಲ್ಲೆ ಯಲ್ಲಿ ಶೌಚಾಲಯ ನಿರ್ಮಾಣ ಪೂರ್ಣಪ್ರಮಾಣದಲ್ಲಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಾಕಿ ಇರುವ 235 ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಇಒ ಹೇಳಿದರು. ಕುಡಿಯುವ ನೀರಿನ ಘಟಕಕ್ಕೆ ಡಿಸೆಂಬರ್ ಗಡುವು
ವಿವಿಧೆಡೆ ಕುಡಿಯುವ ನೀರಿನ ಘಟಕಗಳ ದುರಸ್ತಿ, ಗ್ರಾ.ಪಂ.ಗಳಿಗೆ ವರ್ಗಾವಣೆ ನಡೆದಿಲ್ಲ ಎಂದು ಎಂ.ಎಸ್. ಮಹಮ್ಮದ್, ಕೆ.ಪಿ. ವರ್ಗೀಸ್ ಅಸಮಾಧಾನ ವ್ಯಕ್ತ ಪಡಿಸಿದರು. ಬಾಕಿ ಉಳಿದಿರುವ ಘಟಕಗಳನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿ ಸಬೇಕು. ಇಲ್ಲದಿದ್ದರೆ ಸರಕಾರಕ್ಕೆ ವರದಿ
ಸಲ್ಲಿಸುತ್ತೇನೆ ಎಂದು ಸಿಇಒ ಇಲಾಖಾಧಿ ಕಾರಿಗಳಿಗೆ ಎಚ್ಚರಿಕೆ ನೀಡಿದರು.
Related Articles
ಶಾಲೆಗಳಿಗೆ ದಾನರೂಪದಲ್ಲಿ ದೊರೆತ ಜಾಗಕ್ಕೆ ಶುಲ್ಕ ಪಾವತಿಸಲು ಸಾಧ್ಯವಾ ಗದ ಕಾರಣ ಆರ್‌ಟಿಸಿ ಮಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲದಿರುವುದರಿಂದ ಶಾಲೆಗಳಿಗೆ ಕುಮ್ಕಿ ಜಾಗದ ಆರ್‌ಟಿಸಿ ಕೂಡ ದೊರೆಯುತ್ತಿಲ್ಲ. ಡೀಮ್ಡ್ ಫಾರೆಸ್ಟ್‌ನಿಂದಲೂ ತೊಂದರೆಯಾಗಿದೆ. ಬಡವರು ಮನೆ ಕಟ್ಟುವುದಕ್ಕೂ ಅಸಾಧ್ಯವಾಗಿದೆ. ಸಮಸ್ಯೆ ಪರಿಹರಿಸಲು ಜಂಟಿ ಸರ್ವೆ ನಡೆಸಬೇಕು ಎಂದು ಸದಸ್ಯರು ಹೇಳಿದರು.
Advertisement
ದಾನಪತ್ರ ಉಚಿತವಾಗಿ ಮಾಡಿ ಕೊಡುವ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗುವುದು. ಕುಮ್ಕಿ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗುವುದು ಎಂದು ಸಿಇಒ ತಿಳಿಸಿದರು. ಹರೀಶ್ ಕಂಜಿಪಿಲಿ, ಧರಣೇಂದ್ರ ಕುಮಾರ್, ಸರ್ವೋತ್ತಮ ಗೌಡ, ಅನಿತಾ ಹೇಮನಾಥ ಶೆಟ್ಟಿ, ಯು.ಪಿ. ಇಬ್ರಾಹಿಂ, ಎಸ್.ಎನ್. ಮನ್ಮಥ, ಧನಲಕ್ಷ್ಮೀ ಮೊದಲಾದವರು ವಿವಿಧ ವಿಚಾರಗಳ ಚರ್ಚೆಯಲ್ಲಿ ಪಾಲ್ಗೊಂಡರು.
ಮನೆ ನಿರ್ಮಾಣಕ್ಕೆ 3.60 ಕೋ.ರೂ.ಭಾರೀ ಮಳೆಯಿಂದ ಜಿಲ್ಲೆಯಲ್ಲಿ 629 ಮನೆಗಳಿಗೆ ಹಾನಿಯಾಗಿದೆ. 571 ಮನೆಗಳ ನಿರ್ಮಾಣಕ್ಕೆ ಗ್ರಾ.ಪಂ.ನಿಂದ ಜಿಪಿಎಸ್ ಆಗಿದೆ. 24 ಪೂರ್ಣಗೊಂಡಿವೆ. 22 ಮನೆಗಳ ತಳಪಾಯ ಆಗಿದೆ. ಮನೆ ನಿರ್ಮಾಣಕ್ಕಾಗಿ ಇದುವರೆಗೆ ಬಂಟ್ವಾಳ ತಾಲೂಕಿಗೆ 60 ಲ.ರೂ. ಬೆಳ್ತಂಗಡಿಗೆ 2.1 ಕೋ.ರೂ., ಮಂಗ ಳೂರಿಗೆ 36.25 ಲ.ರೂ., ಪುತ್ತೂರಿಗೆ 30.25 ಲ.ರೂ. ಮತ್ತು ಸುಳ್ಯಕ್ಕೆ 32.5 ಲ.ರೂ. ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ರೇಷನ್‌ಗೆ ಬೆರಳಚ್ಚು ಸಮಸ್ಯೆ
ನ್ಯಾಯಬೆಲೆ ಅಂಗಡಿಗಳು ರವಿ ವಾರವೂ ತೆರೆದಿರಬೇಕು ಎಂಬ ಸೂಚನೆ ಇದ್ದರೂ ಕೆಲವೆಡೆ ತೆರೆದಿರುವುದಿಲ್ಲ. ಹಲವೆಡೆ ಸರ್ವರ್ ಸಮಸ್ಯೆಯಿಂದಾಗಿ ಥಂಬ್ ನೀಡುವುದು ಸಾಧ್ಯವಾಗುತ್ತಿಲ್ಲ ಎಂಬ ದೂರು ವ್ಯಕ್ತವಾಯಿತು. ಮಂಗಳವಾರ ರಜೆ ಮಾಡಿ ರವಿವಾರ ತೆರೆದಿರಲು ಸೂಚಿಸಲಾಗಿದೆ. ಸೂಚನೆ ಪಾಲಿಸದ ಸಹಕಾರಿ ಸಂಘಗಳ ಪಡಿತರ ಮಾರಾಟ ಅನುಮತಿ ತಡೆದು ಬೇರೆ ಖಾಸಗಿ ಸಂಸ್ಥೆ ಅಥವಾ ಗ್ರಾ.ಪಂ.ಗಳಿಗೆ ನೀಡುವ ಬಗ್ಗೆ ನಿರ್ಧರಿ ಸಲಾಗುವುದು’ ಎಂದು ಸಂಬಂಧಿತ ಇಲಾಖಾಧಿಕಾರಿಗಳು ತಿಳಿಸಿದರು.